Atlee Animation Video: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಈ ಅದ್ಧೂರಿ ವಿವಾಹದಲ್ಲಿ ಅನೇಕ ರಾಜಕಾರಣಿಗಳು, ನಟರು ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿವಾಹ ಸಮಾರಂಭ ಮುಗಿದು ದಿನಗಳು ಕಳೆದರು ಈ ಅದ್ಧೂರಿ ವಿವಾಹದ ಬಗ್ಗೆ ಹಲವು ಅಪ್‌ಡೇಟ್‌ಗಳು ಹೊರ ಬರುತ್ತಿವೆ. 


COMMERCIAL BREAK
SCROLL TO CONTINUE READING

'ಜವಾನ್' ನಿರ್ದೇಶಕ ಅಟ್ಲಿ ಅವರು ಅಂಬಾನಿಯವರ ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗಯಾಗಿದ್ದರು. ಇದೀಗ ಈ ಅದ್ಧೂರಿ ವಿವಾಹಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗಾಗಿ ಅಟ್ಲಿ 10 ನಿಮಿಷಗಳ ವಿಶೇಷ ಅನಿಮೇಟೆಡ್ ಚಿತ್ರ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರವನ್ನು ಶುಭ ಆಶೀರ್ವಾದ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು ಎಂದು ವರದಿಯಾಗಿದೆ.


ಅಂಬಾನಿ ಸಂಭ್ರಮಾಚರಣೆಯ ಭಾಗವಾಗಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ತಮ್ಮ ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ ಎಂದು ಹೇಳಿದ್ದಾರೆ.  


ಇದನ್ನೂ ಓದಿ: ಬಾಲಿವುಡ್‌ಗೆ ಎಂಟ್ರಿ ಕೊಟ್ರಾ ಸಾರಾ ತೆಂಡುಲ್ಕರ್‌..? ಬಿ-ಟೌನ್‌ನಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ...


ಅಲಹಬಾಡಿಯಾ ಅವರು ಅಮೇರಿಕನ್ ಹಾಸ್ಯನಟ ಮತ್ತು ನಟ ಆಕಾಶ್ ಸಿಂಗ್ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಅಂಬಾನಿ ಅವರ ಮದುವೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಹತ್ತು ನಿಮಿಷದ ವಿಶೇಷ ವಿಡಿಯೋದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. 


ಈ ಕುರಿತು ಮಾತನಾಡಿದ ರಣವೀರ್‌ "ಮದುವೆಯ ಎರಡನೇ ದಿನ, ಅಟ್ಲಿ ಮದುವೆಯ ಅತಿಥಿಗಳಿಗಾಗಿ 10 ನಿಮಿಷಗಳ ಚಲನಚಿತ್ರವನ್ನು ಬಿಡುಗಡೆ ಮಾಡಿದರು, ಅಟ್ಲಿ ಅವರೇ ಇದನ್ನು ನಿರ್ದೇಶಿಸಿದ್ದು, ಇದೊಂದು ಅನಿಮೇಟೆಡ್ ಚಿತ್ರವಾಗಿದೆ. ಅಮಿತಾಬ್ ಬಚ್ಚನ್ ಈ ಕಿರುಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಅದು ಸೂಕ್ಷ್ಮ ಚಲನಚಿತ್ರವಾಗಿತ್ತು" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.