KL Rahul Statement About RCB: ಐಪಿಎಲ್‌ ಮೆಗಾ ಹರಾಜು ಆರಂಭಕ್ಕೆ ಮುನ್ನ ಕನ್ನಡಿಗ ಕೆಎಲ್ ರಾಹುಲ್ ಮಾತನಾಡಿದ್ದು, ಆರ್‌ಸಿಬಿ, ಬೆಂಗಳೂರು ಚಿನ್ನಸ್ವಾಮಿ ಮೈದಾನ ಮತ್ತು ಎಲ್‌ಎಸ್‌ಜಿ ಫ್ರಾಂಚೈಸಿ ತೊರೆಯಲು ಕಾರಣ ಏನೆಂಬುದನ್ನು ಬಹಿರಂಗಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

"ಸದ್ಯಕ್ಕೆ ನಾನು ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜನ್ನು ಎದುರು ನೋಡುತ್ತಿದ್ದೇನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳಲು ಮತ್ತು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರು ಪ್ರೇಕ್ಷಕರ ಮುಂದೆ ಆಡಲು ಸಂತೋಷವಾಗುತ್ತದೆ" ಎಂದು ಹೇಳಿದ್ದಾರೆ. ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್‌ನಿಂದ ಬೇರ್ಪಟ್ಟ ನಂತರ 'ಪ್ರೀತಿ ಮತ್ತು ಗೌರವಾನ್ವಿತ' ತಂಡಕ್ಕಾಗಿ ಆಡಲು ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.


ಇದನ್ನೂ ಓದಿ: ಹೊರ ಹೋಗುವ ನಿರ್ಧಾರ ಮಾಡಿದ್ದೇಕೆ ಧರ್ಮ ಕೀರ್ತಿರಾಜ? ಬಿಗ್‌ ಬಾಸ್‌ ನಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್!


ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಖರೀದಿಸ್ಪಡುವ ಆಟಗಾರ ಎಂದು ಹೇಳಲಾಗುತ್ತಿದೆ.


ಇನ್ನು ಇವೆಲ್ಲದರ ನಡುವೆ ಆರ್‌ಸಿಬಿ ಬಗ್ಗೆ ಮಾತನಾಡಿದ ರಾಹುಲ್, "ನಾನು RCB ಯಲ್ಲಿ ಆಡುವುದನ್ನು ಹೆಚ್ಚು ಆನಂದಿಸುತ್ತಿದೆ. ಅದು ನನ್ನ ತವರು. ನನಗೆ ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆಯೂ ಚೆನ್ನಾಗಿ ತಿಳಿದಿದೆ. ನಾನು ಅಲ್ಲಿ ಆಡುತ್ತಾ ಬೆಳೆದಿದ್ದೇನೆ. ಆದ್ದರಿಂದಲೇ ನನಗೆ RCB ನಲ್ಲಿ ಆಡುವುದಕ್ಕೆ ನಿಜವಾಗಿಯೂ ಖುಷಿ ಎನಿಸುತ್ತದೆ" ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


ನೀವು RCB ಗೆ ಹಿಂತಿರುಗಲು ಬಯಸುವಿರಾ? ಎಂದಾಗ,  "ಖಂಡಿತವಾಗಿಯೂ ಬೆಂಗಳೂರು ನನ್ನ ತವರು. ಅಲ್ಲಿನ ಜನರು ನನ್ನನ್ನು ಅವರದ್ದೇ ಮನೆಮಗ ಎಂದು ತಿಳಿದಿದ್ದಾರೆ. ಅಲ್ಲಿಗೆ ಹಿಂತಿರುಗಿ ಮತ್ತು ಅವಕಾಶವನ್ನು ಪಡೆಯುವುದು ಖುಷಿಯ ಸಂಗತಿ. ಆದರೆ, ಹೌದು, ಇದು ಹರಾಜು ವರ್ಷ, ನೀವು ಎಲ್ಲಿ ಬೇಕಾದರೂ ಹೋಗಬಹುದು" ಎಂದು ಹೇಳಿದರು.


2013 ರಲ್ಲಿ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರಂತಹ ಆಟಗಾರರೊಂದಿಗೆ RCB ನಲ್ಲಿ IPL ವೃತ್ತಿಜೀವನವನ್ನು ಪ್ರಾರಂಭಿಸಿದ ರಾಹುಲ್ , ಅದಾದ ನಂತರ 2014 ಮತ್ತು 2015ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದೊಂದಿಗೆ ಆಡಿದ್ದರು. ಆ ಬಳಿಕ ಮತ್ತೆ 2016 ರಲ್ಲಿ ಆರ್‌ಸಿಬಿಗೆ ಸೇರಿಕೊಂಡರು. ನಂತರ 2018 ಮತ್ತು 2021ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆಡಿದ್ದ ರಾಹುಲ್‌, ನಂತರ ಲಕ್ನೋ ಸೂಪರ್‌ಜೈಂಟ್ಸ್‌‌ ಪರ ಆಡಿದ್ದರು.


ಇದನ್ನೂ ಓದಿ: ಮತ್ತೆ ಹುಟ್ಟಿಬಂದ ಮಂಡ್ಯದ ಗಂಡು! ಅಭಿಷೇಕ್ ಅಂಬರೀಶ್ ಮನೆಯಲ್ಲಿ ಮನೆಮಾಡಿದ ಸಂಭ್ರಮ


ನಾಯಕತ್ವಕ್ಕಾಗಿ ನಾನು ಯಾರನ್ನೂ ಕೇಳುವುದಿಲ್ಲ: ರಾಹುಲ್


"ನಾನು ಎಂದಿಗೂ ಹೋಗಿ ಯಾರ ಬಳಿಯೂ ಕ್ಯಾಪ್ಟನ್ಸಿ ನೀಡಿ ಎಂದು ಕೇಳುವುದಿಲ್ಲ. ನನ್ನ ನಾಯಕತ್ವದ ಕೌಶಲ್ಯವು ಸಾಕಷ್ಟು ಉತ್ತಮವಾಗಿದೆ ಎಂದು ನೀವು ಭಾವಿಸಿದರೆ ಮತ್ತು ನಾನು ಕ್ರಿಕೆಟ್ ಆಡುವ ರೀತಿಯಲ್ಲಿ ಏನಾದರೂ ಒಳ್ಳೆಯದನ್ನು ನೀವು ಕಂಡುಕೊಂಡರೆ ಖಂಡಿತವಾಗಿಯೂ ನಾಯಕತ್ವ ನಿಭಾಯಿಸಲು ಸಂತೋಷಪಡುತ್ತೇನೆ. ಆದರೆ ನನಗೆ ಕೊಂಚ ಸ್ವಾತಂತ್ರ್ಯ ಬೇಕಾಗಿದೆ" ಎಂದು ರಾಹುಲ್ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.