PBKS vs DC Highlights: ಮಾರ್ಚ್ 23 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್‌’ಗಳಿಂದ ಪಂಜಾಬ್ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ IPL 2024 ಅನ್ನು ಗೆಲುವಿನ ಶುಭಾರಂಭ ಮಾಡಿದೆ.


COMMERCIAL BREAK
SCROLL TO CONTINUE READING

ಈ ಪಂದ್ಯ ಪಂಜಾಬ್‌’ನ ಹೊಸ ತವರು ಮೈದಾನವಾದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಈ ಗೆಲುವಿನಿಂದ ಪಂಜಾಬ್ 2 ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ನೇರವಾಗಿ ಎರಡನೇ ಸ್ಥಾನಕ್ಕೆ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಚೆನ್ನೈಗೂ 2 ಅಂಕವಿದೆ. ಆದರೆ ನೆಟ್ ರನ್ ರೇಟ್ ನಲ್ಲಿ ಪಂಜಾಬ್ ಗಿಂತ ಮುಂದಿದೆ.


ಇದನ್ನೂ ಓದಿ: ವಯಸ್ಸು 38, ಅವಳಿ ಮಕ್ಕಳ ತಂದೆ… ಈ ಕ್ರಿಕೆಟರ್ ತವರು ಚೆನ್ನೈ ಆದ್ರೂ IPLನಲ್ಲಿ ಆಡೋದು RCB ಪರ!! ಯಾರಿವರು ಗೊತ್ತಾಯ್ತ?


ಪಂಜಾಬ್‌’ನ ಮುಂದಿನ ಪಂದ್ಯ ಮಾರ್ಚ್ 25 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಲಿದೆ.


ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಡೆಲ್ಲಿ 20 ಓವರ್‌’ಗಳಲ್ಲಿ 8 ವಿಕೆಟ್‌’ಗೆ 174 ರನ್ ಗಳಿಸಿತು. ಉತ್ತರವಾಗಿ ಪಂಜಾಬ್ ತಂಡ 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 177 ರನ್ ಗಳಿಸಿ ಜಯ ಸಾಧಿಸಿತು. ಈ ವೇಳೆ ಸ್ಯಾಮ್ ಕರ್ರಾನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟಿಂಗ್‌’ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.


ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ 26 ರನ್ ಹಾಗೂ ನಾಯಕ ಶಿಖರ್ ಧವನ್ 22 ರನ್ ಗಳಿಸಿದರು. ತಲಾ 9 ರನ್ ಗಳಿಸಿದ ನಂತರ ಜಾನಿ ಬೈರ್‌ಸ್ಟೋವ್ ಮತ್ತು ಜಿತೇಶ್ ಶರ್ಮಾ ಔಟಾದರು. ಡೆಲ್ಲಿ ಪರ ಕುಲದೀಪ್ ಯಾದವ್ ಮತ್ತು ಖಲೀಲ್ ಅಹ್ಮದ್ ತಲಾ 2 ವಿಕೆಟ್ ಪಡೆದರು.


ಅಂದಹಾಗೆ ಪಂಜಾಬ್ ಗೆಲುವಿಗೆ ಎರಡು ಓವರ್ ಗಳಲ್ಲಿ 10 ರನ್ ಗಳಿಸಬೇಕಿತ್ತು. ಖಲೀಲ್ ಕೇವಲ 4 ರನ್ ನೀಡಿದರು. ಕೊನೆಯ ಎಸೆತದಲ್ಲಿ ವಾರ್ನರ್ ಕ್ಯಾಚ್ ಪಡೆದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಬಹುದಿತ್ತು.


ಅಭಿಷೇಕ್ ಪೊರೆಲ್ ಅದ್ಭುತ ಬ್ಯಾಟಿಂಗ್:


ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಪರ ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 32 ರನ್ ಗಳಿಸಿದ್ದರು. ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ 20ನೇ ಓವರ್ ನಲ್ಲಿ 25 ರನ್ ಗಳಿಸಿದರು. ಇವರಲ್ಲದೆ ಶಾಯ್ ಹೋಪ್ 33, ಡೇವಿಡ್ ವಾರ್ನರ್ 29, ಅಕ್ಷರ್ ಪಟೇಲ್ 21 ರನ್ ಗಳಿಸಿದರು. 15 ತಿಂಗಳ ನಂತರ ರಿಷಬ್ ಪಂತ್ ಕಂಬ್ಯಾಕ್ ಮಾಡಿದ್ದರೂ ಸಹ, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲಗಲ. ಇನ್ನು ಪಂಜಾಬ್ ಪರ ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.


ಇದನ್ನೂ ಓದಿ: ವಿಚ್ಛೇದಿತೆ ಮೇಲೆ ಲವ್… ಕಾನೂನು ಹೋರಾಟ ಮಾಡಿ ಆಕೆಯ ಪುತ್ರಿಯನ್ನೇ ದತ್ತು ಪಡೆದ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ ಮಾಂತ್ರಿಕನೀತ!


ಇನಿಂಗ್ಸ್‌ನ ಕೊನೆಯ ಓವರ್‌’ನಲ್ಲಿ ಹರ್ಷಲ್ ಪಟೇಲ್ ಎಸೆತದಲ್ಲಿ ಅಭಿಷೇಕ್ ಪೊರೆಲ್ ಸಾಕಷ್ಟು ರನ್ ಗಳಿಸಿದರು. ಅಭಿಷೇಕ್ ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಸಿಕ್ಸರ್, ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಹಾಗೂ ಐದನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಈ ಮೂಲಕ ಹರ್ಷಲ್ ಅವರ ಈ ಓವರ್ ನಲ್ಲಿ ಅಭಿಷೇಕ್ 25 ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ