ಇಂಡಿಯಾ ಟೆಸ್ಟ್ ಕ್ಯಾಪ್ ಮಹತ್ವ ಏನ್ ಗೊತ್ತಾ? ಯಶಸ್ಸಿನಲ್ಲಿ ಈ ತಂದೆಯ ಕಣ್ಣೀರು..!
ಕೆಲವು ಭಾವನೆಗಳೇ ಹಾಗೆ ಅವುಗಳನ್ನು ಯಾವ ಪದಗಳಲ್ಲಿಯೂ ಸಹ ವರ್ಣಿಸಲಸಾಧ್ಯ, ಅಂತಹದ್ದೇ ಒಂದು ಘಟನೆಯ ಕುರುಹಾಗಿ ಆ ತಂದೆಯ ಆನಂದಭಾಷ್ಪಗಳು ಹೇಳುತ್ತಿವೆ.ಹೌದು, ಈಗ ನಾವು ನಿಮಗೆ ಹೇಳಹೊರಟಿರುವುದು ರಾಜ್’ಕೋಟ್’ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮುಂಬೈ ಹುಡುಗ ಸರ್ಫರಾಜ್ ಖಾನ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಕೈಯಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸುತ್ತಾ ಇದ್ರೆ, ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ತಂದೆಯ ಕಣ್ಣಲ್ಲಿ ಕಣ್ಣೀರು ಹರಿಯುತ್ತಿದ್ದ ದೃಶ್ಯದ ಬಗ್ಗೆ
ದೂರದ ಉತ್ತರಪ್ರದೇಶದಿಂದ ಮುಂಬೈಗೆ ವಲಸೆ ಬಂದು ಅಲ್ಲೇ ಬದುಕು ಕಟ್ಟಿಕೊಂಡಿದ್ದ ನೌಶಾದ್ ಖಾನ್, ತಮ್ಮ ಇಬ್ಬರೂ ಮಕ್ಕಳನ್ನು ಕ್ರಿಕೆಟ್ ಆಟಗಾರರನ್ನಾಗಿಸುವ ಕನಸು ಕಂಡವರು.ಇದರ ಭಾಗವಾಗಿ ಅವರು ಸ್ವತಃ ಕ್ರಿಕೆಟ್ ಕೋಚ್ ಆಗಿ ಮಕ್ಕಳಿಗೆ ಅವರೇ ಗುರುವಿನಂತಾಗಿದ್ದರು.
ಇದನ್ನೂ ಓದಿ: PINEWZನಲ್ಲಿ ಲೋಕಸಭೆ ಚುನಾವಣಾ ಸರ್ವೇ: ದೇಶದ ಪ್ರತಿಯೊಬ್ಬರೂ ಭಾಗವಹಿಸುವ ಸುವರ್ಣಾವಕಾಶ
ಸರ್ಫರಾಜ್ ಖಾನ್ ಹಿರಿಮಗ.. ಸಣ್ಣವನು ಮೊನ್ನೆ ಮೊನ್ನೆಯಷ್ಟೇ ಅಂಡರ್-19 ವಿಶ್ವಕಪ್’ನಲ್ಲಿ ಆಡಿದ ಮುಶೀರ್ ಖಾನ್. ಇಬ್ಬರೂ ಆಟಗಾರರು ಪ್ರತಿಭಾಸಂಪನ್ನರಾಗಿದ್ದಾರೆ. ಈ ಸರ್ಫರಾಜ್ ಖಾನ್ ತನ್ನ 11ನೇ ವರ್ಷದಲ್ಲೇ ಸಚಿನ್ ತೆಂಡೂಲ್ಕರ್ ಅವರ ಶಾಲಾ ದಾಖಲೆಯೊಂದನ್ನು ಪುಡಿಗಟ್ಟಿದ್ದ ಪ್ರತಿಭೆ. ಶಾಲಾ ಟೂರ್ನಿಯ ಪಂದ್ಯವೊಂದರ ಒಂದೇ ಇನ್ನಿಂಗ್ಸ್’ನಲ್ಲಿ 439 ರನ್ ಗಳಿಸಿ ಸುದ್ದಿಯಾಗಿದ್ದ ಸರ್ಫರಾಜ್, 15ನೇ ವಯಸ್ಸಲ್ಲೇ ಮುಂಬೈ ಪರ ರಣಜಿ ಪಂದ್ಯವಾಡಿದ್ದ.
ಹುಡುಗರಲ್ಲಿ ಟ್ಯಾಲೆಂಟ್ ಇದೆ ಅಂದ್ರೆ ಸಾಕು, ಅವಕಾಶ ನೀಡೋದ್ರಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಸದಾ ಮುಂದು. ಇಲ್ಲಿ ವಯಸ್ಸು, ಅನುಭವದ ಹಂಗಿಲ್ಲದೆ ರಣಜಿ ಪಂದ್ಯಗಳಲ್ಲೇ ಅಲ್ಲಿ ಅವಕಾಶ ನೀಡ್ತಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ ಅಂಥಾ ಒಂದು ಸಂಪ್ರದಾಯ ಇರೋದ್ರಿಂದ್ಲೇ ಕ್ರಿಕೆಟ್ ಜಗತ್ತಲ್ಲಿ ಸಚಿನ್ ತೆಂಡೂಲ್ಕರ್ ಅವರಂಥಾ ದಿಗ್ಗಜ ಆಟಗಾರರು ಹುಟ್ಟಿದ್ದು.
ಅಂತಹ ದಿಗ್ಗಜ ಪ್ರತಿಭೆಗಳ ಸಾಲಿನಲ್ಲಿ ಈಗ ಬಂದಿರುವ ಸರ್ಫರಾಜ್ ಖಾನ್ ಮುಂಬೈನಿಂದ ಬಂದ ದೈತ್ಯ ಪ್ರತಿಭೆ,ರಣಜಿ ಟ್ರೋಫಿಯಲ್ಲಿ ರನ್ ಹೊಳೆಯನ್ನೇ ಹರಿಸಿ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾದು ಕೂತಿದ್ದಾಗ ಅವಕಾಶ ಸಿಕ್ಕಿರಲಿಲ್ಲ. ಹುಡುಗ ಹತಾಶನಾಗಿದ್ದ, ಟ್ರ್ಯಾಕ್ ತಪ್ಪಿದ್ದ. ಆದ್ರೆ ಇದೆಲ್ಲದರ ನಡುವೆಯೂ ತಂದೆ ನೌಶಾದ್ ಖಾನ್ ಮಗನಿಗೆ ದೃಢವಾಗಿ ಬೆಂಬಲ ನೀಡಿದರು. ಮುಂದೊಂದು ದಿನ ತನ್ನ ಮಗನಿಗೆ ಅವಕಾಶ ಹುಡುಕಿಕೊಂಡು ಬಂದೆ ಬರುತ್ತದೆ ಎನ್ನುವ ಬಲವಾದ ನಂಬಿಕೆ ಅವರದ್ದಾಗಿತ್ತು.ಸಣ್ಣವನಿದ್ದಾಗಲೇ ವಯಸ್ಸಿನ ವಂಚನೆಯ ಆರೋಪಕ್ಕೆ ಗುರಿಯಾಗಿದ್ದ ಈ ಹುಡುಗ, ಅಶಿಸ್ತಿನ ನಡವಳಿಕೆಯಿಂದ ಸುದ್ದಿಯಾಗಿದ್ದ ಹುಡುಗ. “ದಪ್ಪಗಿದ್ದಾನೆ, ಇವನೇನು ಆಡಿಯಾನು” ಎಂದು ಅಪಹಾಸ್ಯ ಮಾಡುತ್ತಿದ್ದರು. ಹೀಗೇ ಇದ್ರೆ, ಇವನು ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಮರೆತು ಬಿಡಬೇಕೆಂದು ಸುನಿಲ್ ಗವಾಸ್ಕರ್ ಅವರೇ ಒಮ್ಮೆ ಹೇಳಿದ್ದಿದೆ.
ಇದನ್ನೂ ಓದಿ: Electoral Bonds: ಏನಿದು ಎಲೆಕ್ಟೋರಲ್ ಬಾಂಡ್ ಯೋಜನೆ.. ಸುಪ್ರೀಂ ಕೋರ್ಟ್ ರದ್ದುಗೊಳಿಸಲು ಕಾರಣ ಏನು?
ಸರ್ಫರಾಜ್ ಖಾನ್ ಎಲ್ಲಾ ಅಡೆತಡೆಗಳನ್ನು ದಾಟಿ, ಈಗ ಟೀಮ್ ಇಂಡಿಯಾದ ಪರವಾಗಿ ಟೆಸ್ಟ್ ಆಡಿಯೇ ಬಿಟ್ಟಿದ್ದಾನೆ. ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕವನ್ನು ಸಿಡಿಸಿ ತಮ್ಮ ಪ್ರತಿಭೆಯನ್ನು ಸಾಭೀತುಪಡಿಸಿದ್ದಾನೆ. ಈಗ ಟೆಸ್ಟ್ ಕ್ಯಾಪ್ ಪಡೆದಾಗ ಆನಂದಭಾಷ್ಪ ಸುರಿಸಿದ್ದ ಆ ತಂದೆಗೆ ಡಬಲ್ ಸಂಭ್ರಮ ಎಂದರೆ ತಪ್ಪಾಗಲಾರದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.