ನವದೆಹಲಿ: ಐಪಿಎಲ್ ಫ್ರಾಂಚೈಸ್ ಮುಂಬೈ ಇಂಡಿಯನ್ಸ್  ತಂಡದಲ್ಲಿ ತಾವು ಯಾವುದೇ ರೀತಿಯ ಲಾಭ ಪಡೆದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಸಚಿನ್ ಮೇಲೆ ಹಿತಾಸಕ್ತಿ ವಿಚಾರವಾಗಿ ಬಂದಿರುವ ಆರೋಪಗಳ ಹಿನ್ನಲೆಯಲ್ಲಿ  ಓಂಬುಡ್ಸ್ಮನ್ ಕಮ್ ಎಥಿಕ್ಸ್ ಅಧಿಕಾರಿ ನ್ಯಾಯಮೂರ್ತಿ (ನಿವೃತ್ತ ) ಡಿ.ಕೆ. ಜೈನ್ ಅವರು ನೀಡಿದ ನೋಟಿಸ್ ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ರೀತಿಯ ಪರಿಹಾರವಾಗಲಿ ಅಥವಾ ನಿರ್ಣಾಯಕ ಪಾತ್ರವನ್ನು ತಾವು ವಹಿಸಿಲ್ಲ ಎಂದು 14 ಅಂಶಗಳ ಲಿಖಿತ ಉತ್ತರದಲ್ಲಿ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.


ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(ಎಂಪಿಸಿಎ) ಸದಸ್ಯ ಸಂಜೀವ್ ಗುಪ್ತಾ ಅವರು ಸಲ್ಲಿಸಿದ ದೂರಿನಲ್ಲಿ ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರು ಒಂದು ಕಡೆ ಐಪಿಎಲ್ ಫ್ರಾಂಚೈಸಿಸ್ ನ ಸಿಬ್ಬಂದಿಯಾಗಿ ಇನ್ನೊಂದು ಕಡೆ ಕ್ರಿಕೆಟ್ ಸಲಹಾ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.


ಈ ಹಿನ್ನಲೆಯಲ್ಲಿ ಈಗ ಈ ದೂರಿಗೆ ಸಚಿನ್ ಲಿಖಿತವಾಗಿ ಉತ್ತರ ನೀಡಿರುವ ಅವರು ಮುಂಬೈ ಇಂಡಿಯನ್ಸ್ ಐಪಿಎಲ್ ಫ್ರಾಂಚೈಸಿಯಿಂದ ನಿವೃತ್ತಿಯ ಬಳಿಕ ತಮಗೆ ಯಾವುದೇ ಲಾಭಾಂಶ / ಪರಿಹಾರವನ್ನು ನೀಡಿಲ್ಲ. ತಾವು ಫ್ರ್ಯಾಂಚೈಸ್ನೊಂದಿಗೆ ಯಾವುದೇ ರೀತಿಯಿಂದಲೂ ನೇಮಕವಾಗಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.