ದಕ್ಷಿಣ ಆಫ್ರಿಕಾದ ಈ ಆಟಗಾರನಿಗೆ ನಮನ ಸಲ್ಲಿಸಿದ ಕೊಹ್ಲಿ !ಟೆಸ್ಟ್ ಕೆರಿಯರ್ ಗೆ ಗುಡ್ ಬೈ ಹೇಳಿದ ಡೀನ್ ಎಲ್ಗರ್
Dean Elagr Retirement : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ದದ 2 ಪಂದ್ಯಗಳ ಸರಣಿಯು 1-1 ಅಂತರಗಳಿಂದ ಸಮಗೊಂಡಿದೆ. ಈ ಸರಣಿಯು ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ ಆಟಗಾರ ಡೀನ್ ಎಲ್ಗರ್ ಅವರ ಟೆಸ್ಟ್ ವೃತ್ತಿ ಬದುಕಿನ ಕಡೆಯ ಪಂದ್ಯವಾಗಿದೆ. 14 ವರ್ಷಗಳ ತನಕ ದಕ್ಷಿಣ ಆಫ್ರಿಕ ತಂಡದ ಪರ ಆಡಿದ್ದು ಈಗ ನಿವೃತ್ತಿ ಹೇಳಿದ್ದಾರೆ.
Dean Elgar : ದಕ್ಷಿಣ ಆಫ್ರಿಕಾ ಮತ್ತು ಭಾರತದ 2 ಪಂದ್ಯಗಳ ಟೆಸ್ಟ್ ಸರಣಿ ಇಂದು(ಗುರುವಾರ) ಅಂತ್ಯವಾಗಿದೆ. ಭಾರತವು 1-1 ಅಂತರಗಳಿಂದ ಗೆಲುವುದಾಖಲಿಸಿ ಸರಣಿಯನ್ನು ಸಮಗೊಳಿಸಿದೆ. ನ್ಯೂಲಾಂಡ್ ಕೇಪ್ ಟೌನ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯಲ್ಲಿ ಭಾರತ ಒಂದು ಕಡೆ ಭರ್ಜರಿ ಜಯಗಳಿಸಿದರೆ ಇನ್ನೊಂದು ಕಡೆ ಹಲವಾರು ದಾಖಲೆಗಳಿಗೆ ಈ ಮೈದಾನ ಸಾಕ್ಷಿಯಾಯಿತು.
ಅಷ್ಟೇ ಅಲ್ಲದೇ ಈ ಸರಣಿಯು ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ ಆಟಗಾರನಾದ ಡೀನ್ ಎಲ್ಗರ್‌ಗೆ ವಿಧಾಯದ ಪಂದ್ಯವಾಗಿತ್ತು. ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿನ ಆಫ್ರಿಕಾ ತಂಡಕ್ಕೆ ಗೆಲವು ತಂದುಕೊಡುವಲ್ಲಿ ಎಲ್ಗರ್ ಅವರು ಪ್ರಮುಖ ಪಾತ್ರವಹಿಸಿದ್ಧಾರೆ. ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 185 ರನ್‌ಗಳಿಸಿದ ಡೀನ್ ಎಲ್ಗರ್ ಭಾರತವನ್ನು ಸೋಲಿನ ಅಂಚಿಗೆ ತಳ್ಳಿದರು.
ಇದನ್ನು ಓದಿ- ಆಸ್ಟ್ರೇಲಿಯಾ ವಿರುದ್ದದ ಕೊನೆಯ ಪಂದ್ಯದಲ್ಲಾದರು ಪಾಕ್‌ಗೆ ಸಿಗುತ್ತ ಜಯ? ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್ ಗೆ ಮುನ್ನಡೆ
ಜನವರಿ 3 ರಂದು ನಡೆದ 2ನೇ ಟೆಸ್ಟ್ ಪಂದ್ಯವು ಡೀನ್ ಎಲ್ಗರ್ ಟೆಸ್ಟ್ ವೃತ್ತಿ ಬದುಕಿನ ಕೊನೆಯ ಪಂದ್ಯವಾಯಿತು. ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಡೀನ್ ಎಲ್ಗರ್ 2 ನೇ ಪಂದ್ಯದಲ್ಲಿ 12 ರನ್‌ಗಳಿಸಿರುವಾಗ ಮುಕೇಶ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕೈಗೆ ಕ್ಯಾಚ್ ನೀಡಿ ಔಟ್ ಆದರು. ಆಗ ಭಾರತ ತಂಡದ ಅಭಿಮಾನಿಗಳು ಸಂಭ್ರಮಿಸಲು ಆರಂಭಿಸಿದರು. ಆದರೆ ವಿರಾಟ್ ತಾವೇ ಎರಡು ಕೈಗಳಿಂದ ನಮಸಿ, ತಮ್ಮ ಅಭಿಮಾನಿಗಳಿಗೆ ಸಂಭ್ರಮಿಸುವದರ ಬದಲಾಗಿ ಪ್ರಶಂಸಿಸುಂತೆ ಸೂಚಿಸಿದರು.
ಎಡಗೈ ಆರಂಭಿಕಾ ಬ್ಯಾಟರ್ ಆಗಿ ದಕ್ಷಿಣ ಆಪ್ರಿಕಾ ತಂಡದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು 2012 ನವೆಂಬರ್ 30 ರಂದು ಆಸ್ಟ್ರೇಲಿಯಾ ವಿರುದ್ದ ಆಡಿದರು. ಇವರು 2018ರಲ್ಲಿ ಏಕದಿನ ಪಂದ್ಯಕ್ಕೆ ನಿಔರತ್ತಿಯನ್ನು ಘೋಷಿಸಿದರು. ಇಂದು ಭಾರತ ವಿರುದ್ದ ನಡೆದ ಪಂದ್ಯದಲ್ಲಿ ತಮ್ಮ ಕಡೆಯ ಪಂದ್ಯವನ್ನು ಆಡಿ ಕ್ರಕೇಟ್ ಬದುಕಿಗೆ ನಿವೃತ್ತಿ ಹೇಳಿದ್ದಾರೆ.
ಇದನ್ನು ಓದಿ-ದಕ್ಷಿಣ ಆಫ್ರಿಕಾ ವಿರುದ್ದ 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭಾರಿ ಜಯ ! 1-1 ಅಂತರದಲ್ಲಿ ಸರಣಿ ಸಮ
ಡೀನ್ ಎಲ್ಗರ್ ತಮ್ಮ ಟೆಸ್ಟ್ ಕೆರಿಯರ್‌ನಲ್ಲಿ ಒಟ್ಟು 86 ಪಂದ್ಯಗಳನ್ನು ಆಡಿದ್ದು, 5,347 ರನ್ ಕಲೆಹಾಕಿದ್ಧಾರೆ. ಅಷ್ಟೇ ಅಲ್ಲದೇ 37.65ರ ಸರಾಸರಯನ್ನು ಹೊಂದಿದ್ದು, 14 ಶತಕಗಳನ್ನು ಹಾಗೂ 23 ಅರ್ಧಶತಕಗಳನ್ನು ಗಳಿಸಿದ್ಧಾರೆ. 199 ಇವರ ಅತ್ಯಧಿಕ ಸ್ಕೋರ್ ಆದರೆ ತಮ್ಮ ಟೆಸ್ಟ್ ಕ್ರೆಕೆಟ್ ಬದುಕಿನಲ್ಲಿ 15 ವಿಕೆಟ್‌ಗಳನ್ನು ಸಹ ಕಬಳಿಸಿದ್ಧಾರೆ.
ವಿಶ್ವದ ಬಲಿಷ್ಠ ಕ್ರಿಕೆಟ್ ತಂಡವಾದ ಭಾರತ ವಿರುದ್ದದ ಈ ಸರಣಿಯು ಅವರ ಪಾಲಿಗೆ ಒಂದು ಸವಿನೆನಪಾಗಿದೆ. ಅಷ್ಟೇ ಅಲ್ಲದೇ ವಿಧಾಯದ ಸರಣಿಯಲ್ಲಿ 185ರನ್ ಗಳಿಸಿರುವುದು ಅವರ ವಿಧಾಯ ಪಂದ್ಯಕ್ಕೆ ಶೋಭೆಯನ್ನು ತಂದಿದೆ. ತಮ್ಮ 12 ವರ್ಷಗಳ ಟೆಸ್ಟ್ ಬದುಕಿಗೆ ಗುಡ್ ಬೈ ಹೇಳಿ ದಕ್ಷಿಣ ಆಫ್ರಿಕಾದ ದಿಗ್ಗಜರ ಪಟ್ಟಿಗೆ ಸೇರಿಕೊಂಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡ