ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಆಸಿಸ್ ತಂಡವು 49.1 ಓವರ್ ಗಳಲ್ಲಿ 255 ರನ್ ಗಳಿಗೆ ಭಾರತ ತಂಡವನ್ನು ಕಟ್ಟಿ ಹಾಕಿತು. ಭಾರತ ತಂಡದ ಪರ ಶಿಖರ್ ಧವನ್ (74) ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ (47) ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 30 ರ ಗಡಿ ದಾಟಲಿಲ್ಲ. ಆಸಿಸ್ ಪರವಾಗಿ ಮಿಚಲ್ ಸ್ಟಾರ್ಕ್ (3) ಪ್ಯಾಟ್ ಕಮಿನ್ಸ್ (2) ಕೆನ್ ರಿಚರ್ಡ್ಸನ್ (2) ವಿಕೆಟ್ ತೆಗೆದುಕೊಳ್ಳುವ ಮೂಲಕ ಭಾರತ ತಂಡದ ಬೆನ್ನೆಲುಬು ಮುರಿದರು.



ಇನ್ನು ಭಾರತ ತಂಡವು ನೀಡಿದ 256 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಡೇವಿಡ್ ವಾರ್ನರ್ (128) ಹಾಗೂ ಆರನ್ ಫಿಂಚ್ (110) ಅವರ ಶತಕದಿಂದಾಗಿ ವಿಕೆಟ್ ನಷ್ಟವಿಲ್ಲದೆ 258 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ ಆರಂಭಿಕ ಪಂದ್ಯದಲ್ಲೇ ಭರ್ಜರಿ ಶಾಕ್ ನೀಡಿದೆ.


ಆ ಮೂಲಕ ಭಾರತ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಐದನೇ ಬಾರಿ ಮಾತ್ರ 10 ವಿಕೆಟ್ ಗಳ ಸೋಲನ್ನು ಅನುಭವಿಸಿದೆ.ಈ ಹಿಂದೆ 2005 ರಲ್ಲಿ ಕೊಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ  ಭಾರತ ಕೊನೆಯ ಬಾರಿಗೆ 10 ವಿಕೆಟ್‌ಗಳಿಂದ ಏಕದಿನ ಪಂದ್ಯವನ್ನು ಕಳೆದುಕೊಂಡಿತು. ಇನ್ನೊಂದೆಡೆಗೆ ಯಾವುದೇ ತಂಡವು ವಿಕೆಟ್ ಕಳೆದುಕೊಳ್ಳದೆ ಬೆನ್ನಟ್ಟಿದ 2 ನೇ ಗರಿಷ್ಠ ಮೊತ್ತ ಇದು. 2017 ರಲ್ಲಿ ಬಾಂಗ್ಲಾದೇಶ ವಿರುದ್ಧ ಹಶಿಮ್ ಆಮ್ಲಾ ಮತ್ತು ಕ್ವಿಂಟನ್ ಡಿ ಕಾಕ್ 279 ರನ್ ಗಳಿಸಿದ ಬೆನ್ನಟ್ಟುವಿಕೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.