ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 50ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ 21 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದೆಹಲಿ ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು.


COMMERCIAL BREAK
SCROLL TO CONTINUE READING

ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ಕೊನೆ ಓವರ್‍ವರೆಗೂ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಪರಿಣಾಮ ದೆಹಲಿ ಎದುರು ವಿರೋಚಿತ ಸೋಲು ಕಾಣಬೇಕಾಯಿತು. ದೆಹಲಿ ಪರ ಡೇವಿಡ್ ವಾರ್ನರ್ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್ ಬೌಲರ್‍ಗಳ ಬೆವರಿಳಿಸಿದರು. ಕೊನೆ ಓವರ್‍ವರೆಗೂ ಕ್ರೀಸ್‍ನಲ್ಲಿ ನಿಂತು ಆಡಿದ ವಾರ್ನರ್ 58 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಇದ್ದ ಅಜೇಯ 92 ರನ್‍ ಗಳಿಸಿದರು. ಇವರಿಗೆ ರೋವ್ಮನ್ ಪೊವೆಲ್ ಉತ್ತಮ ಸಾಥ್ ನೀಡಿದರು.


ಇದನ್ನೂ ಓದಿ: IND vs PAK : ಟಿ20 ವಿಶ್ವಕಪ್‌ನಲ್ಲಿ ಉಮ್ರಾನ್ ಮಲಿಕ್-ಬಾಬರ್ ಮುಖಾಮುಖಿ, ಇಬ್ಬರ ನಡುವೆ ರೋಚಕ ಕದನ


IPL 2022 : ಈ ಆಟಗಾರನನ್ನು ಕೈ ಬಿಟ್ಟ ಡೆಲ್ಲಿ ಟೀಂ : ಟೀಂ ಇಂಡಿಯಾ ಈಗಾಗಲೇ ಹೊರಗಿಟ್ಟಿದೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.