ನವದೆಹಲಿ: ಹೌದು, ಭಾರತ ತಂಡವು ಅಂತಿಮ ಪಂದ್ಯದಲ್ಲಿ ಸೋತಿರಬಹುದು, ಆದರೆ ಈಗ ಆ ಅಂತಿಮ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಶಬ್ ಪಂತ್ ನಾವ್ಯಾರು ಗಮನಿಸದೆ ಇರುವ ಒಂದು ದಾಖಲೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹಾಗಾದರೆ ಆ ದಾಖಲೆ ಯಾವುದು ಎಂದು ಕೇಳುತ್ತಿರಾ? ಅವರು ಈಗ  ಟೆಸ್ಟ್ ಕ್ರಿಕೆಟ್ ಪಂದ್ಯವೊಂದರಲ್ಲಿ ಅದರಲ್ಲೂ ನಾಲ್ಕನೇ ಇನ್ನಿಂಗ್ಸ್ ನಲ್ಲಿ  ಶತಕಗಳಿಸಿದ ಏಕೈಕ  ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ಗೈದಿದ್ದಾರೆ. 



ಇಂಗ್ಲೆಂಡ್ ವಿರುದ್ದ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮತ್ತು ರಿಶಬ್ ಪಂತ್ ಇಬ್ಬರು ಭರ್ಜರಿ ಶತಕಗಳಿಸುವುದರ ಮೂಲಕ ಗೆಲುವಿನ ಗಡಿಗೆ ತಂದು ನಿಲ್ಲಿಸಿದ್ದರು. ಆದರೆ ಇವರ ವಿಕೆಟ್ ಪತನದ ನಂತರ ತಂಡವು ಸೋಲಿನ ಸುಳಿಗೆ ಸಿಲುಕಿತು. 


ಇದುವರೆಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ರಿಶಪ್ ಪಂತ್ ಬಿಟ್ಟರೆ ಎಂ.ಎಸ್ ಧೋನಿ 76 ರನ್ ಗಳಿಸಿರುವುದು ಅತ್ಯಧಿಕ ಮೊತ್ತವಾಗಿದೆ. ಉಳಿದಂತೆ ಪಾರ್ಥಿವ್ ಪಟೇಲ್ 67, ದೀಪ ದಾಸಗುಪ್ತಾ,63 ರನ್ ಗಳಿಸಿದ್ದಾರೆ.