Cricket: MS Dhoni ನಿವೃತ್ತಿ ಕುರಿತು ಹರ್ಷಾ ಭೋಗ್ಲೆ ಹೇಳಿದ್ದೇನು?
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ಹೇಳಿಕೆ ನೀಡಿರುವ ಕ್ರಿಕೆಟ್ ವಿಶ್ಲೇಷಕ ಹರ್ಷಾ ಭೋಗ್ಲೆ, ಧೋನಿ ಕಾಲ ಅಂತ್ಯವಾಗಿದ್ದು, ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ-20 ವರ್ಲ್ಡ್ ಕಪ್ ಟೂರ್ನಿಯಲ್ಲಿ ಆಡದೆ ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ನ 13 ನೇ ಆವೃತ್ತಿಯ ಆಯೋಜನೆಯ ಮೇಲೆ ಇದೀಗ ಕೊರೊನಾ ವೈರಸ್ ನ ಕರಿ ನೆರಳು ಬಿದ್ದಿದೆ. ಏತನ್ಮಧ್ಯೆ ಭಾರತೀಯ ಕ್ರಿಕೆಟ ಖ್ಯಾತ ವಿಮರ್ಶಕ ಹರ್ಷಾ ಭೋಗ್ಲೆ ಅವರಿಗೆ ಭಾರತ ತಂಡದ ಮಾಜಿ ನಾಯಕ MS ಧೋನಿ ಅವರ ಕಾಲ ಅಂತ್ಯವಾಗಿದೆ ಎಣಿಸಲಾರಂಭಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಭೋಗ್ಲೆ, "ಧೋನಿ ಈ ವರ್ಷದ ಅಕ್ಟೋಬರ್ ನಲ್ಲಿ ನಡೆಯಬೇಕಿರುವ T-20 ವರ್ಲ್ಸ್ ಕಪ್ ನಲ್ಲಿ ಆಡುವುದು ಅನುಮಾನ ಎಂದು ನನಗನಿಸುತ್ತದೆ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ IPL ಧೋನಿ ಪಾಲಿಗೆ ಉತ್ತಮವಾಗಿ ಮುಕ್ತಾಯಗೊಂಡರು ಕೂಡ, ಟಿ-20 ವರ್ಲ್ಡ್ ಕಪ್ ಇದರ ಮುಂದಿನ ಹಂತವಾಗಿದೆ ಎಂದಿದ್ದಾರೆ.
ಇದೇ ತಿಂಗಳ 29 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿ ಆರಂಭಗೊಳ್ಳಬೇಕಿತ್ತು. ಆದರೆ, ದೇಶಾದ್ಯಂತ ಪಸರಿಸಿರುವ ಕೊರೊನಾ ವೈರಸ್ ನ ಪ್ರಕೋಪದ ಹಿನ್ನೆಲೆ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ICC ಏಕದಿನ ವರ್ಲ್ಡ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಂತಿಮವಾಗಿ ಮೈದಾನಕ್ಕೆ ಇಳಿದಿದ್ದರು. ಬಳಿಕ ಅವರು ವಿಶ್ರಾಂತಿಯ ಹೆಸರಿನಲ್ಲಿ ಟೀಂ ನಿಂದ ಹೊರಗುಳಿದಿದ್ದಾರೆ. ಸದ್ಯ ಧೋನಿ IPL ಟೂರ್ನಿಗಾಗಿ ಅಭ್ಯಾಸ ನಡೆಸುತ್ತಿದ್ದರು. ಆದರೆ, ಕೊವಿಡ್-19ನಿಂದ ಪಸರಿಸಿದ ಭೀತಿಯ ಹಿನ್ನೆಲೆ ಅವರು ರಾಂಚಿಗೆ ಮರಳಿದ್ದಾರೆ. IPL 2020 ನಲ್ಲಿ ಧೋನಿ ನೀಡುವ ಪ್ರದರ್ಶನ ಅವರು ಮುಂದಿನ ಟಿ- 20 ವರ್ಲ್ಡ್ ಕಪ್ ಟೂರ್ನಿಯಲ್ಲಿ ಆದಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ.