CWG 2022: ಭಾರತೀಯ ಬಾಕ್ಸಿಂಗ್ ಪಟು ನಿಖಹತ್ ಜರೀನ್ ಬಾಕ್ಸಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ನಿಖಹತ್  ಜರೀನ್ ಬಾಕ್ಸಿಂಗ್‌ನಲ್ಲಿ ಮಹಿಳೆಯರ 48-50 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ವಿಭಾಗದ ಫೈನಲ್ ಪಂದ್ಯದಲ್ಲಿ ನಿಖಹತ್ ಜರೀನ್ ನಾರ್ತ್ ಐರ್ಲೆಂಡ್‌ನ ಕಾರ್ಲಿಯನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಇದು ಕಾಮನ್‌ವೆಲ್ತ್ ಕ್ರೀಡಾಕೂಟ2022 ರಲ್ಲಿ ಭಾರತಕ್ಕೆ 48 ನೇ ಪದಕ ಮತ್ತು ಬಾಕ್ಸಿಂಗ್‌ನಲ್ಲಿ ಮೂರನೇ ಚಿನ್ನದ ಪದಕವಾಗಿದೆ. ನಿಖಹತ್ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದಾರೆ.


CWG 2022 : ಜಾವೆಲಿನ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಭಾರತೀಯ ಮಹಿಳಾ ಆಟಗಾರ್ತಿ!


COMMERCIAL BREAK
SCROLL TO CONTINUE READING

ಬಾಕ್ಸಿಂಗ್‌ನಲ್ಲಿ ಭಾರತದ ಮಡಿಲಿಗೆ ಮತ್ತೊಂದು ಚಿನ್ನ
ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಇದುವರೆಗೆ 48 ಪದಕಗಳನ್ನು ಗೆದ್ದಿದೆ. ಇದರಲ್ಲಿ 17 ಚಿನ್ನ, 12 ಬೆಳ್ಳಿ ಮತ್ತು 19 ಕಂಚಿನ ಪದಕಗಳು ಶಾಮೀಲಾಗಿವೆ. ಇದು ಬಾಕ್ಸಿಂಗ್‌ನಲ್ಲಿ ಭಾರತ ತಂಡದ ಮೂರನೇ ಚಿನ್ನದ ಪದಕವಾಗಿದೆ. ಇದಲ್ಲದೆ, ಇದು ಒಟ್ಟಾರೆ ಭಾರತಕ್ಕೆ 17ನೇ ಚಿನ್ನದ ಪದಕವಾಗಿದೆ.


ಇದನ್ನೂ ಓದಿ-CWG 2022 : ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ


ನಿಖತ್ ಜರೀನ್ ಯಾರು?
ನಿಖಹತ್ ಜರೀನ್ 14 ಜೂನ್ 1996 ರಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ ಜನಿಸಿದ್ದಾರೆ. ಅವರ ತಂದೆ ಮಹಮ್ಮದ್ ಜಮೀಲ್ ಅಹಮದ್ ಮತ್ತು ತಾಯಿ ಪರ್ವೀನ್ ಸುಲ್ತಾನಾ. ನಿಖಹತ್ 13 ನೇ ವಯಸ್ಸಿನಲ್ಲಿ ಬಾಕ್ಸಿಂಗ್ ಗ್ಲೋಸ್ ಧರಿಸಿದ್ದಾರೆ. ನಿಖಹತ್ ಅವರ ಕುಟುಂಬದಲ್ಲಿ ಇಬ್ಬರು ಹಿರಿಯ ಸಹೋದರಿಯರು ಮತ್ತು ಕಿರಿಯ ಸಹೋದರಿ ಇದ್ದಾರೆ. ನಾಲ್ಕು ಹೆಣ್ಣು ಮಕ್ಕಳ ತಂದೆ ಜಮೀಲ್ ಅಹಮದ್ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ಜಮೀಲ್ ಅಹ್ಮದ್ ಸ್ವತಃ ಮಾಜಿ ಫುಟ್ಬಾಲ್ ಆಟಗಾರ ಮತ್ತು ಕ್ರಿಕೆಟಿಗರಾಗಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.