ಸೌರವ್ ಗಂಗೂಲಿ ನೀಡಿದಷ್ಟು ಸಪೋರ್ಟ್ ಧೋನಿ, ಕೊಹ್ಲಿ ನೀಡಲಿಲ್ಲ: ಯುವರಾಜ್
ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತನ್ನ ಏಕದಿನ ಕರಿಯರನ್ ಒಟ್ಟು 304 ಪಂದ್ಯಗಳ ಪೈಕಿ 11೦ ಪಂದ್ಯಗಳನ್ನು ಸೌರವ್ ಗಂಗೂಲಿ ಹಾಗೂ 104 ಪಂದ್ಯಗಳನ್ನು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಆಡಿದ್ದಾರೆ.
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದಷ್ಟು ಸಪೋರ್ಟ್ ಟೀಂ ಇಂಡಿಯಾದ ಇನ್ನೋರ್ವ ಮಾಜಿ ನಾಯಕ ಎಂಎಸ್ ಧೋನಿ ಆಗಲಿ ಅಥವಾ ಹಾಲಿ ನಾಯಕ ವಿರಾಟ್ ಕೊಹ್ಲಿ ಆಗಲಿ ನನಗೆ ನೀಡಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ. ಚಾಂಪಿಯನ್ ಟ್ರೋಫಿಯ ಪಂದ್ಯವೊಂದರ ವೇಳೆ ಸೌರವ್ ಗಂಗೂಲಿ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಯುವರಾಜ್ ಸಿಂಗ್, ಗಂಗೂಲಿ, ಧೋನಿ, ಕೊಹ್ಲಿ ಅವರನ್ನು ಹೊರತುಪಡಿಸಿ ಗೌತಮ್ ಗಂಭೀರ್ ಹಾಗೂ ರಾಹುಲ್ ದ್ರಾವಿಡ್ ಅವರ ನಾಯಕತ್ವದ ಅಡಿ ಕೂಡ ಕ್ರಿಕೆಟ್ ಆಡಿದ್ದಾರೆ.
'Sports Star' ಮ್ಯಾಗಜೀನ್ ಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಯುವರಾಜ್, "ನಾನು ಸೌರವ್ ಗಂಗೂಲಿ ಅವರ ನಾಯಕತ್ವದಡಿ ಆಟವಾಡಿದ್ದೇನೆ ಹಾಗೂ ಅವರಿಂದ ನನಗೆ ತುಂಬಾ ಬೆಂಬಲ ಸಿಕ್ಕಿದೆ. ಬಳಿಕ ನಾನು ಮಾಹಿ ನಾಯಕತ್ವದಡಿ ಆಟವಾಡಿದ್ದೇನೆ ಆದರೆ, ಮಾಹಿ ಹಾಗೂ ಸೌರವ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತುಂಬಾ ಕಠಿಣ. ಸೌರವ್ ನಾಯಕತ್ವದಡಿ ಆಡಿರುವ ಹಲವಾರು ನೆನಪುಗಳು ನನ್ನ ಬಳಿ ಇವೆ. ಏಕೆಂದರೆ ಅವರು ನನ್ನನ್ನು ತುಂಬಾ ಸಪೋರ್ಟ್ ಮಾಡಿದ್ದಾರೆ. ಮಾಹಿ ಆಗಲಿ ಅಥವಾ ವಿರಾಟ್ ಆಗಲಿ ಅವರಿಂದ ನನಗೆ ಆ ರೀತಿಯ ಸಪೋರ್ಟ್ ಎಂದೂ ಸಿಗಲಿಲ್ಲ" ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ಗೆ ಒಳ್ಳೆಯ ವ್ಯಕ್ತಿಯ ಅವಶ್ಯಕತೆ ಇದೆ
ಈ ಕುರಿತು ಮಾತನಾಡಿರುವ ಯುವರಾಜ್ ಸಧ್ಯ ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ವ್ಯಕ್ತಿಯೊಬ್ಬನ ಅವಶ್ಯಕತೆ ಇದ್ದು, ಕ್ರೀಡಾಂಗಣದ ಹೊರಗಡೆ ಕ್ರೀಡಾಳುಗಳ ಸಮಸ್ಯೆಯ ಕುರಿತು ಮಾತನಾಡಿಸಬೇಕು. ಇದರಿಂದ ಮೈದಾನದಲ್ಲಿ ಆಟಗಾರರ ಪ್ರದರ್ಶನ ಉತ್ತಮವಾಗಲಿದೆ ಎಂದು ಯುವರಾಜ್ ಹೇಳಿದ್ದಾರೆ.
ವರ್ಷ 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ವಿರಾಟ್, ಟೀಂ ಕೊಹ್ಲಿಗೆ ಪ್ಯಾಡಿ ಅಪ್ಟಾನ್ ನಂತಹ ವ್ಯಕ್ತಿಯ ಅವಶ್ಯಕತೆ ಇದ್ದು, ಅವರಂತೆ ಕ್ರೀಡಾಳುಗಳ ಜೊತೆಗೆ ಕ್ರೀಡಾಂಗಣದ ಹೊರಗಡೆ ಅವರ ಜೀವನ ಮತ್ತು ಕ್ರೀಡಾಂಗಣದ ಹೊರಗಡೆ ಬರುವ ಸಮಸ್ಯೆಗಳ ಕುರಿತು ಮಾತನಾಡುವ ಅವಶ್ಯಕತೆ ಇದೆ ಎಂದು ಯುವ್ವಿ ಹೇಳಿದ್ದಾರೆ. ವಿಶ್ವ ಕಪ್ ವಿಜೇತ ತಂದದ ಕೋಚ್ ಆಗಿರುವ ಗ್ಯಾರಿ ಕರ್ಸ್ಟನ್ ಅವರ ಅವಧಿಯಲ್ಲಿ ಪ್ಯಾಡಿ ತಂಡದ ಸ್ಟ್ರಾಂಡ್ ಅಂಡ್ ಕಂಡಿಷನಿಂಗ್ ಕೋಚ್ ಆಗಿ ಕಾರ್ಯನಿರ್ವನಿಸಿದ್ದಾರೆ.
ಮೈದಾನದ ಹೊರಗಡೆ ಇರುವ ಸಮಸ್ಯೆ ಹಾಗೂ ಜೀವನದ ಕುರಿತು ಮಾತನಾಡುವ ವ್ಯಕ್ತಿಯ ಅವಶ್ಯಕತೆ ಸದ್ಯ ಭಾರೆತೀಯ ಕ್ರಿಕೆಟ್ ತಂಡಕ್ಕಿದೆ ಎಂದು ಯುವರಾಜ್ ಹೇಳಿದ್ದಾರೆ. ಮೈದಾನದ ಹೊರಗಡೆ ಇರುವ ಸಮಸ್ಯೆಗಳು ಮೈದಾನದ ಮೇಲಿನ ಪ್ರದರ್ಶನವನ್ನು ಪ್ರಭಾವಿತಗೊಳಿಸುತ್ತವೆ. ತಂಡದ ಆಟಗಾರರಿಗೆ ವೈಯಕ್ತಿಕ ವಿಷಯಗಳನ್ನು ಪರಿಹರಿಸಿ, ದಾರಿ ತೋರುವ ಮನೋವೈಜ್ಞಾನಿಕನ ಅಗತ್ಯತೆ ಇದೆ ಎಂದು ಯುವಿ ಹೇಳಿದ್ದಾರೆ.