ನವದೆಹಲಿ: ಧೋನಿ ಅಂದ್ರೆನೇ ಹಾಗೆ ಯಾವುದೇ ಸದ್ದಿಲ್ಲದೆ ಪಂದ್ಯ ಗೆಲ್ಲುವತ್ತ ಚಿಂತಿಸುವುದಷ್ಟೇ ಅವರ ಕೆಲಸ. ಇಂತಹ ಕಾರ್ಯಗಳೇ ಅವರನ್ನು ಈಗ ಭಾರತ ತಂಡ ಯಶಸ್ವಿ ನಾಯಕ ಎನ್ನುವ ಖ್ಯಾತಿ ಗಳಿಸಿದ್ದಾರೆ.ಅದರ ಜೊತೆಗೆ ದಾಖಲೆಗಳು ಸಹಿತ ಸದ್ದಿಲ್ಲದೇ ಅವರ ಹೆಸರಿಗೆ ಸೇರುತ್ತಿವೆ. ಹಾಗಾದ್ರೆ ಈಗ ಅದ್ಯಾವ ದಾಖಲೆ ಅಂತಾ ಕೇಳುತ್ತಿರಾ? 


COMMERCIAL BREAK
SCROLL TO CONTINUE READING

ಐಪಿಎಲ್ ಟ್ವೆಂಟಿ-20 ಕ್ರಿಕೆಚ್ ಚಾಂಪಿಯನ್‌ಶಿಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಬಯಿ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ 150 ಬಾರಿ ತಂಡದ ನಾಯಕತ್ವ ವಹಿಸಿದ ದಾಖಲೆ ಮಾಡಿದ್ದಾರೆ.



ಐಪಿಎಲ್‌ನಲ್ಲಿ ಮೊದಲ ಎಂಟು ಆವೃತ್ತಿಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ ನಂತರ ಅವರು 2016ರ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ನಾಯಕರಾಗಿ ಗುರುತಿಸಿಕೊಂಡಿದ್ದರು. 36ರ ವರ್ಷ ವಯಸ್ಸಿನ ಧೋನಿ, ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ತಂಡದ ನಾಯಕ ಸ್ಥಾನಕ್ಕೆ ಮರಳಿ ಇಂದಿಗೂ ತಮ್ಮ ಅದ್ಬುತ ಫಾರ್ಮ್ ನ್ನು ಕಾಯ್ದುಕೊಂಡಿದ್ದಾರೆ.