ಪಾಕಿಸ್ತಾನದ ನದೀಮ್ ಬಗ್ಗೆ ನೀರಜ್ ಚೋಪ್ರಾ ತಾಯಿ ಹೇಳಿದ್ದೇನು ಗೊತ್ತೇ? ಆ ತಾಯಿ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ...!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 40 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 40 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ
ಪಾಕಿಸ್ತಾನ ಕೊನೆಯದಾಗಿ 1984ರಲ್ಲಿ ಚಿನ್ನದ ಪದಕ ಗೆದ್ದಿತ್ತು. ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.ಈ ಬಾರಿ ಅವರು ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿದ್ದಾರೆ.ಇದರಿಂದಾಗಿ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆ ಮೂಲಕ ಈಗ ಅವರು ಪಾಕಿಸ್ತಾನದ 32 ವರ್ಷಗಳ ಒಲಿಂಪಿಕ್ ಪದಕದ ಬರವನ್ನು ಅರ್ಷದ್ ನದೀಮ್ ಕೊನೆಗೊಳಿಸಿದ್ದಾರೆ.ಇದಕ್ಕೂ ಮೊದಲು ಅಂದರೆ ಕೊನೆಯ ಬಾರಿ ಪಾಕಿಸ್ತಾನ 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ಹಾಕಿ ಕಂಚಿನ ಪದಕ ಗೆದ್ದಿತ್ತು.
ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿವೆ ಖಚಿತ ಪರಿಹಾರಗಳು!
ನೀರಜ್ ತಾಯಿ ಹೇಳಿದ್ದೇನು:
ನೀರಜ್ ಚೋಪ್ರಾ ಅವರ ತಾಯಿ ಶುಕ್ರವಾರ ನನ್ನ ಮಗನ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.ಈ ಕುರಿತಾಗಿ ಎಎನ್ಐ ಗೆ ಪ್ರತಿಕ್ರಿಯಿಸಿರುವ ಅವರು ತಮ್ಮ ಮಗನ ಒಲಿಂಪಿಕ್ಸ್‌ನಲ್ಲಿನ ಪ್ರದರ್ಶನದಿಂದ ಸಂತೋಷವಾಗಿದೆ ಮತ್ತು ಅವನು ಹಿಂದಿರುಗಿದಾಗ ತನ್ನ ಮಗನಿಗೆ ನೆಚ್ಚಿನ ಊಟವನ್ನು ತಯಾರಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.ಇನ್ನೂ ಮುಂದುವರೆದು ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ಹೊಗಳಿದ್ದು, ಅವರು ತಮ್ಮ ಮಗನಿದ್ದಂತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Weight Loss: ಮುಂಜಾನೆ ಈ ಪಾನೀಯಗಳನ್ನು ಕುಡಿಯುವುದರಿಂದ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್
ಇನ್ನೊಂದೆಡೆಗೆ ಮಗನ ಪ್ರದರ್ಶನದ ಬಗ್ಗೆ ಮಾತನಾಡಿದ ತಂದೆ ಸತೀಶ್ ಕುಮಾರ್ 'ಪ್ರತಿಯೊಬ್ಬರಿಗೂ ಅವರ ದಿನವಿದೆ, ಇಂದು ಪಾಕಿಸ್ತಾನದ ದಿನವಾಗಿತ್ತು.ಆದರೆ ನಾವು ಬೆಳ್ಳಿ ಗೆದ್ದಿದ್ದೇವೆ ಮತ್ತು ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ಯಾರಿಸ್‌ನಲ್ಲಿ ನೀರಜ್ ಅವರ ಸಾಧನೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.ನೀರಜ್ ಚೋಪ್ರಾ ಅವರ ಅಜ್ಜ ಧರ್ಮಸಿಂಗ್ ಚೋಪ್ರಾ ಕೂಡ ಮೊಮ್ಮಗನ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ನೀರಜ್ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಖಾತೆಗೆ ಮತ್ತೊಂದು ಪದಕವನ್ನು ಸೇರಿಸಿದ್ದಾರೆ. 26 ವರ್ಷದ ನೀರಜ್ ಚೋಪ್ರಾ ಅವರ ಎರಡನೇ ಥ್ರೋ ದಲ್ಲಿ 89.45 ಮೀಟರ್ ದೂರವನ್ನು ಎಸೆದರು, ಇದು ಋತುವಿನ ಅವರ ಅತ್ಯುತ್ತಮ ಎಸೆತವಾಗಿದೆ. ಇದಕ್ಕೂ ಮುನ್ನ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ