ನವದೆಹಲಿ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದು ಅದನ್ನು ಇಯೊನ್ ಮೋರ್ಗಾನ್ ಅವರಿಗೆ ಹಸ್ತಾಂತರಿಸಿದರು. 


COMMERCIAL BREAK
SCROLL TO CONTINUE READING

ಈ ನಿರ್ಧಾರವು ಅವರ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ ಎಂದು ಕಾರ್ತಿಕ್ ಹೇಳಿದರು. ಪಾಯಿಂಟ್ ಪಂದ್ಯಗಳಲ್ಲಿ ನೈಟ್ ರೈಡರ್ಸ್ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ, ಏಳು ಪಂದ್ಯಗಳಲ್ಲಿ ನಾಲ್ಕು ಜಯಗಳಿಸಿದೆ. ಕಾರ್ತಿಕ್ ಇದುವರೆಗಿನ ಏಳು ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಿದ್ದಾರೆ ಮತ್ತು ಬ್ಯಾಟ್‌ನೊಂದಿಗೆ ಫಾರ್ಮ್ ಹುಡುಕಲು ಹೆಣಗಾಡುತ್ತಿದ್ದಾರೆ.


ಐಪಿಎಲ್‌ನ ಅಗ್ರ 3 ವಿಕೆಟ್‌ಕೀಪರ್‌ಗಳಿವರು, ದಿನೇಶ್ ಕಾರ್ತಿಕ್ ಎಷ್ಟನೇ ಸ್ಥಾನದಲ್ಲಿದ್ದಾರೆ?


ವರದಿಗಳ ಪ್ರಕಾರ, ಕಾರ್ತಿಕ್ ಅವರು ಕೆಕೆಆರ್ ಮ್ಯಾನೆಜ್ ಮೆಂಟ್ ಗೆ ತಮ್ಮ ಬ್ಯಾಟಿಂಗ್ ಬಗ್ಗೆ ಗಮನಹರಿಸಲು ಒತ್ತು ನೀಡುವ ಹಿನ್ನಲೆಯಲ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಯಸಿರುವುದಾಗಿ ಹೇಳಿದ್ದಾರೆ "ತಂಡವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿರಿಸಿರುವ ಡಿಕೆ ಅವರಂತಹ ನಾಯಕರನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಅವರಂತಹ ಯಾರಾದರೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು" ಎಂದು ತಂಡದ ಸಿಇಒ ವೆಂಕಿ ಮೈಸೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಅವರ ನಿರ್ಧಾರದಿಂದ ನಮಗೆ ಆಶ್ಚರ್ಯವಾಗಿದ್ದರೂ, ಅವರ ಆಶಯಗಳನ್ನು ನಾವು ಗೌರವಿಸುತ್ತೇವೆ." ಎಂದರು.


ಧೋನಿ ಅವರ ನಂ.7 ಜರ್ಸಿಗೆ ನಿವೃತ್ತಿ ಘೋಷಿಸಲು ಬಿಸಿಸಿಐಗೆ ದಿನೇಶ್ ಕಾರ್ತಿಕ್ ಮನವಿ


'ಈ ಪಂದ್ಯಾವಳಿಯಲ್ಲಿ ಡಿಕೆ ಮತ್ತು ಇಯೊನ್ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಮತ್ತು ಇಯೊನ್ ನಾಯಕನಾಗಿ ಅಧಿಕಾರ ವಹಿಸಿಕೊಂಡರೂ, ಇದು ಪರಿಣಾಮಕಾರಿಯಾಗಲಿದೆ ಮತ್ತು ಈ ಪರಿವರ್ತನೆಯು ತಡೆರಹಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಮೈಸೂರು ಹೇಳಿದರು.


"ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಎಲ್ಲರ ಪರವಾಗಿ, ಕಳೆದ ಎರಡೂವರೆ ವರ್ಷಗಳಲ್ಲಿ ನಾಯಕನಾಗಿ ಡಿಕೆ ನೀಡಿದ ಎಲ್ಲ ಕೊಡುಗೆಗಳಿಗಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಇಯೊನ್ ಉತ್ತಮವಾಗಿ ಮುಂದುವರಿಯಬೇಕೆಂದು ಹಾರೈಸುತ್ತೇವೆ." ಎಂದರು