Rishab Pant: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು 106 ರನ್‌’ಗಳಿಂದ ಸೋಲಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದಿಂದ ಸೋತ ನಂತರ ರಿಷಬ್ ಪಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿ ಕ್ಯಾಪಿಟಲ್ಸ್ (ಡಿಸಿ) ನಾಯಕ ರಿಷಬ್ ಪಂತ್‌ ಮಾಡಿದ ಆ ಒಂದು ತಪ್ಪಿನಿಂದ 24 ಲಕ್ಷ ರೂಪಾಯಿ ನಷ್ಟ ಅನುಭವಿಸಬೇಕಾಗಿ ಬಂದಿದೆ.


ಇದನ್ನೂ ಓದಿ: ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್’ಗೆ ಬಾಯ್ ಫ್ರೆಂಡ್ ಇದ್ದಾರಾ? ಕಡೆಗೂ ಸಿಕ್ಕೇಬಿಡ್ತು ಸ್ಪಷ್ಟ ಉತ್ತರ


ರಿಷಬ್ ಪಂತ್ ಐಪಿಎಲ್ ಪಂದ್ಯಕ್ಕೆ ನಿಷೇಧ?


ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಷಬ್ ಪಂತ್ 24 ಲಕ್ಷ ರೂ. ದಂಡ ತೆರಬೇಕಾಗಿದೆ. ಐಪಿಎಲ್ 2024 ರ ಸೀಸನ್’ನಲ್ಲಿ ರಿಷಬ್ ಪಂತ್ ಮಾಡಿರುವ ಎರಡನೇ ತಪ್ಪಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ರಿಷಬ್ ಪಂತ್ ಅವರಿಗೆ ಶಿಕ್ಷೆ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ 20 ಓವರ್‌ಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ವಿಫಲವಾಗಿತ್ತು. ಐಪಿಎಲ್ 2024 ರ ಋತುವಿನಲ್ಲಿ ಮತ್ತೊಮ್ಮೆ ಸ್ಲೋ ಓವರ್ ರೇಟ್‌ನಲ್ಲಿ ರಿಷಬ್ ಪಂತ್ ತಪ್ಪಿತಸ್ಥರೆಂದು ಕಂಡುಬಂದರೆ, ಅವರನ್ನು ಒಂದು ಐಪಿಎಲ್ ಪಂದ್ಯಕ್ಕೆ ನಿಷೇಧಿಸುವ ಸಾಧ್ಯತೆ ಇದ್ದು, ರೂ. 30 ಲಕ್ಷ ದಂಡ ವಿಧಿಸುವ ಸಂಭವವಿದೆ.


ಐಪಿಎಲ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಏಪ್ರಿಲ್ 3 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌’ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಆಡುವ ಹನ್ನೊಂದರ ಇತರ ಆಟಗಾರರಿಗೆ ತಲಾ ರೂ 6 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ.


ನಿಯಮಗಳ ಪ್ರಕಾರ, ಐಪಿಎಲ್ ಸೀಸನ್‌’ನಲ್ಲಿ ಮೂರನೇ ಬಾರಿಗೆ ಸ್ಲೋ ಓವರ್ ರೇಟ್‌ಗೆ ನಾಯಕ ತಪ್ಪಿತಸ್ಥರೆಂದು ಕಂಡುಬಂದರೆ, 30 ಲಕ್ಷ ರೂಪಾಯಿ ದಂಡದ ಹೊರತಾಗಿ, ನಾಯಕನಿಗೆ ಒಂದು ಐಪಿಎಲ್ ಪಂದ್ಯಕ್ಕೆ ನಿಷೇಧ ಹೇರಲಾಗುತ್ತದೆ. ಅದೇ ಸಮಯದಲ್ಲಿ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್‌’ನ ಆಡುವ ಹನ್ನೊಂದರ ಇತರ ಆಟಗಾರರಿಗೆ ತಲಾ ರೂ 6 ಲಕ್ಷ ಅಥವಾ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ.


ಇದನ್ನೂ ಓದಿ: IPL 2024: ಕೇಂದ್ರ ಒಪ್ಪಂದದಿಂದ ಹೊರಬಿದ್ದ ಬೆನ್ನಲ್ಲೇ ಅಬ್ಬರಿಸಿದ ಕ್ವಿಂಟನ್ ಡಿಕಾಕ್! IPLನಲ್ಲಿ ಸ್ಫೋಟಕ ಬ್ಯಾಟಿಂಗ್


ನಿಯಮಗಳ ಪ್ರಕಾರ, ತಂಡವು 90 ನಿಮಿಷಗಳಲ್ಲಿ 20 ಓವರ್‌’ಗಳನ್ನು ಪೂರ್ಣಗೊಳಿಸಬೇಕು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳನ್ನು ಬೌಲ್ ಮಾಡಲು 2 ಗಂಟೆ ತೆಗೆದುಕೊಂಡಿತು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ