World Cup: ವಿಶ್ವಕಪ್ ಮುಡಿಗೇರಿಸಿಕೊಳ್ಳುವ ತಂಡಕ್ಕೆ ಸಿಗುವ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ
ಸಾಮಾನ್ಯವಾಗಿ ಟಿ20 ವಿಶ್ವಕಪ್ ಗೆಲ್ಲುವ ತನಕ ಮಾತ್ರ ಜನರು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡುತ್ತಾರೆ. ಆ ಬಳಿಕ ಗೆದ್ದ ತಂಡಗಳಿಗೆ ಲಭಿಸಿದ ಮೊತ್ತದ ಬಗ್ಗೆ ಅಷ್ಟೊಂದು ಗಮನ ಹರಿಸುವುದಿಲ್ಲ. ಆದರೆ ಗೆದ್ದ ತಂಡಗಳಿಗೆ ಲಭಿಸುವ ಮೊತ್ತದ ಬಗ್ಗೆ ಕೇಳಿದ್ರೆ ಒಂದು ಬಾರಿ ಶಾಕ್ ಆಗೋದು ಖಂಡಿತ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಪ್ರಾರಂಭವಾಗಲಿರುವ ಟಿ 20 ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ತಮ್ಮ ಟೀಂ ಘೋಷಣೆ ಮಾಡಿಕೊಂಡಿವೆ. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೂ ಸಹ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸದ್ಯ ನಿಮಗೆ ತಿಳಿದಿರದ ಒಂದು ವಿಚಾರದ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್ 2022 ರ ಟಾಪ್ 5 ಆಟಗಾರರ ಆಯ್ಕೆ ಪಟ್ಟಿಯಲ್ಲಿ ಭಾರತದ ಈ ಆಟಗಾರನಿಗೆ ಸ್ಥಾನ!
ಹೌದು, ಸಾಮಾನ್ಯವಾಗಿ ಟಿ20 ವಿಶ್ವಕಪ್ ಗೆಲ್ಲುವ ತನಕ ಮಾತ್ರ ಜನರು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡುತ್ತಾರೆ. ಆ ಬಳಿಕ ಗೆದ್ದ ತಂಡಗಳಿಗೆ ಲಭಿಸಿದ ಮೊತ್ತದ ಬಗ್ಗೆ ಅಷ್ಟೊಂದು ಗಮನ ಹರಿಸುವುದಿಲ್ಲ. ಆದರೆ ಗೆದ್ದ ತಂಡಗಳಿಗೆ ಲಭಿಸುವ ಮೊತ್ತದ ಬಗ್ಗೆ ಕೇಳಿದ್ರೆ ಒಂದು ಬಾರಿ ಶಾಕ್ ಆಗೋದು ಖಂಡಿತ.
ಟಿ20 ವಿಶ್ವಕಪ್ ನಲ್ಲಿ ಗೆದ್ದ ತಂಡಕ್ಕೆ 13 ಕೋಟಿ ರೂ. ಬಹುಮಾನ ಸಿಗಲಿದೆ. ಜೊತೆಗೆ ರನ್ನರ್ ಅಪ್ ತಂಡಕ್ಕೆ6.5 ಕೋಟಿ ರೂ. ಬಹುಮಾನ ನೀಡಲಾಗುತ್ತದೆ. ಒಟ್ಟಾರೆ ತಂಡಗಳ ಬಹುಮಾನಕ್ಕಾಗಿ ಬರೋಬ್ಬರಿ 45 ಕೋಟಿ ರೂ. ಮೀಸಲಿಡಲಾಗುತ್ತದೆ.
ಇದರ ಜೊತೆಗೆ ಸೆಮಿ ಫೈನಲ್ ನಲ್ಲಿ ಸೋತ ತಂಡಕ್ಕೆ 3.26 ಕೋಟಿ, ಸೂಪರ್ 12 ರೌಂಡ್ ನಿಂದ ಹೊರಗುಳಿಯುವ ತಂಡಕ್ಕೆ 57 ಲಕ್ಷ ರೂ ಬಹುಮಾನ ನೀಡಲಾಗುತ್ತದೆ. ಇದರ ಜೊತೆಗೆ ಮೂವತ್ತು ಪಂದ್ಯಗಳ ಪೈಕಿ ಪ್ರತಿ ಪಂದ್ಯ ಗೆಲ್ಲುವ ತಂಡಕ್ಕೆ 40 ಸಾವಿರ ಅಮೆರಿಕನ್ ಡಾಲರ್ (32 ಲಕ್ಷ ರೂ.) ನೀಡಲಾಗುತ್ತದೆ.
ಇದನ್ನೂ ಓದಿ:IND vs SA : ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ Playing 11 ಫೈನಲ್!
ಸದ್ಯ ಐಸಿಸಿ ಟಿ20 ವಿಶ್ವಕಪ್ ನಲ್ಲಿ 16 ದೇಶಗಳ ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ನಮೀಬಿಯಾ, ಸೌತ್ ಆಫ್ರಿಕಾ, ಶ್ರೀಲಂಕಾ, ನೆದರ್ ಲ್ಯಾಂಡ್, ಜಿಂಬಾಬ್ವೆ, ಐರ್ಲ್ಯಾಂಡ್, ವೆಸ್ಟ್ ಇಂಡೀಸ್, ಯುಎಇ, ಸ್ಕಾಟ್ ಲ್ಯಾಂಡ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.