Dinesh Karthik on India's Unplayable bowler Mohammad Shami: ಟೀಂ ಇಂಡಿಯಾ ವಿಶ್ವದ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿದೆ. ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಆರಂಭಿಕ ಟೆಸ್ಟ್ ಪಂದ್ಯದ 1 ಮತ್ತು 3 ನೇ ದಿನದಂದು ಅದಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಸ್ಟಾರ್ ಬೌಲರ್ ಆಗಿದ್ದರೆ, ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ್ದರು. ಭಾರತವು ವೇಗದ ಬೌಲರ್‌ಗಳ ಪ್ರಬಲ ಘಟಕವನ್ನು ಹೊಂದಿದೆ. ಇದು ಸಾಗರೋತ್ತರ ಸರಣಿಗಳಲ್ಲಿ ತಂಡದ ಯಶಸ್ಸಿಗೆ ಸಹಾಯ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs PAK: ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಮಹಿಳಾ ಕ್ರಿಕೆಟಿಗರು: ಪಂದ್ಯದ ಬಳಿಕ ನಾಯಕಿ ಹೇಳಿದ್ದೇನು ಗೊತ್ತಾ?


ಭಾರತದ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, 'ರೈಸ್ ಆಫ್ ನ್ಯೂ ಇಂಡಿಯಾ' ಕಾರ್ಯಕ್ರಮದಲ್ಲಿ, ಮೊಹಮ್ಮದ್ ಶಮಿಯನ್ನು ಅವರು ಭಾರತೀಯ ತಂಡದಲ್ಲಿ ಎದುರಿಸಿದ "ಕಠಿಣ ಬೌಲರ್" ಎಂದು ಹೇಳಿದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಲೆಜೆಂಡ್‌ಗಳು ಸಹ ಶಮಿಯನ್ನು ದ್ವೇಷಿಸಿದ್ದಾರೆ ಎಂದು ಅವರು ಹೇಳಿದರು.


"ನಾನು ಶಮಿಗೆ ಒಂದು ಪದವನ್ನು ಬಳಸಬೇಕಾದರೆ ಅದು 'ಟಾರ್ಚರ್ ಶಮಿ' ಆಗಿರುತ್ತದೆ. ಏಕೆಂದರೆ ನನ್ನ ಇಡೀ ವೃತ್ತಿಜೀವನದಲ್ಲಿ ಅವರು ನೆಟ್ಸ್‌ನಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್. ಅವರು ಪಂದ್ಯದಲ್ಲೂ ನನ್ನನ್ನು ಒಂದೆರಡು ಬಾರಿ ಔಟ್ ಮಾಡಿದ್ದಾರೆ. ಆದರೆ ನೆಟ್ಸ್‌ನಲ್ಲಿ ಆಡಲು ಇಷ್ಟವಾಗುವುದಿಲ್ಲ. ಮೊದಲು ನನಗೆ ಮಾತ್ರ ಈ ಭಾವನೆ ಬರುತ್ತದೆ ಎಂದುಕೊಂಡಿದ್ದೆ, ಆ ಬಳಿಕ ಕೊಹ್ಲಿ, ರೋಹಿತ್ ಅವರ ಬಳಿ ಕೇಳಿದೆ. ಅವರೆಲ್ಲರೂ ಶಮಿ ಆಡುವುದನ್ನು ದ್ವೇಷಿಸುತ್ತಿದ್ದಾರೆ ಎಂದು ತಿಳಿಯಿತು” ಎಂದರು.  


ಇದನ್ನೂ ಓದಿ:  IND vs AUS: 2 ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್​ 11 ಫಿಕ್ಸ್‌.! ಕೆಎಲ್ ರಾಹುಲ್ ಔಟ್‌?


"ನೆಟ್ಸ್‌ನಲ್ಲಿ ಮೊಹಮ್ಮದ್‌ ಶಮಿ ಅವರ ಬೌಲಿಂಗ್‌ ವಿಶೇಷತೆ ಏನೆಂದರೆ, ಸೀಮ್‌ ಪಾಸಿಷನ್‌ ಹಾಗೂ ನ್ಯಾಚುರಲ್‌ ಲೆನ್ತ್‌. 6-8 ಮಿಟರ್‌ ಲೆನ್ತ್‌ ಹಾಕುವುದದಿಂದ ಕಾಟ್‌ ಬಿಹೈಂಡ್‌ ಅಥವಾ ಸ್ಲಿಪ್‌ಗೆ ಚೆಂಡು ಎಡ್ಜ್‌ ಆಗುವ ಸಾಧ್ಯತೆಯಿದೆ. ಕೆಲವೊಮ್ಮೆ ಅತ್ಯುತ್ತಮ ಲೆನ್ತ್‌ ಹಾಕಿದರೂ ಸಹ ವಿಕೆಟ್‌ ಪಡೆಯಲು ಸಾಧ್ಯವಾಗುವುದಿಲ್ಲ. ಸೀಮ್‌ನಲ್ಲಿ ಬೀಳುವ ಚೆಂಡಿನಲ್ಲಿ ಆಡುವುದು ತುಂಬಾ ಕಷ್ಟವಾಗುತ್ತದೆ” ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.