IND vs PAK Commonwealth Games 2022: ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಜಯ ದಾಖಲಿಸಿದೆ. ಸುದೀರ್ಘ 24 ವರ್ಷಗಳ ನಂತರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿರುವುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾಗೆ ಮೊದಲ ಜಯ
ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಮ್ಮ ಅಭಿಯಾನವನ್ನು ಸೋಲಿನೊಂದಿಗೆ ಪ್ರಾರಂಭಿಸಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ  ಪಾಕ್ ಮಹಿಳಾ ತಂಡದ ನಾಯಕಿ  ಬಿಸ್ಮಾ ಮರೂಫ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ ಮತ್ತು 18 ಓವರ್‌ಗಳಲ್ಲಿ 99 ರನ್‌ಗಳಿಗೆ ಅವರ ಇಡೀ ತಂಡ ಆಲೌಟ್ ಆಗಿದೆ. ಈ 100 ರನ್‌ಗಳ ಗುರಿಯನ್ನು ಟೀಂ ಇಂಡಿಯಾ ಕೇವಲ 2 ವಿಕೆಟ್ ಗಳನ್ನು ಕಳೆದುಕೊಂಡು ಸುಲಭವಾಗಿ ತಲುಪಿದೆ.


ಇದನ್ನೂ ಓದಿ-CWG 2022: ದೇಶಕ್ಕೆ ಮತ್ತೊಂದು ಬಂಗಾರದ ಗರಿ: ಗಾಯವಿದ್ದರೂ ಚಿನ್ನ ಗೆದ್ದ ಜೆರೆಮಿ


ಅರ್ಧ ಶತಕ ಬಾರಿಸಿದ ಸ್ಮೃತಿ ಮಂಧಾನ
ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಈ ಸಾಧಾರಣ ಸ್ಕೋರ್ ಬೆನ್ನಟ್ಟಿದ ಸ್ಮೃತಿ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಸ್ಮೃತಿ ಮಂಧಾನ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 63 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಸ್ನೇಹಾ ರಾಣಾ ಹಾಗೂ ರಾಧಾ ಯಾದವ್ ಅವರುಗಳು ಗರಿಷ್ಠ 2-2 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ-CWG 2022: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಭಾರತ: ಪದಕದ ನಿರೀಕ್ಷೆ ಜೀವಂತ


CWG 2022 ರಲ್ಲಿ ಟೀಮ್ ಇಂಡಿಯಾ
ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತ ತಂಡವು ಜುಲೈ 29 ರಂದು ತನ್ನ ಅಭಿಯಾನವನ್ನು ಆರಂಭಿಸಿದೆ. ಟೀಂ ಇಂಡಿಯಾದ ಮೊದಲ ಪಂದ್ಯವು 29 ಜುಲೈ 2022 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದಿತ್ತು, ಇದರಲ್ಲಿ ತಂಡವು 3 ವಿಕೆಟ್‌ಗಳಿಂದ ಸೋಲನ್ನು ಅನುಭವಿಸಿದೆ. ಹೀಗಾಗಿ ಭಾರತವು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ಅದ್ಭುತ ಪುನರಾಗಮನವ ಮಾಡಿದೆ ಎಂದರೆ ತಪ್ಪಾಗಲಾರದು. ತಂಡದ ಮೂರನೇ ಪಂದ್ಯ ಬಾರ್ಬಡೋಸ್ ವಿರುದ್ಧ ನಡೆಯಲಿದೆ. ಈ ಪಂದ್ಯ ಆಗಸ್ಟ್ 3 ರಂದು ರಾತ್ರಿ 11:30 ಕ್ಕೆ ನಡೆಯಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.