Shreyas Iyer Comeback: ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರು ಪಂದ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಕಂಡಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಮುಗ್ಗರಿಸಿದೆ. ಈ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾ ತಂಡ 5 ವಿಕೆಟ್‌ಗಳ ಜನ ಸಾಧಿಸಿತ್ತು. ಇದೀಗ ನಾಳೆ (01 ಡಿಸೆಂಬರ್ 2023)ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದಿದೆ. 


COMMERCIAL BREAK
SCROLL TO CONTINUE READING

ಟೀಂ ಇಂಡಿಯಾಗೆ ಮಾರಣಾಂತಿಕ ಬ್ಯಾಟ್ಸ್‌ಮನ್ ಪುನರಾಗಮನ!
ಟೀಂ ಇಂಡಿಯಾದ ಶಕ್ತಿಶಾಲಿ ಬ್ಯಾಟ್ಸ್‌ಮನ್ ಎಂದೇ ಪರಿಗಣಿಸಲಾಗಿರುವ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಲಿದ್ದು,  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಕೊನೆಯ ಎರಡೂ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂದು ತಿಳಿದುಬಂದಿದೆ. 


ಡಿಸೆಂಬರ್ 1 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ನಾಲ್ಕನೇ ಟಿ20 ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಟಿ20 ಸರಣಿಯಲ್ಲಿ 5 ವಿಕೆಟ್‌ಗಳಿಂದ ಸೋಲುಂಡಿರುವ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದೀಗ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಅಣಿಯಾಗುತ್ತಿರುವ ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಅವರ ಪುನರಾಗಮನದಿಂದ ಬಲ ಬಂದಂತಾಗಿದೆ. 


ಇದನ್ನೂ ಓದಿ- ಅರ್ಧಶತಕದ ಜೊತೆ ಧೋನಿಯ ಶ್ರೇಷ್ಠ ದಾಖಲೆ ಮುರಿದ ಇಶಾನ್ ಕಿಶನ್: ಈ ವಿಷಯದಲ್ಲಿ ಗುರುವನ್ನೇ ಮೀರಿಸಿಬಿಟ್ಟನಲ್ಲ ಶಿಷ್ಯ…!


ಶ್ರೇಯಸ್ ಅಯ್ಯರ್: 
2023ರ ವಿಶ್ವಕಪ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಗಳಿಸಿರುವ ಶ್ರೇಯಸ್ ಅಯ್ಯರ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ 7ನೇ ಸ್ಥಾನವನ್ನು ಪಡೆದಿದ್ದಾರೆ. 


ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಅವರ ಇದುವರೆಗಿನ ಪ್ರದರ್ಶನವನ್ನು ನೋಡುವುದಾದರೆ, ಅವರು  49 ಪಂದ್ಯಗಳ 45 ಇನ್ನಿಂಗ್ಸ್‌ಗಳಲ್ಲಿ 135.98 ಸ್ಟ್ರೈಕ್ ರೇಟ್‌ನಲ್ಲಿ 1043 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು 7 ಅರ್ಧಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, 85 ಬೌಂಡರಿಗಳು ಮತ್ತು 42 ಸಿಕ್ಸರ್‌ಗಳನ್ನು ಕೂಡ ಹೊಡೆದಿದ್ದಾರೆ. ಅವರ ಗರಿಷ್ಠ ಸ್ಕೋರ್ 74 ರನ್.  


ಇದನ್ನೂ ಓದಿ- 4 4 4 6 6 0… ಬ್ಯಾಕ್ ಟು ಬ್ಯಾಕ್ ಸಿಕ್ಸರ್-ಬೌಂಡರಿ… ಟೀಂ ಇಂಡಿಯಾ ಆಟಗಾರನ ಅಬ್ಬರದ ‘ಯಶಸ್ವಿ’ ಅರ್ಧಶತಕ


ಅಯ್ಯರ್ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವುದರಲ್ಲಿ ನಿಪುಣರು. ಅದರಲ್ಲೂ ಸ್ಪಿನ್ ಬೌಲರ್ ಗಳ ಮೇಲೆ ಉಗ್ರ ದಾಳಿ ನಡೆಸಿ ಒಮ್ಮೆ ಕ್ರೀಸ್ ನಲ್ಲಿ ನೆಲೆ ನಿಂತರೆ ಅವರನ್ನು ತಡೆಯುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ, ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಆಗಮನ ಎದುರಾಳಿ ಕಾಂಗರೂ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ ಎಂತಲೇ ಹೇಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.