Team India cricketer Manish Pandey Marraige : ಭಾರತೀಯ ಕ್ರಿಕೆಟ್ ತಂಡದ ಆಟಗಾರ  ಮನೀಶ್ ಪಾಂಡೆ ಹಾಗೂ ಚಿತ್ರ ನಟಿ ಆಶ್ರೀತಾ ಶೆಟ್ಟಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.


COMMERCIAL BREAK
SCROLL TO CONTINUE READING

ಆಶ್ರಿತಾ ಶೆಟ್ಟಿ, ಅರ್ಜುನ್ ಕಾಪಿಕಾಡ್ ಅಭಿನಯದ ತೆಲಿಕೆದ ಬೊಳ್ಳಿ ಎಂಬ ತುಳು ಚಿತ್ರದ ಮೂಲಕ ತಮ್ಮ ನಟನಾ ವ್ವೃತ್ತಿಯನ್ನ ಪ್ರಾರಂಭಿಸಿದ್ದರು. 2019 ರಲ್ಲಿ ಇಬ್ಬರು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 


ಇದನ್ನು ಓದಿ :ಪ್ರಧಾನಿ ಮೋದಿ ಉಕ್ರೇನ್ ಯುದ್ದವನ್ನು ನಿಲ್ಲಿಸಬಹುದಾದರೆ ಪೇಪರ್ ಸೋರಿಕೆ ತಡೆಯಲಾಗುತ್ತಿಲ್ಲವೇಕೆ?


ಇದೀಗ ಈ ಜೋಡಿ ದೂರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕ ಮೂಲದ ಕ್ರಿಕೆಟಿಗ ಮನಿಷ್ ಪಾಂಡೆ ದಂಪತಿಗಳ ಮಧ್ಯೆ ಬಿರುಕು ಬಿಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಗೆ ಒಳಪಟ್ಟಿದೆ. ಇದಕ್ಕೆ ಕಾರಣ ಎಂದರೆ ದಂಪತಿಗಳು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್ಗಳನ್ನ ತೆಗೆದು ಹಾಕಿರುವುದು ಚರ್ಚೆಗೆ ಆಸ್ಪದವನ್ನುಂಟು ಮಾಡಿದೆ. 


ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ತಮ್ಮಿಬ್ಬರ ಫೋಟೋಗಳನ್ನು ಡಿಲೀಟ್ ಮಾಡಿದ್ದು, ಪರಸ್ಪರ ದಂಪತಿಗಳು ಬೇರೆಯಾಗಲಿದ್ದಾರೆ ಹಾಗೂ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿವೆ. 


ಇದನ್ನು ಓದಿ :ಗಂಡನಿಗಾಗಿ ಕಿಡ್ನಿ ತ್ಯಾಗ, ಮಕ್ಕಳಿಗಾಗಿ ಸ್ವರ್ವಸ್ವವನ್ನೇ ಧಾರೆಯೆರೆದ ಮೀನಾ ತೂಗುದೀಪ..!


ಮನೀಶ್ ಪಾಂಡೆ ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಐಪಿಎಲ್ ಸಮಯದ ಫೋಟೋಗಳಲ್ಲಿ ಹೆಂಡತಿಯ ಜೊತೆಗಿದ್ದ ಫೋಟೋವನ್ನು ತೆಗೆದು ಹಾಕಿದ್ದಾರೆ ಮತ್ತು ಈ ಕಾರಣದಿಂದ ಪರಸ್ಪರ ಬೇರೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಈ ಕುರಿತಂತೆ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.