ನವದೆಹಲಿ: ಭಾರತದ ಖ್ಯಾತ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯ ಕೂಡ ದ್ವಿಗುಣಗೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಮ್ಮ ಸರ್ಕಾರವೂ ಒಳ ಮೀಸಲಾತಿಯನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸುವ ನಿರೀಕ್ಷೆ ಇದೆ: ಸಚಿವ ಮುನಿಯಪ್ಪ


ಈಗಾಗಲೇ ಸುಮಾರು 40ಕ್ಕೂ ಅಧಿಕ ಕಂಪನಿಗಳು ಮನು ಭಾಕರ್ ಅವರನ್ನು ಸಂಪರ್ಕಿಸಿದ್ದು, ಈ ಮೊದಲು ತಮ್ಮ ಅನುಮೋದನೆಗಾಗಿ 20-25 ಲಕ್ಷ ರೂ ಚಾರ್ಜ್ ಮಾಡುತ್ತಿದ್ದ ಅವರು ಈಗ ಅವರ ಏಜೆನ್ಸಿ ಹೇಳುವಂತೆ ಅವರ ಶುಲ್ಕವು ಆರರಿಂದ ಏಳುಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ತಂಡವು "ಕಳೆದ 2-3 ದಿನಗಳಲ್ಲಿ ನಾವು ಸುಮಾರು 40 ಕ್ಕೂ ಅಧಿಕ ವಿಚಾರಣೆಗಳನ್ನು ಪಡೆದುಕೊಂಡಿದ್ದೇವೆ.ನಾವು ಇದೀಗ ದೀರ್ಘಾವಧಿಯ ಅಸೋಸಿಯೇಷನ್ ​​​​ಡೀಲ್‌ಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ' ಎಂದು ನೀರವ್ ತೋಮರ್ ಹೇಳಿದ್ದಾರೆ.


ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಲ್ಲಿರುವ ಪೇಯಿಂಗ್‌ ಗೆಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ


ಇನ್ನು ಮುಂದುವರೆದು ಮಾತನಾಡಿದ ಅವರು 'ಅವಳ ಬ್ರಾಂಡ್ ಮೌಲ್ಯವು ಸಹಜವಾಗಿ, ಐದರಿಂದ ಆರು ಪಟ್ಟು ಹೆಚ್ಚಾಗಿದೆ.ಆದ್ದರಿಂದ ನಾವು ಮೊದಲು ಮಾಡುತ್ತಿರುವುದು 20-25 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿತ್ತು, ಈಗ ಅದು ಒಂದು ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂಪಾಯಿಗೆ ತಲುಪಿದೆ.1 ತಿಂಗಳು, 3 ತಿಂಗಳುಗಳ ಕಡಿಮೆ ಅವಧಿಯ ಬಹಳಷ್ಟು ಡಿಜಿಟಲ್-ಎಂಗೇಜ್‌ಮೆಂಟ್ ಗಳು ಸಹ ಇವೆ.ಆದರೆ ನಾವು ದೀರ್ಘಾವಧಿಯ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ 'ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.