ನವದೆಹಲಿ:  ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್  ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐದು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.



COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ  ಕೇವಲ 115 ರನ್ ಗಳನ್ನ ಅಷ್ಟೇ ಗಳಿಸಲು ಶಕ್ತವಾಯಿತು.ರಾಜಸ್ತಾನದ ಪರವಾಗಿ ರಿಯಾನ್ ಪರಾಗ್ ರೊಬ್ಬರು ಅರ್ಧಶತಕವನ್ನು ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 20 ರ ಗಡಿ ದಾಟಲಿಲ್ಲ.ಡೆಲ್ಲಿ ತಂಡದ ಪರ ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ  ತಲಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ರಾಜಸ್ತಾನ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.



ರಾಜಸ್ತಾನ ತಂಡವು ನೀಡಿದ 116 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ  ತಂಡವು ಆರಂಭದಲ್ಲಿ 28 ರನ್ ಗಳಾಗುವಷ್ಟರಲ್ಲಿ ಶಿಕರ್ ಧವನ್ ಹಾಗೂ ಪೃಥ್ವಿ ಷಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಆದರೆ ನಂತರ ರಿಶಬ್ ಪಂತ್ ಅವರ ಭರ್ಜರಿ ಅರ್ಧಶತಕ (53) ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಇದರಲ್ಲಿ ಅವರು ಭರ್ಜರಿ ಐದು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಗೆಲುವಿನ ಗುರಿ ತಲುಪುವಂತೆ ಮಾಡಿದರು.