CSK ಪ್ಲೇಯಿಂಗ್-11ಗೆ ಈ ಮಾರಕ ಬೌಲರ್ ಎಂಟ್ರಿ !ಕಳೆದ ಸೀಸನ್ ನಲ್ಲಿ ಕಪ್ ಗೆದ್ದಿರುವ ಹಿಂದಿನ ರೂವಾರಿ ಈತ !
CSK vs GT IPL 2024: ಈ ಬೌಲರ್ ಕಳೆದ ಋತುವಿನಲ್ಲಿ ತನ್ನ ಬೌಲಿಂಗ್ ಕಮಾಲ್ ತೋರಿದ್ದರು. ಇದೀಗ ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11ರಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ.
CSK vs GT IPL 2024: IPL 2024ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಾವಳಿಯನ್ನು ಪ್ರಾರಂಭಿಸಿತು. ಇದೀಗ ತಂಡವು ಗುಜರಾತ್ ಟೈಟಾನ್ಸ್ ಜೊತೆ ಮುಖಾಮುಖಿಯಾಗಲಿದೆ. ಗುಜರಾತ್ ಕೂಡಾ ಈ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಶುಭಮನ್ ಗಿಲ್ ಸಾರಥ್ಯದ ಗುಜರಾತ್ ತಂಡ ಮುಂಬೈ ವಿರುದ್ದ ಗೆಲುವು ಸಾಧಿಸಿದೆ. ಇದೀಗ ಗುಜರಾತ್ ತಂಡದ ಆತಂಕ ಹೆಚ್ಚಾಗಿದೆ. ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ಸ್‌ನ ಆಕ್ರಮಣಕಾರಿ ಬೌಲರ್ ಫಿಟ್ ಆಗಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ಬೌಲರ್ ಕಳೆದ ಋತುವಿನಲ್ಲಿ ತನ್ನ ಬೌಲಿಂಗ್ ಕಮಾಲ್ ತೋರಿದ್ದರು. ಇದೀಗ ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11ರಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ.
ಮೈದಾನದಲ್ಲಿ ಅಬ್ಬರಿಸಲು ಸಿದ್ದ :
ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನ ಮೈದಾನದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಪತಿರಾನ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡುವುದು ಸಾಧ್ಯವಾಗಿರಲಿಲ್ಲ. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈನ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಡೆತ್ ಓವರ್‌ಗಳಲ್ಲಿ ಪತಿರಾನ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ ಎನ್ನುವುದು ವಿಶೇಷ.
ಇದನ್ನೂ ಓದಿ : RCB ಗೆಲುವಿನ ಬಳಿಕ ಮಡದಿ-ಮಕ್ಕಳೊಂದಿಗೆ ವಿರಾಟ್ ಕೊಹ್ಲಿ ವಿಡಿಯೋ ಕಾಲ್: ವಾಚ್ ಕ್ಯೂಟ್ ವಿಡಿಯೋ
ಕಳೆದ ಋತುವಿನಲ್ಲಿ ಸಂಚಲನ :
ಕಳೆದ ವರ್ಷ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದ ಪತಿರಾನಾ ಸಿಎಸ್‌ಕೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 21 ವರ್ಷದ ಈ ವೇಗಿ ಇತ್ತೀಚೆಗೆ ಬಾಂಗ್ಲಾದೇಶ-ಶ್ರೀಲಂಕಾ ಟಿ 20 ಸರಣಿಯ ಎರಡನೇ ಪಂದ್ಯದ ವೇಳೆ ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದರು. ಪತಿರಾನ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ 12 ಪಂದ್ಯಗಳಲ್ಲಿ 8 ಎಕಾನಮಿ ರೇಟ್ ನಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ನಂತರ ಈ ಋತುವಿನಲ್ಲಿ ಚೆನ್ನೈ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿ ಹೊರ ಹೊಮ್ಮಿದ್ದರು.
ಯಾರಿಗೆ ಸಿಗಲಿದೆ ಕೊಕ್ ? :
ಪತಿರಾನ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿದರೆ, ಯಾರು ತಂಡದಿಂದ ಹೊರಗುಳಿಯಬೇಕಾಗುತ್ತದೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ಮೊದಲ ಪಂದ್ಯದಲ್ಲಿ ಮುತಾಫಿಜುರ್ ರೆಹಮಾನ್ ಅದ್ಭುತ ಬೌಲಿಂಗ್ ಮಾಡಿ 4 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಗೆ ಅಟ್ಟಿದ್ದರು. ಪರಿಸ್ಥಿತಿ ಹೀಗಿರುವಾಗ ರಿತುರಾಜ್, ಪತಿರಾನ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.ಪತಿರಾನ ಅವರ ಐಪಿಎಲ್ ಅಂಕಿಅಂಶಗಳನ್ನು ನೋಡಿದರೆ, ಅವರು 14 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.ಈ ಪೈಕಿ 2023ರಲ್ಲಿ 12 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ : ಹೇಯ್ ಪ್ರಭು ಯೇ ಕ್ಯಾ ಹುವಾ.. ಓಡಿಬಂದು ರೋಹಿತ್ ಶರ್ಮಾ ಪತ್ನಿ ರಿತಿಕಾ ಅವರನ್ನ ಅಪ್ಪಿಕೊಂಡ ಹಾರ್ದಿಕ್ ಪಾಂಡ್ಯ.. ವಿಡಿಯೋ ವೈರಲ್!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ