Who is India best coach: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಟೀಂ ಇಂಡಿಯಾದ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ. 2000 ರಿಂದ ಎಂಟನೇ ಪೂರ್ಣ ಸಮಯದ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಅವಧಿಯಲ್ಲಿ ಜಾನ್ ರೈಟ್‌ʼನಿಂದ ಹಿಡಿದು ರಾಹುಲ್ ದ್ರಾವಿಡ್ ತನಕ ಎಲ್ಲರೂ ಟೀಮ್ ಇಂಡಿಯಾಗೆ ಕೋಚ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ ಒಟ್ಟು ಆಸ್ತಿ ಎಷ್ಟು ಗೊತ್ತಾ?


ಇನ್ನು ಭಾರತ ತಂಡದ ಅತ್ಯುತ್ತಮ ಕೋಚ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಕೆಲವರು ಗ್ಯಾರಿ ಕರ್ಸ್ಟನ್ ಹೆಸರನ್ನು ತೆಗೆದುಕೊಂಡರೆ, ಇನ್ನೂ ಕೆಲವರು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೂಚಿಸುತ್ತಾರೆ. ಕರ್ಸ್ಟನ್ ಅವರ ಕೋಚಿಂಗ್ ಅಡಿಯಲ್ಲಿ, ಟೀಮ್ ಇಂಡಿಯಾ 2011 ರ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಅಂತೆಯೇ ರಾಹುಲ್ ದ್ರಾವಿಡ್ 2024 ರ ಟಿ 20 ವಿಶ್ವಕಪ್‌ʼನಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದರು. 


ನ್ಯೂಜಿಲೆಂಡ್‌ನ ಜಾನ್ ರೈಟ್ 2000ದಿಂದ 2005 ರವರೆಗೆ ಭಾರತದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಭಾರತವು ಎಲ್ಲಾ ಮೂರು ಮಾದರಿಗಳಲ್ಲಿ 182 ಪಂದ್ಯಗಳನ್ನು ಆಡಿದ್ದು, 89 ಗೆಲುವು ಸಾಧಿಸಿದ್ದರೆ, 71 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜಾನ್ ರೈಟ್ ಅವರ ವಿಜಯದ ಶೇಕಡಾವಾರು 48.9 ಆಗಿದೆ.


ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ 2005ರಿಂದ 2007 ರವರೆಗೆ  ಭಾರತದ ಕೋಚ್ ಹುದ್ದೆಯಲ್ಲಿದ್ದರು. ಅವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ 81 ಪಂದ್ಯಗಳನ್ನು ಆಡಿದೆ. ಅದರಲ್ಲಿ 40 ಪಂದ್ಯಗಳನ್ನು ಗೆದ್ದಿದ್ದರೆ, 31 ಪಂದ್ಯಗಳಲ್ಲಿ ಸೋತಿದೆ. ಗ್ರೆಗ್ ಚಾಪೆಲ್ ಅವರ ಗೆಲುವಿನ ಶೇಕಡಾವಾರು 49.4 ಆಗಿದೆ.


ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ 2008 ರಿಂದ 2011 ರವರೆಗೆ ಭಾರತದ ಕೋಚ್ ಆಗಿದ್ದರು. ಇವರ ತರಬೇತಿಯಲ್ಲಿ ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್ ಗೆದ್ದಿತ್ತು. ಇನ್ನು ಭಾರತ 144 ಪಂದ್ಯಗಳನ್ನು ಆಡಿದ್ದು 85ರಲ್ಲಿ ಗೆಲುವು ಸಾಧಿಸಿದೆ. 44 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಟ್ಟಾರೆ ಅವರ ಗೆಲುವಿನ ಶೇಕಡಾವಾರು 59 ಆಗಿದೆ.


ಜಿಂಬಾಬ್ವೆಯ ಡಂಕನ್ ಫ್ಲೆಚರ್ ಅವರು 2011 ರಿಂದ 2015 ರವರೆಗೆ ಭಾರತದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಟೀಂ ಇಂಡಿಯಾ 171 ಪಂದ್ಯಗಳಲ್ಲಿ 92 ಗೆಲುವು ಸಾಧಿಸಿದೆ. 62 ಪಂದ್ಯಗಳಲ್ಲಿ ಸೋಲು ಎದುರಿಸಬೇಕಾಯಿತು. ಭಾರತದ ಗೆಲುವಿನ ಶೇಕಡಾವಾರು 53.8 ಆಗಿತ್ತು.


ಭಾರತದ ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ 2016 ರಿಂದ 2017 ರವರೆಗೆ ಕೋಚ್ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಭಾರತ 37 ಪಂದ್ಯಗಳಲ್ಲಿ 23 ಗೆಲುವು ಸಾಧಿಸಿದ್ದರೆ, 8 ಪಂದ್ಯಗಳಲ್ಲಿ ಸೋತಿತ್ತು. ಕುಂಬ್ಳೆ ಅವರ ಕೋಚಿಂಗ್‌ನಲ್ಲಿ ಗೆಲುವಿನ ಶೇಕಡಾವಾರು 62.1 ಆಗಿತ್ತು.


ಕುಂಬ್ಳೆ ನಂತರ ರವಿಶಾಸ್ತ್ರಿ 2017ರಿಂದ 2021 ರವರೆಗೆ ಈ ಹುದ್ದೆಯಲ್ಲಿದ್ದರು. ಶಾಸ್ತ್ರಿ ಅವರ ತರಬೇತಿಯಲ್ಲಿ ಟೀಂ ಇಂಡಿಯಾ 184 ಪಂದ್ಯಗಳನ್ನಾಡಿದ್ದು, 121 ಗೆಲುವು ಸಾಧಿಸಿದೆ. 53 ಪಂದ್ಯಗಳಲ್ಲಿ ಸೋಲು ಎದುರಿಸಿದೆ. ಈ  ಮೂಲಕ ಭಾರತದ ಗೆಲುವಿನ ಶೇಕಡಾವಾರು 65.8 ಆಗಿತ್ತು.


ಇದನ್ನೂ ಓದಿ:  ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್‌ ಗಾಯಕ್ವಾಡ್‌ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆ


2021ರಲ್ಲಿ ರವಿಶಾಸ್ತ್ರಿ ನಂತರ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೋಚ್ ಆದರು. ದ್ರಾವಿಡ್ ಅವರ ತರಬೇತಿಯಲ್ಲಿ ಟೀಮ್ ಇಂಡಿಯಾ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ʼನಲ್ಲಿ ಮತ್ತು ODI ವಿಶ್ವಕಪ್‌ʼನ ಫೈನಲ್‌ಗೆ ತಲುಪಿತು. ಆ ಬಳಿಕ 2024ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಕೋಚ್ ಆಗಿದ್ದ ಅವಧಿಯಲ್ಲಿ ಭಾರತ 144 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 103 ಪಂದ್ಯಗಳನ್ನು ಗೆದ್ದಿದ್ದರೆ, 36 ಸೋಲು ಕಂಡಿದೆ. ಇವರ ಅವಧಿಯಲ್ಲಿ ಭಾರತದ ಗೆಲುವಿನ ಶೇಕಡಾವಾರು 71.5 ಆಗಿತ್ತು. ಈ ಮೂಲಕ ಟೀಂ ಇಂಡಿಯಾ ಇತಿಹಾಸದಲ್ಲಿ ರಾಹುಲ್‌ ದ್ರಾವಿಡ್ ಅವರನ್ನು ಬೆಸ್ಟ್‌ ಕೋಚ್‌‌ ಎಂದೇ ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.