ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇಯ ಟೆಸ್ಟ್ ಕೊನೆಗೂ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.


COMMERCIAL BREAK
SCROLL TO CONTINUE READING

ಎರಡನೆಯ ಇನ್ನಿಂಗ್ಸ್ ನ ಆರಂಭದಲ್ಲಿ  ಶ್ರೀಲಂಕಾದ ಕರುಣಾರತ್ನೆ  ಸಮರವಿಕ್ರಮರವರ  ವಿಕೆಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿದ್ದ ಲಂಕಾ ದಂಡಕ್ಕೆ ಧನಂಜಯ ಡಿಸಿಲ್ವಾ 119, ರೋಶನ್ ಸಿಲ್ವಾ 74 ಹಾಗೂ ನಿರೋಶನ್ ದಿಕ್ವೆಲ್ಲಾರ 44 ರನ್ ಗಳನ್ನು ಗಳಿಸುವುದರ ಮೂಲಕ ಸೋಲುವಂತಿದ್ದ ತಂಡವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ನೆರವಾದರು. 


ಲಂಕಾ ತನ್ನ ಎರಡನೇಯ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ  299 ರನ್ ಗಳಿಸಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತು. ಇದರಿಂದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. 


ಈ ಸರಣಿಯ ಆರಂಭದಿಂದಲೂ ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ ಕೊಹ್ಲಿ ಈ ಸರಣಿಯಲ್ಲಿ ಎರಡು ದ್ವಿಶತಕವನ್ನು ಗಳಿಸಿದ್ದರು,ಆದ್ದರಿಂದ ಸಹಜವಾಗಿ ಅವರಿಗೆ ಈಗ ಪಂದ್ಯ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಂದಿದೆ.