IND vs AUS: ಅಂದು ಧೋನಿ, ಇಂದು ಹರ್ಮನ್: ಇದು ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿದ ನಾಯಕರ ರನ್ ಔಟ್ ದೃಶ್ಯ!
Harman Preet Run Out Scene: ಪಿಚ್‌ನಲ್ಲಿ ಬ್ಯಾಟ್ ಸಿಕ್ಕಿಹಾಕಿಕೊಂಡಿದ್ದರಿಂದ ಹರ್ಮನ್‌ಪ್ರೀತ್ ದುರದೃಷ್ಟಕರವಾಗಿ ಲೈನ್ ತಲುಪಲು ಸಾಧ್ಯವಾಗದೆ ರನ್ ಔಟ್ ಆದರು. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಗ್ಗೆ ಟ್ವೀಟ್ ಮಾಡಿದ್ದು, 2019 ರ ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ಅವರ ರನೌಟ್ ನೊಂದಿಗೆ ಹರ್ಮನ್‌ಪ್ರೀತ್ ರನೌಟ್ ಆಗಿರುವುದನ್ನು ಹೋಲಿಕೆ ಮಾಡಿದ್ದಾರೆ.
MS Dhoni and Harman Preet Run Out Scene: ಮಹಿಳಾ ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ವನಿತಾ ತಂಡ ಸೋಲನ್ನನುಭವಿಸಿತ್ತು. ಈ ಮೂಲಕ ವಿಶ್ವಕಪ್ ಎತ್ತಿಹಿಡಿಯುವ ಕನಸು ನನಸಾಗದೆ ಉಳಿಯಿತು. ಇವೆಲ್ಲದರ ಮಧ್ಯೆ ನಾಯಕಿ ಹರ್ಮನ್‌ಪ್ರೀತ್ ಕೌರ್ ರನೌಟ್ ಆದ ಸನ್ನಿವೇಶ ಅಭಿಮಾನಿಗಳ ಎದೆ ಒಡೆಯುವಂತೆ ಮಾಡಿದೆ.
ಇದನ್ನೂ ಓದಿ: T20 World Cup 2023: ವನಿತಾ ವಿಶ್ವಕಪ್ ಕನಸಿಗೆ ಭಗ್ನ: ಆಸೀಸ್ ವಿರುದ್ಧ ಸೋಲುಂಡ ಟೀಂ ಇಂಡಿಯಾ
ಪಿಚ್‌ನಲ್ಲಿ ಬ್ಯಾಟ್ ಸಿಕ್ಕಿಹಾಕಿಕೊಂಡಿದ್ದರಿಂದ ಹರ್ಮನ್‌ಪ್ರೀತ್ ದುರದೃಷ್ಟಕರವಾಗಿ ಲೈನ್ ತಲುಪಲು ಸಾಧ್ಯವಾಗದೆ ರನ್ ಔಟ್ ಆದರು. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಗ್ಗೆ ಟ್ವೀಟ್ ಮಾಡಿದ್ದು, 2019 ರ ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ಅವರ ರನೌಟ್ ನೊಂದಿಗೆ ಹರ್ಮನ್‌ಪ್ರೀತ್ ರನೌಟ್ ಆಗಿರುವುದನ್ನು ಹೋಲಿಕೆ ಮಾಡಿದ್ದಾರೆ.
“ಕ್ರೀಸ್‌ನಲ್ಲಿ ಪಂದ್ಯ ವಿಜೇತ ಮತ್ತು ಸೆಮಿಫೈನಲ್‌ನಲ್ಲಿ ರನ್ ಔಟ್. ಈ ಆಘಾತವನ್ನು ನಾವು ಮೊದಲು ಅನುಭವಿಸಿದ್ದೇವೆ. ಭಾರತವನ್ನು ಈ ಸನ್ನಿವೇಶದಲ್ಲಿ ನೋಡಲು ಬೇಸರವಾಗಿದೆ. ಆಟದಿಂದ ಹೊರಹೋಗುತ್ತಿದ್ದೇವೆ. ಆದರೆ ಆಸ್ಟ್ರೇಲಿಯಾವನ್ನು ಸೋಲಿಸಲು ಏಕೆ ಕಷ್ಟ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆತು. ಟೀಂ ಇಂಡಿಯಾ ವನಿತೆಯರು ಉತ್ತಮ ಪ್ರಯತ್ನ ಮಾಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಹರ್ಮನ್‌ಪ್ರೀತ್ 24 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಆಟದ ಮಧ್ಯಭಾಗದಲ್ಲಿಯೇ ರನ್ ಔಟ್ ಆಗಿ ಕ್ರೀಸ್ ನಿಂದ ಹೊರನಡೆದರು. ಈ ಬಳಿಕ ಟೀಂ ಇಂಡಿಯಾ ಸಂಪೂರ್ಣವಾಗಿ ತನ್ನ ಲಯ ಕಳೆದುಕೊಂಡಿತು.
ಇದನ್ನೂ ಓದಿ: IND vs AUS: ಭಾರತ-ಆಸ್ಟ್ರೇಲಿಯಾ ಸರಣಿಯ ನಡುವೆ ನಿವೃತ್ತಿ ಘೋಷಿಸಿದ ಆಟಗಾರ! ಅಭಿಮಾನಿಗಳು ಶಾಕ್
"ನಾನು ಮತ್ತು ಜೆಮಿ ಬ್ಯಾಟಿಂಗ್ ಮಾಡುವಾಗ ಆ ವೇಗವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕಿಂತ ದುರದೃಷ್ಟಕರ ಇನ್ನೊಂದಿಲ್ಲ. ನಾವು ಇಂದು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ರನೌಟ್ ಆದ ರೀತಿಯು ಅದಕ್ಕಿಂತ ದುರದೃಷ್ಟ” ಎಂದು ಪಂದ್ಯದ ಬಳಿಕ ಹರ್ಮನ್‌ಪ್ರೀತ್ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.