IPL 2024, Ben Stokes: ODI ವಿಶ್ವಕಪ್ 2023 ಮುಗಿದಿದೆ. ಈಗ IPL ನ ಮುಂಬರುವ ಋತುವಿನ ಬಗ್ಗೆ ಚರ್ಚೆಯು ಫುಲ್ ಸ್ವಿಂಗ್‌’ನಲ್ಲಿ ಪ್ರಾರಂಭಗೊಂಡಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಬಿಗ್ ಶಾಕ್ ನೀಡುವಂತಹ ಸುದ್ದಿಯೊಂದು ಬಂದಿದೆ. ಐಪಿಎಲ್ 2024 ರಿಂದ ತಂಡದ ಪ್ರಮುಖ ಆಟಗಾರ ಮತ್ತು ಅನುಭವಿ ಆಲ್ ರೌಂಡರ್ ಹೊರಗುಳಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ದಕ್ಷಿಣ ಭಾರತದ ಈ ಭಾಗಗಳಲ್ಲಿ ಮುಂದಿನ 5 ದಿನ ಕುಂಭದ್ರೋಣ ಮಳೆ! ಗುಡುಗು ಸಹಿತ ಬಲವಾದ ಗಾಳಿ ಬೀಸುವ ಮುನ್ನೆಚ್ಚರಿಕೆ


ಫ್ರಾಂಚೈಸಿಯು 16.25 ಕೋಟಿ ರೂಪಾಯಿಗಳ ಬೃಹತ್ ಬೆಲೆಗೆ ಬೆನ್ ಸ್ಟೋಕ್ಸ್ ಅವರನ್ನು ಈ ಹಿಂದೆ ತಂಡಕ್ಕೆ ಸೇರಿಸಿತ್ತು. ಆದರೆ ಕಳೆದ ಋತುವಿನಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿ ಉಳಿದ ಸಮಯವನ್ನು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯದೆ ಕಾಲ ಕಳೆದಿದ್ದ ಸ್ಟೋಕ್ಸ್ ಇದೀಗ ಮುಂಬರುವ ಋತುವಿನಿಂದಲೂ ಹೊರಗುಳಿದಿದ್ದಾರೆ.


ಇದನ್ನೂ ಓದಿ: ದ್ರಾವಿಡ್ ಬಳಿಕ ಭಾರತದ ಮುಖ್ಯ ಕೋಚ್ ಯಾರಾಗ್ತಾರೆ? ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಈ ದಿಗ್ಗಜನ ಹೆಸರು


ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಟಾರ್ ಆಲ್ ರೌಂಡರ್ ಬಗ್ಗೆ ಮಾಹಿತಿ ನೀಡಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಕೆಲಸದ ಹೊರೆ ಮತ್ತು ಫಿಟ್ನೆಸ್ ಕಾರಣದಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ 32 ವರ್ಷದ ಸ್ಟೋಕ್ಸ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ ಎಂಬ ವರದಿಗಳು ಹರಿದಾಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ