ಧರ್ಮಶಾಲಾ: 1-0 ಟೆಸ್ಟ್ ಸರಣಿಯನ್ನು ಸೋತಿದ್ದ ಲಂಕಾ ತಂಡ, ಇಲ್ಲಿ ನಡೆದ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ದ ಏಳು ವಿಕೆಟ್ ಅಂತರದ ಸುಲಭ ಜಯವನ್ನು ತನ್ನದಾಗಿಸಿಕೊಂಡಿತು.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ತನ್ನ ಪರಿಣಾಮಕಾರಿ ಬೌಲಿಂಗ್ ಪಡೆಯಿಂದ ಭಾರತ ತಂಡವನ್ನು ಕೇವಲ 112 ರನ್ಗಳಿಗೆ 38.2 ಓವರ್ ಗಳಲ್ಲಿ ಆಲೌಟ್ ಮಾಡಲಾಯಿತು.ಭಾರತದ ಪರ ಮಹೇಂದ್ರ ಸಿಂಗ್ ದೋನಿ  65 ರನ್ಗಳನ್ನು ಗಳಿಸಿದ್ದು ಬಿಟ್ಟರೆ ಸುಮಾರು 5 ಆಟಗಾರರು ಶೂನ್ಯಕ್ಕೆ ಔಟಾದರು.ಲಂಕಾ ಪರ ಸುರಂಗಾ ಲಕ್ ಮಾಲ್ ನಾಲ್ಕು ಹಾಗೂ  ನುವಾನ್ ಪ್ರದೀಪ್ ಎರಡು ವಿಕೆಟ್ ತೆಗೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. 


ಈ ಸುಲಭ ಮೊತ್ತವನ್ನು ಬೆನ್ನತ್ತಿದ ಲಂಕಾ ತಂಡವು  20.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 114 ರನ್ ಗಳಿಸುವುದರ ಮೂಲಕ ಗೆಲುವಿನ ದಡ ಸೇರಿತು.