Dinesh Karthik Life Story: ಒಮ್ಮೊಮ್ಮೆ ಸಂಬಂಧಗಳು ಎಷ್ಟೇ ಗಟ್ಟಿಯಾಗಿದ್ದರೂ ಸಹ ಕ್ಲಿಷ್ಟಕರವಾಗಿ ಬದಲಾಗಬಹುದು. ಅಂತಹ ಸನ್ನಿವೇಶಗಳು ಆಸಕ್ತಿದಾಯಕವೆಂದು ತೋರುತ್ತದೆಯಾದರೂ ಬಹಳಷ್ಟು ನೋವುಂಟು ಮಾಡುತ್ತದೆ. ಇಂತಹದ್ದೇ ದುರಂತ ಕಹಾನಿಗಳು ಸ್ಟಾರ್ ಕ್ರಿಕೆಟಿಗನ ಜೀವನದಲ್ಲೂ ನಡೆದಿದೆ ಎಂದರೆ ನಂಬಲು ಸಾಧ್ಯವೇ? ಹೌದು ಅಂತಹ ಘಟನೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೀವನದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಪತ್ಭಾಂದವನಂತೆ ಅದೆಷ್ಟೋ ಪಂದ್ಯಗಳಲ್ಲಿ ಆಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸ್ವಂತ ಬಲದಿಂದ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಆದರೆ ಅವರ ವೈವಾಹಿಕ ಜೀವನ ಒಂದೊಮ್ಮೆ ಹಳಿ ತಪ್ಪಿದ ರೈಲಿನಂತಾಗಿತ್ತು ಎಂದರೆ ನಂಬೋಕೆ ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: Today Gold Rate: ಹಿಂದೆಂದೂ ಆಗಿರದಷ್ಟು ದರ ಏರಿಕೆ ಕಂಡ ಬಂಗಾರ! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ?


ದಿನೇಶ್ ಕಾರ್ತಿಕ್ ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು 2007 ರಲ್ಲಿ ವಿವಾಹವಾದರು. ಆಗ ದಿನೇಶ್ ಕಾರ್ತಿಕ್ ಗೆ 21 ವರ್ಷ. ನಿಕಿತಾ ಮತ್ತು ದಿನೇಶ್ ಅವರ ತಂದೆ ತುಂಬಾ ಒಳ್ಳೆಯ ಪರಿಚಯಸ್ಥರು. ಈ ಕಾರಣಕ್ಕೆ ಎರಡೂ ಮನೆಯವರು ಮಕ್ಕಳ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.


2012 ರಲ್ಲಿ ಅಂದರೆ ಮದುವೆಯಾದ ಐದು ವರ್ಷಗಳ ನಂತರ, ನಿಕಿತಾ ವಂಜಾರಾ ದಿನೇಶ್ ಕಾರ್ತಿಕ್ ಅವರ ಸ್ನೇಹಿತ ಮುರಳಿ ವಿಜಯ್ ಅವರನ್ನು ವಿವಾಹವಾದರು. ಇದರಿಂದಾಗಿ ದಿನೇಶ್ ಕಾರ್ತಿಕ್ ತೀವ್ರವಾಗಿ ಮನನೊಂದಿದ್ದರು ಎಂದು ಅವರ ಆಪ್ತಮೂಲಗಳು ಹೇಳಿದ್ದವು. 2012ರಲ್ಲಿ ತಮಿಳುನಾಡಿನಲ್ಲಿರುವಾಗ ದಿನೇಶ್ ಕಾರ್ತಿಕ್ ಗೆ ಈ ವಿಷಯ ತಿಳಿಯಿತಂತೆ. ಇದಾದ ನಂತರ ದಿನೇಶ್ ಕಾರ್ತಿಕ್ ನಿಕಿತಾ ವಂಜಾರರಿಂದ ವಿಚ್ಛೇದನ ಪಡೆದರು.


ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಮುರಳಿ ವಿಜಯ್ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಜನವರಿ 30, 2023 ರಂದು ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದಕ್ಕೂ ಮೊದಲು 4 ವರ್ಷಗಳಿಗೂ ಹೆಚ್ಚು ಕಾಲ ತಂಡದಿಂದ ಹೊರಗಿದ್ದರು. ಬಳಿಕ ಭಾರತೀಯ ಕ್ರಿಕೆಟ್ ತಂಡಕ್ಕೆ ಹಿಂತಿರುಗುವುದಿಲ್ಲ ಎಂದು ಘೋಷಣೆ ಮಾಡಿದರು.


ಮೈದಾನದಲ್ಲಿ ಲಾಂಗ್ ಸಿಕ್ಸರ್ ಬಾರಿಸಿ ಫೇಮಸ್ ಆಗಿರುವ ವಿಜಯ್ ಅವರ ವೈಯಕ್ತಿಕ ಜೀವನ ಕೂಡ ತುಂಬಾ ವಿಭಿನ್ನವಾಗಿದೆ. ಭಾರತ ಪರ 3 ವಿಶ್ವಕಪ್ ಆಡಿರುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ಯಾರಿಗೆ ಗೊತ್ತಿಲ್ಲ ಹೇಳಿ. ವಿಜಯ್ ಮತ್ತು ಕಾರ್ತಿಕ್ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಆದರೆ ಅವರ ಸ್ನೇಹ ಹೆಚ್ಚು ಕಾಲ ಉಳಿಯಲಿಲ್ಲ. ಇದಕ್ಕೆ ಕಾರಣ ವಿಜಯ್ ಮತ್ತು ಅವರ ಪತ್ನಿ ನಿಕಿತಾ ವಂಜಾರ ನಡುವೆ ಅರಳಿದ ಪ್ರೀತಿ. ವಿಜಯ್ ಗೆಳೆತನದ ಸಂಬಂಧದ ಬಗ್ಗೆ ಯೋಚಿಸದೆ ಕಾರ್ತಿಕ್ ಹೆಂಡತಿಯನ್ನು ಪ್ರೀತಿಸುತ್ತಿದ್ದರು. ವಿಜಯ್ ಅವರನ್ನು ನಿಕಿತಾಗೆ ಪರಿಚಯಿಸಿದ್ದು ದಿನೇಶ್. ಐಪಿಎಲ್ 5ನೇ ಸೀಸನ್ ಅಂದರೆ 2013ರಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು. ಆ ಸಮಯದಲ್ಲಿ ನಿಕಿತಾ ಅವರ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದರು.


ಐಪಿಎಲ್ ಸಮಯದಲ್ಲಿ ಭೇಟಿಯಾದ ನಂತರ ನಿಕಿತಾ ಮತ್ತು ವಿಜಯ್ ಉತ್ತಮ ಸ್ನೇಹಿತರಾಗಿದ್ದರು. ಇಬ್ಬರೂ ಪರಸ್ಪರರ ಒಡನಾಟವನ್ನು ಇಷ್ಟಪಡಲಾರಂಭಿಸಿದರು. ಈ ವಿಷಯ ತಿಳಿದ ಕಾರ್ತಿಕ್ ತೀವ್ರ ಆಘಾತಕ್ಕೊಳಗಾದರು. ಅದರ ಪರಿಣಾಮ ಅವರ ಆಟದ ಮೇಲೂ ಕಾಣುತ್ತಿತ್ತು. ಕಳಪೆ ಪ್ರದರ್ಶನದ ಕಾರಣ, ಅವರು ಸತತ ಎರಡು ಸೀಸನ್ ಗಳಲ್ಲಿ ವಿವಿಧ ತಂಡಗಳಿಗೆ ಆಡಬೇಕಾಯಿತು. 2014ರಲ್ಲಿ ದೆಹಲಿ ಹಾಗೂ 2015ರಲ್ಲಿ ಬೆಂಗಳೂರು ಪರ ಆಡಿದ್ದರು.


ವಿಜಯ್ ಮತ್ತು ನಿಕಿತಾ ಅವರ ಅನೈತಿಕ ಸಂಬಂಧ ಕಾರ್ತಿಕ್‌ ಗೆ ತಿಳಿದ ತಕ್ಷಣ, ಅವರು ವಿಚ್ಛೇದನ ನೀಡಿದರು. ವಿಚ್ಛೇದನದ ಸಮಯದಲ್ಲಿ ನಿಕಿತಾ ತಾಯಿಯಾಗಲಿದ್ದಾರೆ ಎಂದು ತಿಳಿದುಬಂತು. ಇದಾದ ನಂತರ ಆಕೆ ತಕ್ಷಣ ವಿಜಯ್ ನನ್ನು ಮದುವೆಯಾದಳು. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಈ ಘಟನೆಯ ನಂತರ ವಿಜಯ್ ಮತ್ತು ಕಾರ್ತಿಕ್ ನಡುವೆ ಸಾಕಷ್ಟು ಜಗಳ ನಡೆದಿತ್ತು. ಇಂತಹ ಘಟನೆ ದಿನೇಶ್ ಬದುಕಿನಲ್ಲಾದಾಗ ಬಹಳ ಕುಗ್ಗಿದ್ದರು. ಆದರೆ ಎರಡು ವರ್ಷಗಳ ನಂತರ ಆಗಸ್ಟ್ 2015 ರಲ್ಲಿ ಅಂತರರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ದಿನೇಶ್ ವಿವಾಹವಾದರು.


ಜಿಮ್ ಸಮಯದಲ್ಲಿ, ದಿನೇಶ್ ಕಾರ್ತಿಕ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾದರು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ, 2015ರಲ್ಲಿ ಮದುವೆಯಾಗಿದ್ದರು. ಇಬ್ಬರೂ ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು. ಈಗ ಈ ದಂಪತಿಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.


ಇದನ್ನೂ ಓದಿ: Rain Alert: ಮುಂದಿನ 48 ಗಂಟೆಗಳಲ್ಲಿ ಮತ್ತೆ ವರುಣಾರ್ಭಟ: ಗುಡುಗು ಸಹಿತ ಬಿರುಗಾಳಿಯ ಮುನ್ಸೂಚನೆ


ದೀಪಿಕಾ ಪಳ್ಳಿಕಲ್ ದಿನೇಶ್ ಕಾರ್ತಿಕ್ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದರು ಎನ್ನಬಹುದು. ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ ಕಳೆದ ವರ್ಷವಷ್ಟೇ ಅವಳಿ ಮಕ್ಕಳಿಗೆ ಪೋಷಕರಾದರು. ಈಗ ದಿನೇಶ್ ಕಾರ್ತಿಕ್ ತಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷವಾಗಿದ್ದಾರೆ, ಅವರು ಕ್ರಿಕೆಟ್‌ ನಲ್ಲೂ ಹೊಸ ಮೈಲಿಗಲ್ಲು ಸಾಧಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.