ನವದೆಹಲಿ:  ಟಿ-20 ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಪುರುಷ  ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ದೀಪಕ್ ಚಹಾರ್ ಗೆ ಹಿರಿಯ ಆಟಗಾರರಿಂದ ಮೆಚ್ಚುಗೆ ಸುರಿಮಳೆ ಹರಿದು ಬಂದಿದೆ. 



COMMERCIAL BREAK
SCROLL TO CONTINUE READING

ಬಾಂಗ್ಲಾದೇಶದ ವಿರುದ್ಧ ನಾಗಪುರದಲ್ಲಿನ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೀಪಕ್ ಚಹಾರ್ 3.2 ಓವರ್ ಗಳಲ್ಲಿ 7 ರನ್ ಗಳನ್ನು ನೀಡಿ ಆರು ವಿಕೆಟ್ ಗಳನ್ನು ಕಬಳಿಸಿದರು.ಈಗ ಚಹಾರ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್ ' ಚಹಾರ್ ರ ಅಸಾಧಾರಣ ಬೌಲಿಂಗ್! ಅವರು ಬಹಳ ಚಾತುರ್ಯದಿಂದ ಬೌಲಿಂಗ್ ಮಾಡಿದರು ಮತ್ತು ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ಗಳನ್ನು ಕಬಳಿಸಿದರು ಎಂದು ಬರೆದುಕೊಂಡಿದ್ದಾರೆ.



ಇನ್ನೊಂದೆಡೆ ವಿವಿಎಸ್ ಲಕ್ಷ್ಮಣ್ ಕೂಡ ದೀಪಕ್ ಚಹಾರ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ 'ಚಹಾರ್ ಟಿ 20 ಬೌಲರ್ ಆಗಿ ವಿಕಸನಗೊಂಡಿರುವ ಬಗೆ ನಿಜಕ್ಕೂ ಪ್ರಭಾವಿತನಾಗಿದ್ದೇನೆ. ಅವರು ಯಾವಾಗಲೂ ಹೊಸ ಚೆಂಡಿನೊಂದಿಗೆ ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಧ್ಯ ಮತ್ತು ಕೊನೆಯ ಓವರ್‌ಗಳಲ್ಲಿ ಬೌಲಿಂಗ್ ಮಾಡಲು ಶ್ರಮಿಸಿದ್ದಾರೆ. ಬೌಲಿಂಗ್ನಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಮತ್ತು  ಅದನ್ನು ಅವರಿಗೆ ಯಾವಾಗ ಬಳಸಬೇಕು ಎಂದು ತಿಳಿದಿದೆ 'ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.ಭಾರತ ತಂಡ 30 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.