CWG 2018: ಭಾರತಕ್ಕೆ 16 ನೇ ಚಿನ್ನದ ಪದಕ ಗೆಲ್ಲುವುದರ ಜೊತೆಗೆ ಹೊಸ ದಾಖಲೆಯನ್ನೂ ಸೃಷ್ಟಿಸಿದ 15 ವರ್ಷದ ಅನೀಶ್
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅನೀಶ್ ಭನ್ವಾಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಂಬತ್ತನೇ ದಿನ ಶುಕ್ರವಾರ ಪುರುಷರ 25 ಮೀಟರ್ ರಾಪಿಡ್ ಫೈರ್ ಪಿಸ್ತೋಲ್ ಸಮಾರಂಭದಲ್ಲಿ ಭಾರತದ ಯುವ ಶೂಟರ್ ಅನೀಶ್ ಭನ್ವಾಲ ಚಿನ್ನದ ಪದಕ ಗೆಲ್ಲುವುದರ ಜೊತೆಗೆ ಹೊಸ ದಾಖಲೆಯನ್ನೂ ಸೃಷ್ಟಿಸಿದ್ದಾರೆ.
ಭಾರತದ 15 ರ ಹರೆಯದ ಶೂಟರ್ ಅನೀಶ್ ಫೈನಲ್ನಲ್ಲಿ 30 ಪಾಯಿಂಟ್ಗಳನ್ನು ಪಡೆಯುವ ಮೂಲಕ ಚಿನ್ನದ ಪದಕ ಗೆದ್ದಿರುವುದು ಮಾತ್ರವಲ್ಲದೆ, 2014 ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯದ ಡೇವಿಡ್ ಕಪ್ಮ್ಯಾನ್ ಅವರು ದಾಖಲಿಸಿದ ದಾಖಲೆಯನ್ನು ಸಹ ಮುರಿದಿದ್ದಾರೆ. ಈ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೂರು ಶೂಟರ್ಗಳನ್ನು ವೀರೇಂದ್ರ ಸೆಹ್ವಾಗ್ ಅವರು ಅಭಿನಂದಿಸಿದರು.
ಇದಲ್ಲದೆ, ಕಿರಿಯ ವಯಸ್ಸಿನಲ್ಲಿ ಚಿನ್ನ ಗೆದ್ದ ದೇಶದ ಮೊದಲ ಆಟಗಾರನಾದ ಅನೀಶ್ ಭನ್ವಾಲ, ಈ ಹಿಂದೆ ಮನು ಭೂರ್ನ ದಾಖಲೆಯನ್ನು ಮುರಿದರು. ಈ ಆಟಗಳಲ್ಲಿ 16 ನೇ ವಯಸ್ಸಿನಲ್ಲಿ ಮನು ಚಿನ್ನದ ಪದಕ ಗೆದ್ದಿದ್ದರು. ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ತೇಜಸ್ವಿನಿಯವರು 50 ಮೀಟರ್ ರೈಫಲ್ ನಲ್ಲಿ ಚಿನ್ನವನ್ನು ಗೆದ್ದಿದ್ದಾರೆ.