Himachal Pradesh Vs Uttarakhand Ranji Trophy: ಕ್ರಿಕೆಟ್ ಅನಿಶ್ಚಿತತೆಯ ಆಟ ಎಂದು ತಿಳಿದಿದೆ. ಮುಂದಿನ ಬಾಲ್‌ನಲ್ಲಿ ಏನಾಗುತ್ತದೆ ಎಂದು ನೀವು ಊಹಿಸಲು ಸಾಧ್ಯವಿಲ್ಲ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. 32ರ ಹರೆಯದ ಬೌಲರ್ ಅತ್ಯುತ್ತಮ ಬೌಲಿಂಗ್ ನಿಂದಾಗಿ 8 ವಿಕೆಟ್ ಪಡೆದು ಎದುರಾಳಿ ತಂಡವನ್ನು ಧ್ವಂಸಗೊಳಿದ್ದಾನೆ. ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ ತಂಡ ಉತ್ತರಾಖಂಡ ವಿರುದ್ಧ ಕೇವಲ 49 ರನ್ ಗಳಿಸಲಷ್ಟೇ ಶಕ್ತವಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರವಾಸದಲ್ಲಿ ಮಜಾ ಮಾಡುತ್ತಿದ್ದ ಗೆಳೆಯ.! ಬಾಯ್ ಫ್ರೆಂಡ್ ಪರವಾಗಿ ಪರೀಕ್ಷೆಗೆ ಹಾಜರಾದ ಯುವತಿ.!


ಹಿಮಾಚಲ ಪ್ರದೇಶದ ನಾಯಕ ರಿಷಿ ಧವನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಧಾರವು ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಲಿಲ್ಲ. ಹಿಮಾಚಲ ತಂಡದ ಬ್ಯಾಟಿಂಗ್ ತೀರಾ ಹದಗೆಟ್ಟಾಗ ತಂಡವು ಒಟ್ಟಾಗಿ 49 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂಕಿತ್ ಕಸೇಲಿ ಹಿಮಾಚಲ ಪರ ಅತಿ ಹೆಚ್ಚು ರನ್ (26) ಗಳಿಸಿದರು. ಇನ್ನು ಉತ್ತರಾಖಂಡ ಪರ ದೀಪಕ್ ಧಾಪೋಲ ಗರಿಷ್ಠ 8 ವಿಕೆಟ್ ಪಡೆದಿದ್ದು, ಅಭಯ್ ನೇಗಿ ಖಾತೆಗೆ 2 ವಿಕೆಟ್ ಗಳು ಸೇರಿವೆ.


ಹಿಮಾಚಲ ಪ್ರದೇಶದ 32 ವರ್ಷದ ಬೌಲರ್ ದೀಪಕ್ ಧಾಪೋಲ ಬೌಲಿಂಗ್ ಕಿಲ್ಲರ್. ಅವರು 8.5 ಮೂರು ಓವರ್‌ಗಳಲ್ಲಿ 35 ರನ್‌ಗಳಿಗೆ 8 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: KL Rahul: ರಾಹುಲ್ ಸ್ಥಾನ ಕಸಿದುಕೊಳ್ತಾರಾ ಈ ಆಟಗಾರ? ಆಸೀಸ್ ದಿಗ್ಗಜ ಬಿಚ್ಚಿಟ್ಟ ರಹಸ್ಯವೇನು?


ಹಿಮಾಚಲ ಪ್ರದೇಶದ 5 ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇವರನ್ನು ಬಿಟ್ಟರೆ ಉಳಿದ ಐವರು ಹತ್ತರ ಅಂಕೆಯನ್ನೂ ಮುಟ್ಟಲಿಲ್ಲ. ಒಬ್ಬ ಬ್ಯಾಟ್ಸ್‌ಮನ್ ಮಾತ್ರ 26 ರನ್ ಗಳಿಸಿದ್ದರು.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ