IND-AUS 2nd T20I Predicted Playing 11: ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಮೊದಲ T20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು 2 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 80 ರನ್’ಗಳ ಬಿರುಸಿನ ಇನಿಂಗ್ಸ್ ಆಡಿದರು. ಈ ಪ್ರದರ್ಶನದಿಂದಾಗಿ ಸೂರ್ಯ ಅವರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡ್ತಿರೋದು ಶುಭ್ಮನ್ ಜೊತೆ ಅಲ್ಲ…! ಆತನ ಗೆಳೆಯನ ಜೊತೆ


ಸರಣಿಯ ಎರಡನೇ ಟಿ20 ಪಂದ್ಯ ನವೆಂಬರ್ 26ರಂದು ತಿರುವನಂತಪುರದಲ್ಲಿ ನಡೆಯಲಿದೆ. ಇದೀಗ ಈ ಪಂದ್ಯಕ್ಕೆ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಪ್ಲೇಯಿಂಗ್ 11 ಪ್ರಕಟವಾಗುವ ಸಾಧ್ಯತೆ ಇದೆ.


ಮೊದಲ ಪಂದ್ಯದಲ್ಲಿ ಲೆಗ್ ಸ್ಪಿನ್ ಬೌಲರ್ ರವಿ ಬಿಷ್ಣೋಯ್ ಮತ್ತು ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಕಳಪೆ ಪ್ರದರ್ಶನ ನೀಡಿದ್ದರು. ಈ ಇಬ್ಬರು ಬೌಲರ್‌’ಗಳು ಸೇರಿ 8 ಓವರ್‌’ಗಳಲ್ಲಿ 104 ರನ್‌’ಗಳನ್ನು ನೀಡಿದ್ದರು. ಪ್ರಸಿದ್ಧ್ ಕೃಷ್ಣ 4 ಓವರ್‌’ಗಳಲ್ಲಿ 12.50 ಎಕಾನಮಿಯೊಂದಿಗೆ 50 ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಇನ್ನೊಂದೆಡೆ ಬಿಷ್ಣೋಯ್ 4 ಓವರ್ ಬೌಲಿಂಗ್ ಮಾಡಿ 54 ರನ್ ನೀಡಿ 1 ವಿಕೆಟ್ ಕಿತ್ತರು. ಈ ಪ್ರದರ್ಶನದ ಅನುಸಾರ ಮುಂದಿನ ಪಂದ್ಯದಿಂದ ಇವರನ್ನು ಹೊರಗಿಡುವ ಸಾಧ್ಯತೆ ಇದೆ.


ಈ ಸರಣಿಯಲ್ಲಿ ವೇಗದ ಬೌಲರ್ ಅವೇಶ್ ಖಾನ್ ಮತ್ತು ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬದಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಭಾರತ ಪರ 16 ಟಿ20 ಪಂದ್ಯಗಳನ್ನಾಡಿರುವ ಅವೇಶ್ 16 ವಿಕೆಟ್‌’ಗಳನ್ನು ಕಬಳಿಸಿದ್ದಾರೆ. ಮತ್ತೊಂದೆಡೆ, ವಾಷಿಂಗ್ಟನ್ ಸುಂದರ್ 40 ಟಿ20 ಪಂದ್ಯಗಳಲ್ಲಿ 31 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಬ್ಯಾಟಿಂಗ್‌’ನಲ್ಲಿ 107 ರನ್ ಗಳಿಸಲು ಶಕ್ತರಾಗಿದ್ದಾರೆ.


ಇದನ್ನೂ ಓದಿ:  Navdeep Saini: ಆರ್‌ಸಿಬಿ ವೇಗಿ ನವದೀಪ್ ಲವ್‌ ಮ್ಯಾರೇಜ್‌..! ಬಹುಕಾಲದ ಪ್ರಿಯತಮೆ ಯಾರು ಗೊತ್ತಾ?


ಎರಡನೇ ಟಿ20ಗೆ ಸಂಭಾವ್ಯ ಪ್ಲೇಯಿಂಗ್ 11


ಸೂರ್ಯಕುಮಾರ್ ಯಾದವ್ (ನಾಯಕ), ರಿತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ