Rohit Sharma: ಮುಂಬೈ ಇಂಡಿಯನ್ಸ್, ಐಪಿಎಲ್‌’ನಲ್ಲಿ ಒಂದಲ್ಲ ಎರಡಲ್ಲ ಐದು ಬಾರಿ ಪ್ರಶಸ್ತಿ ಗೆದ್ದ ಫ್ರಾಂಚೈಸಿ. ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಯೂರಿದ್ದ ಮುಂಬೈನ ಪಯಣ ಐಪಿಎಲ್ 2024ರಲ್ಲಿ ಕಳಪೆಯಾಗಿತ್ತು. ಇಡೀ ತಂಡದಲ್ಲಿ ಗೊಂದಲದ ವಾತಾವರಣವಿತ್ತು. ಇದರ ಪರಿಣಾಮವಾಗಿ, ತಂಡವು ಐಪಿಎಲ್ 2024 ರಿಂದ ಹೊರಗುಳಿದ ಮೊದಲ ತಂಡವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!


ಈ ಋತುವಿನಲ್ಲಿ ಮುಂಬೈ ಐಪಿಎಲ್‌’ನ ಆರಂಭದಲ್ಲಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್‌’ಗೆ ತಂಡದ ನಾಯಕತ್ವವನ್ನು ನೀಡಿತ್ತು. ಇದೀಗ ಕ್ರಿಕೆಟ್ ಕಮೆಂಟರ್ ಆಕಾಶ್ ಚೋಪ್ರಾ ಮಹತ್ವದ ಹೇಳಿಕೆ ನೀಡುವ ಮೂಲಕ ಶಾಕ್ ನೀಡಿದ್ದಾರೆ.


ರೋಹಿತ್ ಶರ್ಮಾ 2013ರಿಂದ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದರು. ಈ ಮಧ್ಯೆ ತಂಡವನ್ನು 5 ಬಾರಿ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಿತು. ಈ ನಿರ್ಧಾರದ ನಂತರ, ರೋಹಿತ್ ಶರ್ಮಾ ಫ್ರಾಂಚೈಸಿ ತೊರೆಯುತ್ತಾರೆ ಎಂಬ ವದಂತಿಗಳಿದ್ದವು. ಆದರೆ ಈಗ ಆಕಾಶ್ ಚೋಪ್ರಾ ಈ ವದಂತಿಗಳನ್ನು ಖಚಿತಪಡಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌’ನಲ್ಲಿ ಮಾತನಾಡುತ್ತಾ, ರೋಹಿತ್ ಐಪಿಎಲ್ 2025 ರಲ್ಲಿ ಮುಂಬೈ ತಂಡದ ಭಾಗವಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.


ಆಕಾಶ್ ಚೋಪ್ರಾ ಹೇಳಿದ್ದೇನು?


ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌’ನಲ್ಲಿ ಮಾತನಾಡುತ್ತಾ, “ಅವರು ಇಶಾನ್ ಕಿಶನ್ ಅನ್ನು ಉಳಿಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. 15.5 ಕೋಟಿಯಷ್ಟು ಹಣದ ಮೊತ್ತವಾಗಿರುವ ಕಾರಣ ಅವರು ‘ರೈಟ್ ಟು ಮ್ಯಾಚ್’ ಕಾರ್ಡ್ ಬಳಸಬಹುದು. ಇಶಾನ್ ಅವರನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ಭಾವಿಸುವುದಿಲ್ಲ, ರೋಹಿತ್ ಶರ್ಮಾ ತನ್ನ ಕೊನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್‌’ಗಾಗಿ ಆಡಿದ್ದಾರೆ ಎಂಬುದು ನನ್ನ ಅಭಿಪ್ರಾಯ” ಎಂದಿದ್ದಾರೆ


ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!


“ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ರೋಹಿತ್ ಶರ್ಮಾ ಅವರನ್ನು ನೀವು ಮತ್ತೆ ನೋಡುತ್ತೀರಿ ಎಂದು ನಾನು ಭಾವಿಸುವುದಿಲ್ಲ. ಇದು ನನ್ನ ಅನಿಸಿಕೆ ಮಾತ್ರ, ತಪ್ಪಾಗಿರಬಹುದು. ಆದರೆ ಮುಂದಿನ ಋತುವಿನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗಾಗಿ ಆಡುವುದಿಲ್ಲ ಎಂಬುದು ನನ್ನ ನಂಬಿಕೆ” ಎಂದಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.