ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಹೊರಬಿತ್ತು ಬಿಗ್ ಅಪ್ಡೇಟ್: ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಈ ದಿಗ್ಗಜ ನೇಮಕ!
Team India Bowling Coach on Sri Lanka Tour 2024: ಈ ಪ್ರವಾಸದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಯಾರಾಗಲಿದ್ದಾರೆ ಎಂಬ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಮೂರು ODI ಮತ್ತು ಮೂರು T20 ಪಂದ್ಯಗಳ ಸರಣಿಗಾಗಿ ಸಾಯಿರಾಜ್ ಬಹುತುಲೆ ತಂಡದೊಂದಿಗೆ ಇರುತ್ತಾರೆ.
Team India Bowling Coach on Sri Lanka Tour 2024: ಭಾರತೀಯ ಕ್ರಿಕೆಟ್ ತಂಡವು ಜುಲೈ 27 ರಿಂದ ಶ್ರೀಲಂಕಾ ಪ್ರವಾಸದಲ್ಲಿರಲಿದೆ. ಅಲ್ಲಿ ಮೂರು ಪಂದ್ಯಗಳ T20 ಸರಣಿ ಮತ್ತು ODI ಪಂದ್ಯಗಳು ನಡೆಯಲಿವೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಪಂದ್ಯವಾಗಿರಲಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ಮಾಡಲಾಗಿದ್ದು, ನಾಯಕ ರೋಹಿತ್ ಶರ್ಮಾ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಪ್ರವಾಸದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಯಾರಾಗಲಿದ್ದಾರೆ ಎಂಬ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಮೂರು ODI ಮತ್ತು ಮೂರು T20 ಪಂದ್ಯಗಳ ಸರಣಿಗಾಗಿ ಸಾಯಿರಾಜ್ ಬಹುತುಲೆ ತಂಡದೊಂದಿಗೆ ಇರುತ್ತಾರೆ.
ಸಾಯಿರಾಜ್ ಅವರ ನೇಮಕಾತಿ ಶಾಶ್ವತವಲ್ಲ. ಏಕೆಂದರೆ ಈ ಹುದ್ದೆಗೆ ಗಂಭೀರ್ ಅವರ ಮೊದಲ ಆಯ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಅವರು ವೈಯಕ್ತಿಕ ಕಾರಣಗಳಿಂದ ಶ್ರೀಲಂಕಾ ಸರಣಿಗೆ ಲಭ್ಯರಿಲ್ಲ ಎಂದು ವರದಿಯಾಗಿದೆ. ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಮತ್ತು ವಿಶ್ವಕಪ್ ವೇಳೆ ಬಿಸಿಸಿಐ ಬಿಡುಗಡೆ ಮಾಡಿದ 'ಬೆಸ್ಟ್ ಫೀಲ್ಡರ್ ಆಫ್ ದಿ ಮ್ಯಾಚ್' ವಿಡಿಯೋ ಪೋಸ್ಟ್‌ನ ಪ್ರಮುಖ ಆಕರ್ಷಣೆಯಾಗಿದ್ದ ಟಿ ದಿಲೀಪ್ ಕೂಡ ಸೇರಿದ್ದಾರೆ.
ತನ್ನ ತಂದೆಯ ಅನಾರೋಗ್ಯದ ಕಾರಣ ಮೋರ್ಕೆಲ್ ಪ್ರವಾಸಕ್ಕೆ ಲಭ್ಯವಿಲ್ಲ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಸೆಪ್ಟೆಂಬರ್ʼನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸ್ವದೇಶಿ ಸರಣಿಗೂ ಮುನ್ನ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ
1ನೇ ಟಿ20 - 27 ಜುಲೈ
2ನೇ ಟಿ20 - 28 ಜುಲೈ
3ನೇ ಟಿ20 - 30 ಜುಲೈ
ಭಾರತ-ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ
2 ಆಗಸ್ಟ್ - 1 ನೇ ODI
4 ಆಗಸ್ಟ್ - 2 ನೇ ODI
7 ಆಗಸ್ಟ್ - 3ನೇ ODI
ಭಾರತ ತಂಡದ ತಂಡ
ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ರಣಬೀರ್-ಆಲಿಯಾ ದಾಂಪತ್ಯದಲ್ಲೂ ಬಿರುಕು..!? ಅಂಬಾನಿ ಮಗನ ಮದುವೆಯಲ್ಲೇ ಜಗಳವಾಡಿದ್ದ ರಣಬೀರ್...
ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್ ಸಿಂಗ್ ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.