ಏಷ್ಯನ್ ಗೇಮ್ಸ್ 2022ರ ಪದಕ ವಿಜೇತರಿಗೆ ಭಾರತ ಸರ್ಕಾರದಿಂದ ಭರ್ಜರಿ ಗಿಫ್ಟ್! 25 ಲಕ್ಷ ರೂ ಬಹುಮಾನ ಘೋಷಣೆ
Rajnath Singh announces prize for Asian Games medal winners: ರಕ್ಷಣಾ ಸಚಿವಾಲಯವು ಚಿನ್ನದ ಪದಕ ವಿಜೇತರಿಗೆ 25 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 15 ಲಕ್ಷ ರೂ. ಮತ್ತು ಕಂಚು ಪದಕ ವಿಜೇತರಿಗೆ 10 ಲಕ್ಷ ರೂ, ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ.
Rajnath Singh announces prize for Asian Games 2022 medal winners: ಹ್ಯಾಂಗ್’ಝೌ ಏಷ್ಯನ್ ಗೇಮ್ಸ್’ನಲ್ಲಿ ಪದಕ ಗೆದ್ದ ವಿಜೇತರ ಕಠಿಣ ಪರಿಶ್ರಮವನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರ್ಜರಿ ಬಹುಮಾನವನ್ನು ಘೋಷಿಸಿದ್ದಾರೆ. ಏಷ್ಯನ್ ಗೇಮ್ಸ್ ಪದಕ ವಿಜೇತರೊಂದಿಗಿನ ಸಂವಾದದಲ್ಲಿ ಮಾತನಾಡಿದ ರಕ್ಷಣಾ ಸಚಿವರು ಈ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಮುಂದಿನ 2 ದಿನ ಈ ಭಾಗಗಳಲ್ಲಿ ಬಿಡುವಿಲ್ಲದೆ ಸುರಿಯಲಿದೆ ಭಾರೀ ಮಳೆ: ಮಿಂಚು-ಗುಡುಗು ಸಹಿತ ಬಿರುಗಾಳಿ
ಪ್ರಕಟಣೆಯ ಪ್ರಕಾರ, ರಕ್ಷಣಾ ಸಚಿವಾಲಯವು ಚಿನ್ನದ ಪದಕ ವಿಜೇತರಿಗೆ 25 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 15 ಲಕ್ಷ ರೂ. ಮತ್ತು ಕಂಚು ಪದಕ ವಿಜೇತರಿಗೆ 10 ಲಕ್ಷ ರೂ, ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ.
''ಈ ಬಾರಿಯ ಏಷ್ಯನ್ ಗೇಮ್ಸ್’ನಲ್ಲಿ ಒಟ್ಟು 107 ಪದಕಗಳನ್ನು ಗೆದ್ದಿದ್ದೇವೆ. ಕಳೆದ ಬಾರಿ 2018ರ ಏಷ್ಯನ್ ಗೇಮ್ಸ್’ನಲ್ಲಿ 70 ಪದಕಗಳನ್ನು ಗೆದ್ದಿದ್ದೆವು. 70 ಪದಕಗಳಿಂದ 107 ಪದಕಗಳವರೆಗಿನ ಬೆಳವಣಿಗೆಯನ್ನು ಗಮನಿಸಿದರೆ. ಸುಮಾರು 50% ರಷ್ಟು ಏರಿಕೆ ಕಂಡಿದೆ. ಭಾರತವು ಚಂದ್ರನನ್ನೂ ತಲುಪಿದೆ. ವಿಶ್ವದ ದೊಡ್ಡ ಸಂಸ್ಥೆಗಳು ಭಾರತದ ಅಭಿವೃದ್ಧಿಯನ್ನು ಒಪ್ಪಿಕೊಳ್ಳುತ್ತಿವೆ. ಅದು ವಿಶ್ವ ಬ್ಯಾಂಕ್ ಅಥವಾ IMF ಆಗಿರಲಿ, ಭಾರತದ ಅಭಿವೃದ್ಧಿ ಪಯಣವನ್ನು ಎಲ್ಲೆಡೆ ಚರ್ಚಿಸಲಾಗುತ್ತಿದೆ” ಎಂದು ಸಂವಾದದಲ್ಲಿ ಸಿಂಗ್ ಹೇಳಿದರು.
ಇದನ್ನೂ ಓದಿ: 13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್!
"ಈ ಬಾರಿ ಏಷ್ಯನ್ ಗೇಮ್ಸ್‌ಗೆ ಮುಂಚೆಯೇ, ಪದಕಗಳ ಬಗ್ಗೆ ನಮ್ಮ ಘೋಷಣೆಯಾಗಿತ್ತು. ಅದುವೇ ‘ISSBAAR100PAAR' ಎಂದು. ಖಂಡಿತವಾಗಿಯೂ, ನೀವು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಮೇಲೆ ಕೆಲಸ ಮಾಡುವ ಮೂಲಕ ನಮ್ಮ ಕನಸನ್ನು ನನಸಾಗಿಸಿದ್ದೀರಿ. ಈ ಏಷ್ಯನ್ ಗೇಮ್ಸ್’ನಲ್ಲಿ ಇದುವರೆಗೆ ಪ್ರದರ್ಶನ ನೀಡಿ 107 ಪದಕಗಳನ್ನು ತಂದಿದೆ” ಎಂದು ಅವರು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್