Virender Sehwag and wife Aarti fight: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಬಗ್ಗೆ ಮಾಧ್ಯಮಗಳಲ್ಲಿ ಶಾಕಿಂಗ್‌ ಸುದ್ದಿಗಳು ಹರಿದಾಡುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಸೆಹ್ವಾಗ್‌ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಇದೇ ಕಾರಣದಿಂದ 20 ವರ್ಷಗಳ ದಾಂಪತ್ಯ ಕೊನೆಗೊಳಿಸಲು ದಂಪತಿಗಳು ನಿರ್ಧರಿಸಿದ್ದಾರೆ. ಈ ಸುದ್ದಿಯನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಇಬ್ಬರೂ Instagramನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ; ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!!


ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ಕಳೆದ 20 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಅದರಲ್ಲಿ ಹಿರಿಯವನ ಹೆಸರು ಆರ್ಯವೀರ್, ಜನಿಸಿದ್ದು 2007 ರಲ್ಲಿ ಮತ್ತು ಕಿರಿಯವನ ಹೆಸರು ವೇದಾಂತ್. ಇವರು 2010ರಲ್ಲಿ ಜನಿಸಿದರು.


ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಏಪ್ರಿಲ್ 2004 ರಲ್ಲಿ ವಿವಾಹವಾದರು. 2024ರ ದೀಪಾವಳಿಯ ಸಂದರ್ಭದಲ್ಲಿ ಸೆಹ್ವಾಗ್ ತಮ್ಮ ಮಗ ಮತ್ತು ಇತರ ಕುಟುಂಬ ಸದಸ್ಯರ ಚಿತ್ರಗಳನ್ನು ಪೋಸ್ಟ್ ಮಾಡಿದ್ದರಾದರೂ, ತಮ್ಮ ಪತ್ನಿಯ ಫೋಟೋಗಳನ್ನು ಪೋಸ್ಟ್ ಮಾಡಿರಲಿಲ್ಲ. ಇನ್ನು ಕೆಲವೊಂದು ಮೂಲಗಳ ಮಾಹಿತಿ ಪ್ರಕಾರ, ಇಬ್ಬರೂ ಹಲವಾರು ತಿಂಗಳುಗಳಿಂದ ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.


ಇದನ್ನೂ ಓದಿ: ಕರುನಾಡ ಮನೆಮಗ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಿರಿ ಮಗಳು ಧೃತಿ ವಿದೇಶದಲ್ಲಿ ಓದುತ್ತಿರುವ ಕಾಲೇಜು ಯಾವುದು? ಅಲ್ಲಿನ ಫೀಸ್‌ ಎಷ್ಟು ಗೊತ್ತೇ?


ಇನ್ನು ಇದೇ ವದಂತಿ ಮಧ್ಯೆ ಸೆಹ್ವಾಗ್ ಹಾಗೂ ಆರತಿ ಇಬ್ಬರು ಕಾರಿನಲ್ಲಿ ಕುಳಿತು ಜಗಳವಾಡಿದಂತೆ ಕಾಣಿಸುತ್ತಿದೆ. ವಿಡಿಯೋದಲ್ಲಿ ಸೆಹ್ವಾಗ್​ ಮೊಬೈಲ್‌​ನಲ್ಲಿ ಯಾರದೋ ಜೊತೆ ಮಾತನಾಡುತ್ತಿರುವಾಗ ಆರತಿ ಕೋಪದಿಂದ ಹಾಗೂ ಜೋರಾಗಿ ಕಿರುಚಾಡಿರುವುದು ಕಾಣಿಸುತ್ತಿದೆ. ಆದ್ರೆ ಅದು ಏನು ಎಂಬುದು ಆಡಿಯೋದಲ್ಲಿ ಕೇಳಿ ಬಂದಿಲ್ಲ.


 

 

 

 



 

 

 

 

 

 

 

 

 

 

 

A post shared by cricket_ki_duniya (@duniya_cricket8055)


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ