Sachin Tendulkar: ಕ್ರಿಕೆಟ್ ದಿಗಜ್ಜ `ಸಚಿನ್ ತೆಂಡುಲ್ಕರ್` ಆಸ್ಪತ್ರೆಗೆ ದಾಖಲು!
ಮಾರ್ಚ್ 27ರಂದು ಸಚಿನ್ ತೆಂಡುಲ್ಕರ್‌ಗೆ ಕೋವಿಡ್ 19 ಸೋಂಕು ದೃಢ
ಮುಂಬೈ: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ ಗೆದ್ದು 10 ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದರೆ, ಮತ್ತೊಂದು ಕಡೆಯಿಂದ ಕ್ರಿಕೆಟ್ ದಿಗಜ್ಜ ಸಚಿನ್ ತೆಂಡುಲ್ಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾರ್ಚ್ 27ರಂದು ಸಚಿನ್ ತೆಂಡುಲ್ಕರ್‌ಗೆ ಕೋವಿಡ್ 19(Covid 19) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಸಚಿನ್ ಮನೆಯಲ್ಲಿಯೇ ಐಸೋಲೇಷನ್‌ಗೆ ಒಳಗಾಗಿದ್ದರು. ಇದೀಗ ಸೋಂಕು ತಗುಲಿ ಒಂದು ವಾರ ಕಳೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕ್ರಿಕೆಟ್ ದಿಗ್ಗಜ ತೆಂಡುಲ್ಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
IPL 2021: ಈ ಋತುವಿನಲ್ಲಿ ಒಂದೇ ಒಂದು ಪಂದ್ಯ ಆಡದಿದ್ದರೂ Shreyas Iyerಗೆ ಸಿಗುತ್ತೆ ಸಂಭಾವನೆ
ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿನ್ ತೆಂಡುಲ್ಕರ್(Sachin Tendulkar), ನಿಮ್ಮ ಪ್ರಾರ್ಥನೆ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು. ವೈದ್ಯಕೀಯ ಸಿಬ್ಬಂದಿಗಳ ಸಲಹೆಯ ಮೇರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾನು ಮನೆಗೆ ವಾಪಾಸಾಗುವ ವಿಶ್ವಾಸವಿದೆ. ಎಲ್ಲರೂ ತಮ್ಮ ಆರೋಗ್ಯ ಕಾಳಜಿ ವಹಿಸುವ ಮೂಲಕ ಸುರಕ್ಷಿತವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.
"ಎಂ.ಎಸ್. ಧೋನಿಗಿಂತಲೂ ಉತ್ತಮನಾಗುತ್ತಾನೆ ರಿಷಬ್ ಪಂತ್"
ಸಚಿನ್ ತೆಂಡುಲ್ಕರ್ ಮಹಾರಾಷ್ಟ್ರ ರಾಜಧಾನಿ ಮುಂಬೈ(Mumbai)ನಲ್ಲಿ ವಾಸವಾಗಿದ್ದು, ಎರಡನೇ ಹಂತದಲ್ಲಿ ಅತಿವೇಗವಾಗಿ ಕೋವಿಡ್ ಸ್ಪೋಟಗೊಳ್ಳುತ್ತಿರುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದಿದೆ.
IPL 2021: ಈ ಬಾರಿ ಲೆಗ್ ಸ್ಪಿನ್ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ Amit Mishra
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.