Controversy in Sri Lanka Cricket: ಸದ್ಯ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯಲ್ಲಿ ಎಲ್ಲವೂ ಚಿತ್ರವಿಚಿತ್ರವಾಗುತ್ತಿದೆ. ಏಕದಿನ ವಿಶ್ವಕಪ್’ನಲ್ಲಿ ತಂಡ ತೋರಿದ ಕಳಪೆ ಪ್ರದರ್ಶನ ಬಳಿಕ ಈ ಘಟನೆಗಳೆಲ್ಲವೂ ಮುನ್ನಲೆಗೆ ಬರುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಟಿ ಪೂಜಾ ಗಾಂಧಿ ಮದುವೆ: ಕನ್ನಡ ಕಲಿಸಿದ ಗುರುವನ್ನೇ ವರಿಸಲಿದ್ದಾರೆ ಮುಂಗಾರು ಮಳೆ ‘ಬೆಡಗಿ’


ಇವೆಲ್ಲದರ ನಡುವೆ “ಕ್ರಿಕೆಟ್ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂಬ ಕಾರಣದಿಂದ ನನ್ನ ಜೀವಕ್ಕೆ ಅಪಾಯವಿದೆ” ಎಂದು ದೇಶದ ಕ್ರೀಡಾ ಸಚಿವ ರೋಷನ್ ರಣಸಿಂಘೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ತನಗೆ ಏನಾದರೂ ಸಂಭವಿಸಿದರೆ ಅದಕ್ಕೆ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಅವರ ಸಿಬ್ಬಂದಿ ಮುಖ್ಯಸ್ಥರು ಹೊಣೆಯಾಗುತ್ತಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಧ್ಯಕ್ಷ ವಿಕ್ರಮಸಿಂಘೆ, ರೋಷನ್ ರಣಸಿಂಘೆ ಅವರನ್ನು ವಜಾಗೊಳಿಸಿದ್ದಾರೆ.


ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಸೋಮವಾರ ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಸಾಪ್ತಾಹಿಕ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಲು ರಣಸಿಂಘೆ ಆಗಮಿಸುತ್ತಿದ್ದಂತೆ, ಅಧ್ಯಕ್ಷ ವಿಕ್ರಮಸಿಂಘೆ ಸಹಿ ಮಾಡಿದ ವಜಾ ಪತ್ರವನ್ನು ಅವರಿಗೆ ನೀಡಲಾಯಿತು. ತಕ್ಷಣವೇ ಜಾರಿಗೆ ಬರುವಂತೆ ರಣಸಿಂಘೆ ಅವರನ್ನು ಕ್ರೀಡಾ ಮತ್ತು ಯುವಜನ ವ್ಯವಹಾರ ಹಾಗೂ ನೀರಾವರಿ ಸಚಿವಾಲಯದಿಂದ ತೆಗೆದುಹಾಕಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಶ್ರೀಲಂಕಾ ಕ್ರಿಕೆಟ್ ಆಡಳಿತವನ್ನು ಮುನ್ನಡೆಸಲು ಮಧ್ಯಂತರ ಸಮಿತಿಯನ್ನು ನೇಮಿಸುವ ಅವರ ನಡೆಯನ್ನು ಉಲ್ಲೇಖಿಸಿದ ರಣಸಿಂಘೆ, “ಕ್ರಿಕೆಟ್‌’ನಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ನನಗೆ ಈ ಬಹುಮಾನ ಸಿಕ್ಕಿದೆಯೇ? ಕೇವಲ ಭ್ರಷ್ಟಾಚಾರವನ್ನು ಬಯಲಿಗೆಳೆದಿದಕ್ಕೆ ಅಧ್ಯಕ್ಷರು ರಾಜಕೀಯ ಸೇಡು ತೀರಿಸಿಕೊಳ್ಳುವುದು ಏಕೆ” ಎಂದು ಪ್ರಶ್ನಿಸಿದ್ದಾರೆ.


'ನನ್ನ ಕೊಲೆಯಾಗಬಹುದು..'


ಸುದ್ದಿ ವೆಬ್‌ಸೈಟ್ 'Newswire.lk' ಜೊತೆ ಮಾತನಾಡಿದ ರಣಸಿಂಘೆ, “ನನ್ನ ಜೀವಕ್ಕೆ ಅಪಾಯವಿದೆ, ನಾನು ಇಂದು ಅಥವಾ ನಾಳೆ ಕೊಲೆಯಾಗಬಹುದು. ನನಗೆ ಏನಾದರೂ ಸಂಭವಿಸಿದರೆ, ಅಧ್ಯಕ್ಷ ಮತ್ತು ಅವರ ಸಲಹೆಗಾರ ಸಾಗಲ ರತ್ನಾಯಕೆ (ಅಧ್ಯಕ್ಷೀಯ ಸಿಬ್ಬಂದಿ ಮುಖ್ಯಸ್ಥ) ಹೊಣೆಯಾಗುತ್ತಾರೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹಾಡು ಹಾಡಿದ ಶಮಿ ಮಾಜಿ ಪತ್ನಿ: ಯಾರಿಗೆ ಡೆಡಿಕೇಟ್ ಮಾಡ್ತೀರಾ ಎಂದಿದಕ್ಕೆ ಕೊಟ್ಟ ಉತ್ತರವೇನು ಗೊತ್ತಾ


ರಣಸಿಂಗ್ ಅವರು ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಆಡಳಿತ ಮತ್ತು ಮಾಜಿ ವಿಶ್ವ ಚಾಂಪಿಯನ್ ನಾಯಕ ಅರ್ಜುನ ರಣತುಂಗಾ ಅವರನ್ನು ವಜಾಗೊಳಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ