Gopi Thonakal won the gold : ಅಪೋಲೋ ಟೈಯರ್ಸ್ ನವದೆಹಲಿ ಮ್ಯಾರಥಾನ್ ಚಾಂಪಿಯನ್ ಆಗಿ ಗೋಪಿ ಥೋನಕಲ್ ಅವರು 0.01 ಅಂತರದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು, ಹೊರಹೊಮ್ಮಿದ್ದಾರೆ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಭಾರಿ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಪ್ರತಿಸ್ಪರ್ಧಿ ಶ್ರೀನು ಭೂಗತಾರನ್ನು ಹಿಂದಕ್ಕಿ, ಗೋಪಿ ಥೋನಕಲ್ ಅವರು 0.01 ಅಂತರದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.  


ಇದಕ್ಕೂ ಮುನ್ನ 2 ಗಂಟೆ 14 ನಿಮಿಷ 59 ಸೆಕೆಂಡ್ ಅವರ ವೈಯಕ್ತಿಕ ಶ್ರೇಷ್ಠ ಎನಿಸಿತ್ತು. ಮತ್ತು 2 ಗಂಟೆ 15 ನಿಮಿಷ 27 ಸೆಕೆಂಡುಗಳಲ್ಲಿ ಓಟ ಪೂರೈಸಿದ ಅಕ್ಷಯ ಸೈನಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ರಾಷ್ಟ್ರೀಯ ಮ್ಯಾರ್ ಥಾನ್ ಇತ್ತಿಚಿಗೆ ನಡೆದ ಮ್ಯಾರ್ ಥಾನ್ ಗಳ ಸಾಲಿಗೆ ಸೇರ್ಪಡೆಗೊಂಡಿತು.


ಇದನ್ನು ಓದಿ :ಬಿಬಿಎಂಪಿ : ಘನತ್ಯಾಜ್ಯ ನಿರ್ವಹಣೆಗೆ ಕಾರ್ಯಕ್ಕೆ ಮತ್ತೆ ಟೆಂಡರ್


ಮಹಿಳಾ ವಿಭಾಗದಲ್ಲಿ ಅಶ್ವಿನಿ ಜಾಧವ್ ತನ್ನ ಹಿಂದಿನ ವೈಯಕ್ತಿಕ ಶ್ರೇಷ್ಠ (2:56.42) ದಾಖಲೆಗಿಂತ 4 ನಿಮಿಷ ಮುಂಚಿತವಾಗಿ ರೇಸ್ ಮುಕ್ತಾಯಗೊಳಿಸಿದರು. ಅವರು ಅತ್ಯಾಕರ್ಷಕ ಎನ್ನುವಂತೆ 2 ಗಂಟೆ 52 ನಿಮಿಷ 25ಸೆಕೆಂಡ್ಗಳಲ್ಲಿ ಓಟ ಮುಗಿಸಿ ಚಿನ್ನ ದ ಪದಕ ಬಾಚಿಕೊಂಡರು. ನಿರ್ಮಾಬೆನ್ ಥಾಕೋರ್ (2:55.47) ಹಾಗೂ ದಿವ್ಯಾಂಕ ಚೌಧರಿ (2:57.06) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.


.10 ಕಿ.ಮೀ . ಓಟ ವಿಭಾಗದಲ್ಲಿ ಉಮೇಶ್ 32 ನಿಮಿಷ 02 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನದ ಪದಕ ಗೆದ್ದರೆ, ಸಪನ್ಪಾಂಚಲ್ (32:50) ಹಾಗೂ ಅಬ್ದುಲ್ ರೆಹ್ಮಾನ್ (33:00) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. ಮಹಿಳೆಯರ ವಿಭಾಗದಲ್ಲಿ ರೋಜಿ (37:28) ಚಿನ್ನ ಕ್ಕೆ ಮುತ್ತಿಟ್ಟರೆ, ರಿಯಾಪಾಂಡೆ (43:04) ಹಾಗೂ ದೀಪಾಲಿ ಮಲ್ಹೋತ್ರಾ (43:44) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು


ಇದನ್ನು ಓದಿ :ನಾಳೆಯಿಂದ ಅಬುದಾಬಿಯಲ್ಲಿ  WTO 13ನೇ ಸಚಿವರ ಸಭೆ 


ಮ್ಯಾರಥಾನ್ ಓಟವು ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಸ್ಪರ್ಧಾತ್ಮಕವಾಗಿತ್ತು. ಪುರುಷ ಅಥ್ಲೀಟ್ಗಳು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ರೇಸ್ನಿರ್ದೇಶಕರೂ ಆದ ಎನ್ಇಬಿ ಸ್ಪೋರ್ಟ್ಸ್ ನ ಮುಖ್ಯಸ್ಥ ನಾಗರಾಜ್ ಅಡಿಗ ಹೇಳಿದರು. ‘ಎಲ್ಲಾ ಅಥ್ಲೀಟ್ಗಳಿಗೂ ನಮ್ಮ ಸಲ್ಯೂಟ್’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು


ಎಲ್ಲಾ ವಿಜೇತರಿಗೂ ಅಭಿನಂದನೆ ಹೇಳಲು ಇಚ್ಛಿಸುತ್ತೇನೆ. ದೆಹಲಿಯ ಜನತೆಗೂ ಧನ್ಯವಾದ ಹೇಳಲು ಬಯಸುತ್ತೇನೆ.19,000ಕ್ಕೂ ಹೆಚ್ಚು ಮಂದಿ ಈ ಓಟದಲ್ಲಿ ಪಾಲ್ಗೊಂಡಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಭಾಗವಹಿಸಿದ್ದನ್ನು ಕಂಡು ಬಹಳ ಸಂತೋಷವಾಯಿತು’ ಎಂದು ಅಪೋಲೋ ಟೈಯರ್ಸ್ನ ಏಷ್ಯಾ -ಪೆಸಿಫಿಕ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ಮುಖ್ಯಸ್ಥ ಸತೀಶ್ ಶರ್ಮಾ ಸಂತಸ ವ್ಯಕ್ತಪಡಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.