Rabada Viral Video: ಸಲ್ಮಾನ್ ಖಾನ್ ಗೊತ್ತಾ? ಎಂದ ನಿರೂಪಕಿಗೆ ರಬಾಡ ಕೊಟ್ಟ ರಿಪ್ಲೇ ನೋಡಿ...
Rabada Viral Video: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವೇಗದ ಬೌಲರ್ ಕಗಿಸೊ ರಬಾಡ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.
Rabada Viral Video: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವೇಗದ ಬೌಲರ್ ಕಗಿಸೊ ರಬಾಡ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ವಾಸ್ತವವಾಗಿ, ಈ ವಿಡಿಯೋದಲ್ಲಿ, ಸಂಭಾಷಣೆಯ ಸಮಯದಲ್ಲಿ ರಬಾಡಾ ಹಿಂದಿ ಚಲನಚಿತ್ರ ಸಂಭಾಷಣೆಗಳನ್ನು ಮಾತನಾಡುತ್ತಿದ್ದಾರೆ. ಈ ವೇಳೆ ಆ್ಯಂಕರ್ ರಬಾಡ ಅವರನ್ನು ನಿಮಗೆ ಸಲ್ಮಾನ್ ಖಾನ್ ಗೊತ್ತಾ ಎಂದು ಕೇಳಿದಾಗ ಪ್ರತಿಕ್ರಿಯೆಯಾಗಿ ಅವರು ಕೊಟ್ಟ ಉತ್ತರಕ್ಕೆ ಆಂಕರ್‌ಗಳು ಆಶ್ಚರ್ಯಚಕಿತರಾದರು.
ಇದನ್ನೂ ಓದಿ: ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರಲಿದ್ದಾರೆಯೇ ರಾಹುಲ್ ದ್ರಾವಿಡ್..!
ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಕ್ಕೂ ಮುನ್ನ ವಿದೇಶಿ ಆಟಗಾರರು ಬಾಲಿವುಡ್ ಸಿನಿಮಾದ ಡೈಲಾಗ್ ಹೇಳಿ ಮಿಂಚಿದ್ದಾರೆ. ಇದರಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಆಲ್ ರೌಂಡರ್ ಕಗಿಸೊ ರಬಾಡ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಕಗಿಸೊ ರಬಾಡ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ.
ಐಪಿಎಲ್ ಆ್ಯಂಕರ್ ಒಬ್ಬರು ಕೇಳಿದ ಪ್ರಶ್ನೆಗೆ ರಬಾಡ ನೀಡಿರುವ ಎಪಿಕ್ ಉತ್ತರ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ರಬಾಡಾ ನೀಡಿದ ಉತ್ತರ ಬೇಸರ ತರಿಸಿದೆ. ಐಪಿಎಲ್ ನಿರೂಪಕಿ ರಬಾಡ ಬಳಿ, ನಿಮಗೆ ಸಲ್ಮಾನ್ ಖಾನ್ ಗೊತ್ತಾ? ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ನೀಡುವ ರಬಾಡ ಗೊತ್ತಿಲ್ಲ, ನನಗೆ ರಶೀದ್ ಖಾನ್ ಮಾತ್ರ ಗೊತ್ತು ಎಂದು ಫನ್ನಿಯಾಗಿ ಉತ್ತರಿಸುತ್ತಾರೆ. ಈ ಉತ್ತರ ಕೇಳಿದ ಆ್ಯಂಕರ್ ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: 5 ಬಾರಿ IPL ಕಪ್ ಗೆದ್ದ ಮುಂಬೈ ಇಂಡಿಯನ್ಸ್ ಸತತ ಸೋಲಿಗೆ ಕಾರಣವೇನು..?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.