ಟಿ20 ವಿಶ್ವಕಪ್‌ ವಿಚಾರಕ್ಕೆ ಬಂದರೆ ಇದೀಗ ನಡೆಯುತ್ತಿರುವ ಇಂಗ್ಲೆಂಡ್ ಪ್ರವಾಸವು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಮೊದಲ ಟಿ20 ಪಂದ್ಯವನ್ನಾಡುವ ಅವಕಾಶ ಹಲವು ಯುವ ಆಟಗಾರರಿಗೆ ಅವಕಾಶ ಸಿಕ್ಕಿತ್ತು. ಜೊತೆಗೆ ನಾಯಕ ರೋಹಿತ್‌ ಶರ್ಮಾ ಕೋವಿಡ್‌ನಿಂದ ಚೇತರಿಕೆಗೊಂಡು ತಂಡಕ್ಕೆ ಮರಳಿದ್ದಾರೆ. ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ ಉತ್ತಮ ಪ್ರದರ್ಶನ ತೋರಿಲ್ಲ. ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆರಂಭಿಕ ಆಟಗಾರರನ್ನು ಬದಲಾವಣೆ ಮಾಡುವ ಸಾಧ್ಯತೆಯಿದೆ. 


COMMERCIAL BREAK
SCROLL TO CONTINUE READING

ಒಂದು ವೇಳೆ ಆರಂಭಿಕ ಆಟಗಾರರಲ್ಲಿ ಬದಲಾವಣೆ ಮಾಡಿದರೆ ನಾಯಕ ರೋಹಿತ್‌ ಶರ್ಮಾ ಜೊತೆ ಈ ಆಟಗಾರ ಕಣಕ್ಕಿಳಿಯಲಿದ್ದಾರೆ. ಅತ್ಯುತ್ತಮ ಫಾರ್ಮ್‌ ಕಾಪಾಡಿಕೊಂಡು ಬರುತ್ತಿರುವ ದೀಪಕ್‌ ಹೂಡಾ ರೋಹಿತ್‌ ಶರ್ಮಾ ಜೊತೆ ಆಡಲಿದ್ದಾರೆ. 


ಇದನ್ನೂ ಓದಿ: Shani Transit 2022: ಶನಿಯ ಅನುಗ್ರಹದಿಂದ ಈ ರಾಶಿಯವರು 6 ತಿಂಗಳಲ್ಲಿ ಶ್ರೀಮಂತರಾಗುತ್ತಾರೆ..!


ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 8 ರನ್ ಗಳಿಸಿ ಔಟಾಗಿದ್ದರು. ಒಂದೆಡೆ ರೋಹಿತ್ ಶರ್ಮಾ ಬೌಂಡರಿಗಳನ್ನು ಸಿಡಿಸುತ್ತಿದ್ದರೆ, ಇಶಾನ್ ಕಿಶನ್‌ ಮಾತ್ರ ರನ್‌ ಕಲೆಹಾಕಲು ಹೆಣಗಾಡುತ್ತಿದ್ದರು. ಅಷ್ಟೇ ಅಲ್ಲದೆ, ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಐರ್ಲೆಂಡ್ ಪ್ರವಾಸದಲ್ಲಿಯೂ ಇಶಾನ್‌ ಯಶಸ್ವಿ ಆಟವಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಇಶಾನ್ ಕಿಶನ್ ಬದಲಿಗೆ ದೀಪಕ್ ಹೂಡಾ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. 


ದೀಪಕ್ ಹೂಡಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದರು. ದೀಪಕ್ ಹೂಡಾ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ವೇಗದ ಬ್ಯಾಟಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಜೊತೆಗೆ ಐರ್ಲೆಂಡ್ ಪ್ರವಾಸದಲ್ಲಿ, ದೀಪಕ್ ತನ್ನ ಬ್ಯಾಟಿಂಗ್ ಸಾಮಾರ್ಥ್ಯದಿಂದ ಎಲ್ಲರ ಮನಗೆದ್ದಿದ್ದರು. 


ರೋಹಿತ್ ಶರ್ಮಾ ಅವರು ಬ್ಯಾಟಿಂಗ್‌ನಲ್ಲಿ ಎಷ್ಟು ಅಪಾಯಕಾರಿಯಾಗಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಬೌಂಡರಿ ದಾಟಿ ಬಾಲ್‌ಗಳನ್ನು ಬ್ಯಾಟ್‌ ಮೂಲಕ ಎಸೆಯುವ ಪರಿಣಿತಿಯನ್ನು ಅವರು ಹೊಂದಿದ್ದಾರೆ.  ಹೀಗಾಗಿ ದೀಪಕ್ ಹೂಡಾ  ಶರ್ಮಾಗೆ ಜೊತೆಯಾದರೆ, ರನ್‌ ಮಳೆ ಸುರಿಸಬಹುದು ಎಂಬುದು ಲೆಕ್ಕಾಚಾರ. ಜೊತೆಗೆ ಟೀಂ ಇಂಡಿಯಾಗೆ ಹೊಸ ಆರಂಭಿಕ ಜೋಡಿ ಸಿಗಬಹುದು. 


ಇದನ್ನೂ ಓದಿ: ವರುಣನ ಆರ್ಭಟ: ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿ


2ನೇ T20ಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ:


ರೋಹಿತ್ ಶರ್ಮಾ (ನಾಯಕ), ದೀಪಕ್ ಹೂಡಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್ ಮತ್ತು ರವೀಂದ್ರ ಜಡೇಜಾ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ