ನವದೆಹಲಿ: 21 ನೇ ಕಾಮನ್ ವೆಲ್ತ್ ಕ್ರೀಡಾಕೂಟವು ಇಂದಿನಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಉದ್ಘಾಟನಾ ಕಾರ್ಯಕ್ರಮವು ಕ್ಯಾರರಾ ಕ್ರೀಡಾಂಗಣದಲ್ಲಿ 11 ದಿನಗಳ ಕಾಲ ಜರುಗಲಿದ್ದು,ಒಟ್ಟು 71 ದೇಶಗಳ 4,500 ಅಥ್ಲೀಟ್ ಗಳು ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 275 ಚಿನ್ನದ ಪದಕಗಳಿಗಾಗಿ ಭಾಗವಹಿಸಲಿದ್ದಾರೆ.ಇದೆ ಮೊದಲ ಬಾರಿಗೆ ಮಹಿಳೆಯರ ಸಂಖ್ಯೆಯು ಸಹಿತ ಪುರುಷರಷ್ಟೇ ಇದೆ ಎನ್ನಲಾಗಿದೆ.


ಪಿ,ವಿ,ಸಿಂಧು, ಬಾಕ್ಸರ್ ಸುಶೀಲ್ ಕುಮಾರ್, ಸೈನಾ ನೆಹ್ವಾಲ್,ಮೇರಿ ಕೋಮ,ಗಗನ್ ನಾರಂಗ್ ರನ್ನೋಳಗೊಂಡ ಭಾರತ ತಂಡದ ಸುಮಾರು 200 ಕ್ರೀಡಾಪಟುಗಳು ಈ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ  ಭಾಗವಹಿಸಲಿದ್ದಾರೆ. ಆಷ್ಟ್ರೇಲಿಯಾವು ಐದನೇಯ ಬಾರಿಗೆ ಈ ಕ್ರೀಡಾಕೂಟದ ಅತಿಥ್ಯವನ್ನು ವಹಿಸಿಕೊಂಡಿದೆ.