Junaid Khan Reply on India's Greatest Batter: ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಜುನೈದ್ ಖಾನ್ ಬಳಿ, ಭಾರತದ ಶ್ರೇಷ್ಠ ಬ್ಯಾಟರ್ ಯಾರು? ವಿರಾಟ್ ಕೊಹ್ಲಿ ಅಥವಾ ಸಚಿನ್ ತೆಂಡೂಲ್ಕರ್? ಎಂದು ಪ್ರಶ್ನೆ ಕೇಳಲಾಯಿತು. ಇದ್ಕೆ ಅವರು ಅಚ್ಚರಿಯ ಉತ್ತರವನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡಿದ್ದೆ, ಆದ್ರೆ ಗಂಭೀರ್ ಯಾವಾಗಲೂ ನನಗೆ… ನಟಿಯ ಹೇಳಿಕೆ


ವಿರಾಟ್ ಕೊಹ್ಲಿ ಪ್ರಸ್ತುತ ಕಾಲದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು. ಅದರಲ್ಲಿ ಯಾವುದೇ ಸಂಶಯವಿಲ್ಲ. ಸಚಿನ್ ತೆಂಡೂಲ್ಕರ್ ಭಾರತ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು.


ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ ಯಾರೆಂದು ಕೇಳಿದರೆ ಮೊದಲಿಗೆ ತೆಂಡೂಲ್ಕರ್ ಹೆಸರು, ಆ ಬಳಿಕ ಕೊಹ್ಲಿ ಹೆಸರನ್ನು ಹೇಳುತ್ತಾರೆ. ಆದರೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಜುನೈದ್ ಖಾನ್ ಇವರಿಬ್ಬರೂ ಅಲ್ಲ, ಬೇರೊಬ್ಬ ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ.


ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಡುವೆ ಉತ್ತಮ ಬ್ಯಾಟ್ಸ್‌ಮನ್ ಯಾರು ಎಂದು ಕೇಳಿದಾಗ, ಜುನೈದ್ “ನಾನು ರೋಹಿತ್ ಶರ್ಮಾ ಎಂದು ಹೇಳಲಿದ್ದೇನೆ. ಅವರು ಎಲ್ಲಾ ರೀತಿಯ ಬ್ಯಾಟಿಂಗ್ ಮಾಡುವ ಸಾಮಾರ್ಥ್ಯ ಹೊಂದಿದ್ದಾರೆ. ವಿರಾಟ್ ಒಬ್ಬ ಶ್ರೇಷ್ಠ ಆಟಗಾರ, ಸಚಿನ್ ವಿಭಿನ್ನ ಯುಗದಲ್ಲಿ ಬ್ಯಾಟ್ ಮಾಡಿದ್ದಾರೆ. ಒಂದು ವೇಳೆ ಈಗ ಬ್ಯಾಟಿಂಗ್ ಮಾಡುತ್ತಿದ್ದರೆ, 100ಕ್ಕೂ ಹೆಚ್ಚು ಶತಕಗಳನ್ನು ಗಳಿಸಿದ್ದರು. 264 ರನ್‌’ಗಳ ಅದ್ಭುತ ಇನ್ನಿಂಗ್ಸ್‌’ನಿಂದ ರೋಹಿತ್‌’ನನ್ನು ಎಲ್ಲರೂ 'ದಿ ಹಿಟ್‌ಮ್ಯಾನ್' ಎಂದು ಕರೆಯುತ್ತಾರೆ. ಅವರು ಏಕದಿನ ಪಂದ್ಯಗಳಲ್ಲಿ ಹಲವು ದ್ವಿಶತಕಗಳನ್ನು ಗಳಿಸಿದ್ದಾರೆ. ಅವರಂತೆ ಒಂದಕ್ಕಿಂತ ಹೆಚ್ಚು ಬಾರಿ ಈ ಸಾಧನೆ ಮಾಡಿದ ಆಟಗಾರರು ಬಹಳ ಕಡಿಮೆ. ಅವರು ಗರಿಷ್ಠ ಸಂಖ್ಯೆಯ ಸಿಕ್ಸರ್‌’ಗಳನ್ನು ಸಹ ಹೊಡೆದಿದ್ದಾರೆ. ಹಾಗಾಗಿ ನಾನು ರೋಹಿತ್ ಹೆಸರನ್ನು ತೆಗೆದುಕೊಳ್ಳುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: ಮದುವೆಯಾಗಿ ಮಕ್ಕಳಿದ್ರೂ ನಟಿಯ ಜೊತೆ ಅಫೇರ್ ಇಟ್ಟುಕೊಂಡಿದ್ದ ಖ್ಯಾತ ನಟ!


ರೋಹಿತ್ ಇತ್ತೀಚೆಗೆ 2023ರ ವಿಶ್ವಕಪ್‌’ನಲ್ಲಿ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದರು. 11 ಪಂದ್ಯಗಳಲ್ಲಿ 54.27 ಸರಾಸರಿ ಮತ್ತು 125.94 ಸ್ಟ್ರೈಕ್ ರೇಟ್‌’ನಲ್ಲಿ 597 ರನ್ ಕಲೆಹಾಕಿದ್ದರು. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿದ್ದವು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ