ಟೀಂ ಇಂಡಿಯಾ ಗೆದ್ದರೂ ಕಳಪೆ ದಾಖಲೆ ಬರೆದ ರಿಂಕು ಸಿಂಗ್: ಟಿ20 ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲು
IND vs AUS 5th T20: ರಿಂಕು ಸಿಂಗ್ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಒಂದಂಕಿ ರನ್ ಗಳಿಸಿ ಔಟಾಗಿರಲಿಲ್ಲ. ಇದುವರೆಗೆ ಆಡಿರುವ 10 ಟಿ20 ಪಂದ್ಯಗಳಲ್ಲಿ ಅವರು ಒಂದೇ ಅಂಕೆಯಲ್ಲಿ ಅಂದರೆ 6 ರನ್’ಗಳಲ್ಲಿ ಔಟಾಗಿರುವುದು ಇದೇ ಮೊದಲು.
IND vs AUS 5th T20: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ T20 ಸರಣಿಯ ಕೊನೆಯ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ 53 ರನ್’ಗಳ ಭರ್ಜರಿ ಬ್ಯಾಟಿಂಗ್ ಮಾಡಿದರು.
ಆದರೆ ಸರಣಿಯ ಮೊದಲ ಹಾಗೂ ನಾಲ್ಕನೇ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ರಿಂಕು ಸಿಂಗ್’ಗೆ ಈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಕೇವಲ 6 ರನ್ ಗಳಿಸಿದ್ದ ಅವರು ಬಿಗ್ ಶಾಟ್ ಹೊಡೆಯಲು ಯತ್ನಿಸುತ್ತಿದ್ದಾಗ ಸ್ಪಿನ್ನರ್ ತನ್ವೀರ್ ಸಂಘದ ಎಸೆತದಲ್ಲಿ ಟಿಮ್ ಡೇವಿಡ್’ಗೆ ಕ್ಯಾಚಿತ್ತು ಔಟಾದರು.
ಇದನ್ನೂ ಓದಿ: ವಾರದಲ್ಲಿ 3 ಬಾರಿ ಪೇರಳೆ ಜ್ಯೂಸ್ ಕುಡಿಯಿರಿ: ಈ ಕಾಯಿಲೆಗಳಿಂದ ಪಡೆಯಿರಿ ಶಾಶ್ವತ ಮುಕ್ತಿ
ರಿಂಕು ಸಿಂಗ್ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಒಂದಂಕಿ ರನ್ ಗಳಿಸಿ ಔಟಾಗಿರಲಿಲ್ಲ. ಇದುವರೆಗೆ ಆಡಿರುವ 10 ಟಿ20 ಪಂದ್ಯಗಳಲ್ಲಿ ಅವರು ಒಂದೇ ಅಂಕೆಯಲ್ಲಿ ಅಂದರೆ 6 ರನ್’ಗಳಲ್ಲಿ ಔಟಾಗಿರುವುದು ಇದೇ ಮೊದಲು.
ರಿಂಕು ಇಲ್ಲಿಯವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ 6 ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲಿ ಅವರ ಸ್ಕೋರ್ 38, 37*, 22*, 31*, 46 ಮತ್ತು 6 ರನ್. ನಾಲ್ಕು ಬಾರಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಅವರು 46 ರನ್’ಗಳ ಅಮೋಘ ಇನ್ನಿಂಗ್ಸ್ ಆಡಿದ್ದರು. ಆದರೆ, ಅರ್ಧಶತಕ ಗಳಿಸುವುದು ಜಸ್ಟ್ ಮಿಸ್ ಆಗಿತ್ತು.
ಇದನ್ನೂ ಓದಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್’ಗಢದಲ್ಲಿ ಕಾಂಗ್ರೆಸ್ ಹೀನಾಯ ಸೋಲು: ರಾಹುಲ್ ಗಾಂಧಿ ಹೇಳಿದ್ದೇನು?
ಆಸ್ಟ್ರೇಲಿಯಾ ವಿರುದ್ಧದ ಈ ಟಿ20 ಸರಣಿಯಲ್ಲಿ ರಿಂಕು ಸಿಂಗ್ 52.50 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 5 ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 105 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ ಕೂಡ 175.00 ಆಗಿತ್ತು. ಈ ಮಾದರಿಯಲ್ಲಿ ರಿಂಕು ಅವರ ಒಟ್ಟಾರೆ ಅಂಕಿಅಂಶಗಳನ್ನು ನೋಡಿದರೆ, ಅವರು ಇಲ್ಲಿಯವರೆಗೆ ಆಡಿದ 10 ಪಂದ್ಯಗಳಲ್ಲಿ 60.00 ಸರಾಸರಿ ಮತ್ತು 187.50 ಸ್ಟ್ರೈಕ್ ರೇಟ್‌ನೊಂದಿಗೆ 180 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 17 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.