MS Dhoni retain BCCI Rules: ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳುವ ನೀತಿಯ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಬಿಸಿಸಿಐ ಇತ್ತೀಚೆಗೆ ಲೀಗ್‌ʼನ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ, ಮೆಗಾ ಹರಾಜು, ಇಂಪಾಕ್ಟ್ ಪ್ಲೇಯರ್ ಮತ್ತು ಧಾರಣ ನೀತಿಯನ್ನು ಕೊನೆಗೊಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ?


ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಸಭೆಯಲ್ಲಿ ಧೋನಿಯನ್ನು ಉಳಿಸಿಕೊಳ್ಳುವ ನಿಯಮವನ್ನು ತರಲು ಬಿಸಿಸಿಐಗೆ ಒತ್ತಾಯಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಸಿಎಸ್‌ʼಕೆ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ. ಧೋನಿಯನ್ನು ಐಪಿಎಲ್‌ʼನಲ್ಲಿ ಕಣಕ್ಕಿಳಿಸಲು ಮಂಡಳಿಯು ದೊಡ್ಡ ಹೆಜ್ಜೆ ಇಡುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಮಂಡಳಿಯು ನಿಯಮ ಬದಲಾಯಿಸಿ, ಸಿಎಸ್‌ʼಕೆ ಬೇಡಿಕೆಯಂತೆ ನಡೆದರೆ, ಈ ಫ್ರಾಂಚೈಸಿಗೆ ಗುಡ್ ನ್ಯೂಸ್ ಸಿಗಲಿದೆ.


ಇದನ್ನೂ ಓದಿ: ಮುಗಿಲೆತ್ತರಕ್ಕೆ ಸಿಕ್ಸರ್‌ ಬಾರಿಸಿ ಮಿಂಚಿದ ರಾಹುಲ್‌ ದ್ರಾವಿಡ್‌ ಪುತ್ರ! ವಿಡಿಯೋ ನೋಡಿ


ಆ ನಿಯಮ ಏನು?


ಐಪಿಎಲ್ ಮೊದಲ ಸೀಸನ್ʼನಲ್ಲಿ ಈ ನಿಯಮ ತರಲಾಗಿತ್ತು. ಇದರ ಅಡಿಯಲ್ಲಿ, ಯಾವುದೇ ಫ್ರಾಂಚೈಸಿಯು ಅಂತಾರಾಷ್ಟ್ರೀಯ ಕ್ರಿಕೆಟ್‌ʼನಿಂದ ನಿವೃತ್ತರಾದ ಆಟಗಾರರನ್ನು ಅನ್‌ ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ಕಡಿಮೆ ಹಣಕ್ಕೆ ಖರೀದಿಸಬಹುದು. ಇದಕ್ಕಿದ್ದ ಒಂದೇ ಷರತ್ತು ಅವರ ನಿವೃತ್ತಿಯಾಗಿ 5 ವರ್ಷವಾಗಿರಬೇಕು. ಈ ನಿಯಮವನ್ನು ಎಂದಿಗೂ ಬಳಸದ ಕಾರಣ 2021 ರಲ್ಲಿ ಬಿಸಿಸಿಐ ತೆಗೆದುಹಾಕಿತ್ತು. ಇದೀಗ ನ್ಯೂಸ್ 18 ವರದಿಯ ಪ್ರಕಾರ, ಜುಲೈ 31 ರಂದು ನಡೆದ ಸಭೆಯಲ್ಲಿ ಚೆನ್ನೈ ತನ್ನ ಪ್ರಮುಖ ಆಟಗಾರ ಧೋನಿಯನ್ನು ಆಡಿಸಬೇಕೆಂದರೆ ಈ ನಿಯಮವನ್ನು ಮರಳಿ ತರುವಂತೆ ಒತ್ತಾಯಿಸಿದೆ. ಆದರೆ ಕೆಲವೇ ಫ್ರಾಂಚೈಸಿಗಳು ಇದರಲ್ಲಿ CSKಗೆ ಬೆಂಬಲ ನೀಡಿದೆ. ಈಗ ಮೂಲಗಳನ್ನು ಉಲ್ಲೇಖಿಸಿ ಈ ನಿಯಮ ಮತ್ತೆ ಬರುವ ನಿರೀಕ್ಷೆಯಿದೆ. ಆಟಗಾರರ ನಿಯಂತ್ರಣವನ್ನು ಪ್ರಕಟಿಸುವ ಸಮಯದಲ್ಲಿ ಮಂಡಳಿಯು ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ