Kichcha Sudeep Watch Price: ಸೆಲೆಬ್ರಿಟಿಗಳು ಏನೇ ಕೆಲಸ ಮಾಡಿದರೂ ಕೂಡ ಸುದ್ದಿಯಾಗುತ್ತದೆ. ಅಷ್ಟೇ ಅಲ್ಲದೆ, ಅವರ ದಿನಗಳಕೆಯ ವಸ್ತುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಅಭಿಮಾನಿಗಳ ಕುತೂಹಲವೂ ಆಗಿರುತ್ತದೆ. ಸೆಲೆಬ್ರಿಟಿಗಳು ಧರಿಸುವ ಬಟ್ಟೆ, ವಾಚ್, ಶೂ, ಚೈನ್​ ಹೀಗೆ ಹಲವಾರು ವಿಚಾರಗಳ ಬಗ್ಗೆ ಗಮನ ಹರಿಸುವ ಫ್ಯಾನ್, ಅವುಗಳ ಬೆಲೆಯನ್ನು ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಹುಡುಕಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಚ್ಚರಿ ಹೊರ ಹಾಕುತ್ತಾರೆ. ಈಗ ಇಂಥದ್ದೇ ವಿಚಾರಕ್ಕೆ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸುದ್ದಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: ಜಡೇಜಾರಿಂದಾಗಿ ಟೀಂ ಇಂಡಿಯಾದ ಈ ಆಟಗಾರನ ಕೆರಿಯರ್ ಅಂತ್ಯ!?


ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಅಭಿಮಾನಿ ಬಳಗ ಬಹಳಷ್ಟು ದೊಡ್ಡದಿದೆ. ಇದೀಗ ಅವರು ಧರಿಸುವ ವಾಚ್ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಇನ್ನು ಕಿಚ್ಚ ಧರಿಸಿದ ಈ ವಾಚ್ ನ ಬೆಲೆ ಕೇಳಿದರೆ ಶಾಕ್ ಆಗೋದು ಖಂಡಿತ.


ಕಿಚ್ಚ ಸುದೀಪ್​ ಬಳಿ ಕಾರು ಹಾಗೂ ಬೈಕ್​’ಗಳ ಅಮೋಘ ಕಲೆಕ್ಷನ್ ಇದೆ. ನಟ ಕೇವಲ ನಟನೆ ಮಾತ್ರವಲ್ಲದೆ ಕ್ರೀಡೆಯ ಕಡೆ ಹೆಚ್ಚು ಕ್ರೇಜ್​ ಹೊಂದಿದ್ದಾರೆ. ಇವೆಲ್ಲದರ ಜೊತೆ ಕಿಚ್ಚ ವಾಚ್​ ಪ್ರಿಯರು ಎಂಬುದು ನಿಮಗೆ ತಿಳಿದಿದೆಯೇ? ಅವರ ಬಳಿ ಸಾಕಷ್ಟು ದುಬಾರಿ ವಾಚ್’​ಗಳಿವೆ ಎಂಬುದು ಅನೇಕರಿಗೆ ತಿಳಿಯದ ಸಂಗತಿ.


ಕಿಚ್ಚ ಸುದೀಪ್​ ಚಿತ್ರರಂಗದಲ್ಲಿ ಅಮೋಘ 27 ವರ್ಷ ಪೂರೈಸಿದ್ದಾರೆ. ಸಿನಿರಂಗ ಹೊರತು ಪಡಿಸಿದರೆ ಅವರು ಹೆಚ್ಚು ಇಷ್ಟಪಡೋದು ಕ್ರಿಕೆಟ್. ಇತ್ತೀಚೆಗೆ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಪ್ರೆಸ್ ಮೀಟ್ ನಡೆಸಿದ ಸಂದರ್ಭದಲ್ಲಿ ಕಿಚ್ಚನ ಕೈಯಲ್ಲಿ ಕೆಂಪುಬಣ್ಣದ ವಾಚ್ ಒಂದು ಕಂಡುಬಂದಿತ್ತು. ಇದು ರಿಚರ್ಡ್ ಮಿಲ್ಲೆ ಬ್ರಾಂಡ್ ವಾಚ್ ಆಗಿದೆ. ಇದರ ಬೆಲೆ ಸುಮಾರು ಒಂದು ಕೋಟಿಯಿಂದ ಪ್ರಾರಂಭವಾಗುತ್ತದೆ. ಎರಡು, ಮೂರು ಕೋಟಿ ಕೂಡ ಇದೆ. ಆದರೆ ಕಿಚ್ಚ ಧರಿಸಿದ ವಾಚ್ ಬೆಲೆ ನಿಖರವಾಗಿ ತಿಳಿದಿಲ್ಲ.  


ಕಿಚ್ಚ ಸ್ಯಾಂಡಲ್ ವುಡ್ ನ ಸ್ಟೈಲಿಶ್ ಐಕಾನ್ ಎಂದೂ ಹೇಳಬಹುದು. ಇನ್ನು ಕಿಚ್ಚನಿಗೆ ರಿಚರ್ಡ್ ಮಿಲ್ಲೆ ಬ್ರಾಂಡ್ ಅಂದರೆ ಇಷ್ಟ ಎಂದನಿಸುತ್ತೆ. ಇದಕ್ಕೆ ಪ್ರಮುಖ ಕಾರಣ, ಅವರು ಎಲ್ಲೇ ಹೋದರು ಈ ಬ್ರಾಂಡ್ ವಾಚ್ ಧರಿಸುತ್ತಾರೆ. ಆದರೆ ಒಂದೇ ವಾಚ್, ಬಟ್ಟೆ ಧರಿಸುವುದು ಬಹಳ ಕಡಿಮೆ.


ಇದನ್ನೂ ಓದಿ: T20 World Cup 2023: ವನಿತಾ ವಿಶ್ವಕಪ್ ಕನಸಿಗೆ ಭಗ್ನ: ಆಸೀಸ್ ವಿರುದ್ಧ ಸೋಲುಂಡ ಟೀಂ ಇಂಡಿಯಾ


ಸದ್ಯ ಕಿಚ್ಚ ಮುಂದಿನ ಸಿನಿಮಾ ಯಾವುದು ಅಂತಾ ತಿಳಿದಿಲ್ಲ. ಕೆಲ ಮೂಲಗಳ ಪ್ರಕಾರ ಅನೂಪ್ ಭಂಡಾರಿ ಹೊಸ ಸಿನಿಮಾ ತೆಗೆಯುತ್ತಿದ್ದು, ಅದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ತಮಿಳಿನ ನಿರ್ದೇಶಕ ವೆಂಕಟೇಶ್ ಪ್ರಭು ಜೊತೆಯೂ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಎಷ್ಟು ಸತ್ಯ ಎಂಬುದು ಮುಂದೆ ತಿಳಿಯಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ