Ice Apple: ಸಾಮಾನ್ಯವಾಗಿ ಭಾರತದ ಎಲ್ಲಾ ಹಳ್ಳಿಗಳಲ್ಲಿ ಈ ತಾಳೆಹಣ್ಣಿನ ಮರಗಳನ್ನು ನೋಡಬಹುದು. ಈ ಹಣ್ಣನ್ನು ನೋಡಿದರೆ ಥೆಟ್‌ ತೆಂಗಿನಕಾಯಿ ಎಂದು ಅನಿಸುತ್ತದೆ. ಆದರೆ ಇದು ಅದಕ್ಕಿಂತ ಭಿನ್ನ. ವಿಶೇಷವೆಂದರೆ ತೆಂಗಿನಕಾಯಿಯಂತೆ ತಾಳೆಹಣ್ಣಿನಲ್ಲಿಯೂ ನೀರು ತುಂಬಿಕೊಂಡಿರುತ್ತದೆ. ಈ ಹಣ್ಣನ್ನು ತದ್ಗೊಳ, ಐಸ್‌ ಆಪಲ್‌ ಎಂದು ಸಹ ಕರೆಯುತ್ತಾರೆ. ಈ ಹಣ್ಣು ತಿನ್ನಲು ಬಲು ರುಚಿಯಾಗಿರುತ್ತದೆ. ಜೊತೆಗೆ ಅನೇಕ ಪೋಷಕಾಂಶಗಳು ಮತ್ತು ಖನಿಜಗಳನ್ನು ಕೂಡ ಒಳಗೊಂಡಿರುತ್ತದೆ. ತಾಳೆಹಣ್ಣಿನೊಳಗೆ ಕಾರ್ಬೋಹೈಡ್ರೇಟ್‌ಗಳು, ಕೊಬ್ಬು, ಸೋಡಿಯಂ, ತ್ರಾಮ,ಮಿಟಮಿನ್‌ ಬಿ 6 ಮತ್ತು ಫೈಬರ್‌ಗಳಂತ ಅಂಶ ಕೂಡಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಹಣ್ಣನ್ನು ತಿನ್ನುವುದರಿಂದ  ದೇಹವನ್ನು ಹೈಡ್ರೇಟ್‌ ಆಗಿ ಹಿಡವುದಕ್ಕೆ ಸಹಕರಿಸುತ್ತದೆ.  ಹಲವು ಪ್ರಯೋಜನವನ್ನು ಹೊಂದಿರುವ ತಾಳೆಹಣ್ಣಿನ ಸಂಪೂರ್ಣ ಮಾಹಿತಿ ಈ ಇಲ್ಲಿದೆ..


COMMERCIAL BREAK
SCROLL TO CONTINUE READING

ತಾಳೆಹಣ್ಣಿನ ಪ್ರಯೋಜನಗಳು:


* ಹೊಟ್ಟೆಯನ್ನು ತಂಪಾಗಿಸಲು ಸಹಕಾರಿ
ಹೊಟ್ಟೆಗೆ ತಂಪು ನೀಡುವಲ್ಲಿ ತಾಳೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಣ್ಣಿನ ಸ್ವಭಾವವು ಶೀತವಾಗಿದ್ದು ಅದು ಹೊಟ್ಟೆಗೆ ಬಹಳ ಪ್ರಯೋಜನಕಾರಿಯಾಗಿದೆ. ದೇಹವನ್ನು ಆಯಾಸದಿಂದ ರಕ್ಷಿಸುವ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಷ್ಟೆ ಅಲ್ಲದೇ, ಆಮ್ಲೀಯ ಪಿತ್ತರಸವನ್ನು ಕಡಿಮೆ ಮಾಡುವುದರೊಂದಿಗೆ ತೊಡೆದು ಹಾಕಲುವಲ್ಲಿಯೂ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಈ ಹಣ್ಣಿನ ಸೇವನೆಯಿಂದ ವಾಕರಿಕೆ ಮತ್ತು ವಾಂತಿಯನ್ನು ತಡೆಗಟ್ಟಬಹುವುದು.


ಇದನ್ನೂ ಓದಿ:ಪದೇ ಪದೇ ಕಾಡುವ ಸೀನುವ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲ ಮನೆಮದ್ದುಗಳಿವು


* ಫೈಬರ್‌ ಭರಿತ
ನೀರಿನಾಂಶದಿಂದ ಸಮೃದ್ಧವಾಗಿರುವ ತಾಳೆಹಣ್ಣುಆರೋಗ್ಯಕ್ಕೆ ಒಳ್ಳೆಯದು. ಇದು ಕರುಳಿನ ಚಲನೆಯನ್ನು ವೇಗಗೊಳಿಸುವುದರೊಂದಿಗೆ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ತುಂಬಾ ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಈ ರೀತಿಯ ಹೊಟ್ಟೆಯ ಸಮಸ್ಯೆ ಇರುವವರಿಗೆ ತಾಳೆಹಣ್ಣು ಬಹಳ ಪ್ರಯೋಜಕಾರಿಯಾಗಿದೆ.


* ತೂಕ ಕಡಿಮೆಗೆ ಸಹಾಯಕ
ತಾಳೆಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಇದರೊಂದಿಗೆ ಫೈಬರ್‌  ಮತ್ತು ಮಿಟಮಿನ್‌ಗಳನ್ನು ತಾಳೆಹಣ್ಣು ಹೆಚ್ಚು ಹೊಂದಿದೆ. ಈ ಹಣ್ಣಿನಲ್ಲಿ ನೀರಿನ ಅಂಶವಿರುವುದರಿಂದ  ಇದು ಹಸಿವನ್ನು ನೀಗಿಸುವಲ್ಲಿಯೂ ಸಹಾಯ ಮಾಡುತ್ತದೆ.


* ಚರ್ಮದ ರಕ್ಷಣೆಗೆ ಸಹಾಯಕ
ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ಚರ್ಮದ ಆರೈಕೆಗೆ ಇದು ಉತ್ತಮವಾಗಿದೆ. ತಾಳೆಹಣ್ಣನ್ನು ಚರ್ಮಕ್ಕೆ ಲೇಪಿಸುವುದರಿಂದ ನೈಸರ್ಗಿಕವಾಗಿಯೇ ಚರ್ಮದ ತ್ವಚೆಯನ್ನು ಹೈಡ್ರೇಟ್‌ ಮಾಡುತ್ತದೆ.


ಇದನ್ನೂ ಓದಿ: ವಿಷಕ್ಕಿಂತ ಕಡಿಮೆಯಿಲ್ಲ ಕೋಲ್ಡ್ ಡ್ರಿಂಕ್ಸ್: ಇದರಿಂದಾಗುವ 5 ಪ್ರಮುಖ ಅಪಾಯಗಳಿವು


* ದೇಹದ ದದ್ದು ನಿವಾರಣೆ
ಬೇಸಿಗೆಯಲ್ಲಿ ಚರ್ಮದ ಮೇಲೆ ದದ್ದುಗಳು ಕಾಣಿಸಿಕೋಳ್ಳುವುದು ಸಾಮನ್ಯ. ಇಂತಹ ಸಂಧರ್ಭದಲ್ಲಿ ಈ ಹಣ್ಣನ್ನು ಚರ್ಮಕ್ಕೆ ಉಜ್ಜುವುದರಿಂದ ಎಲ್ಲಾ ರೀತಿಯ ಕಿರಿಕಿರಿಯನ್ನು ನಿವಾರಿಸುತ್ತದೆ ಮತ್ತು ಸೋಂಕಿನ ಪ್ರದೇಶವನ್ನು ಶಮನಗೊಳಿಸುವಲ್ಲಿಯೂ ಸಹಕಾರಿಯಾಗಿದೆ.


ದೈನಂದಿನ ಆಹಾರದಲ್ಲಿ ತಾಳೆಹಣ್ಣನ್ನು ಯಾವ್ಯಾವ ರೀತಿ ಸೇವಿಸಬಹುದು. 


*ತಾಳೆಹಣ್ಣಿನ ಜ್ಯೂಸ್‌
ತಾಳೆಹಣ್ಣಿನ ಜ್ಯೂಸ್‌ ದೇಹಕ್ಕೆ ಉತ್ತಮ. ಹೆಚ್ಚಾಗಿ ಈ ಪಾನೀಯ ಬೇಸಿಗೆಯಲ್ಲಿ ರಿಫ್ರೇಶ್‌ ಅನುಭವವನ್ನು ನೀಡುತ್ತದೆ. ತಾಳೆ ಹಣ್ಣಿನೊಂದಿಗೆ ಕೆಲವು ಸಿಹಿಕಾರಕ ಮತ್ತು ಪುದೀನ ಸೇರಿಸಿ ಮಿಶ್ರಣ ಮಾಡಿಯೂ ಕುಡಿಯಬಹುದು. 


*ನಂಗು ಪಾಯಸಂ
ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಸಾಮಾನ್ಯ ಸಿಹಿತಿಂಡಿ ಇದಾಗಿದೆ. ನಂಗು ಪಾಯಸಂ ಮಾಡುವ ಕ್ರಮವನ್ನು ನೋಡುವುದಾದರೆ, ಮೊದಲು ತಾಳೆಹಣ್ಣನ್ನು ಕಟ್‌ ಮಾಡಿ ಅದಕ್ಕೆ ಸ್ವಲ್ಪ ಹಾಲು ಮತ್ತು ಬಾದಾಮಿಯೊಂದಿಗೆ ಮಿಶ್ರಣ ಮಾಡಬೇಕಾಗುತ್ತದೆ. ನಂತರ ಇದರೊಂದಿಗೆ ಸಕ್ಕರೆ ಸೇರಿಸಿ ಸ್ವಲ್ಪ ಗಟ್ಟಿಯಾಗುವವರೆಗೆ ಬೆಯಿಸಿ ಅದನ್ನು ಹೊರತೆಗೆದು ಸೇವಿಸಬಹುದು.


* ತಾಳೆಹಣ್ಣಿನೊಂದಿಗೆ ಗುಲಾಬಿ ಮಿಲ್ಕ್‌ ಸೇಕ್‌
ಬೇಸಿಗೆಯ ಸಮಯದಲ್ಲಿ ಮತ್ತೊಂದು ತೃಪ್ತಿದಾಯಕ ಪಾನೀಯವೆಂದರೆ ತಾಳೆಹಣ್ಣಿನ ಗುಲಾಬಿ ಮಿಲ್ಕ್‌ ಸೇಕ್‌. ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ರೆಸಿಪಿ ಇದಾಗಿದೆ.


ಇದನ್ನೂ ಓದಿ:ಪ್ರತಿದಿನ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಏನು ಪ್ರಯೋಜನ?


ಎಷ್ಟು ಪ್ರಯೋಜಕಾರಿಯೋ ಅಷ್ಟೇ ಅಡ್ಡಪರಿಣಾಮವನ್ನು ಹೊಂದಿದೆ


ತಾಳೆಹಣ್ಣು ಅನೇಕ ಪ್ರಯೋಜನೆಯನ್ನು ಒಳಗೊಂಡಿದ್ದು, ಈ ಹಣ್ಣನ್ನು ಅತೀಯಾಗಿ ಸೇವಿಸುವುರಿಂದ ಹೊಟ್ಟೆ ನೋವು ಮತ್ತು ಸೆಳೆತ ಉಂಟಾಗುವ ಸಾಧ್ಯತೆ ಇರುತ್ತದೆ. ತಾಯಿ ಮಗುವಿಗೆ ಹಾಲುಣಿಸುವ ಮತ್ತು ಗರ್ಭಿಣಿಯರು ಈ ಹಣ್ಣನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ