ವಿರಾಟ್ ಕೊಹ್ಲಿ ಪ್ರಕಾರ ಟೀಂ ಇಂಡಿಯಾದ ಅತ್ಯಂತ ಸಂಪ್ರದಾಯಸ್ತ ಆಟಗಾರ ಯಾರು ಗೊತ್ತಾ? ದಿನಕ್ಕೆ ಐದು ಬಾರಿ ದೇವರ ಪೂಜೆ ಮಾಡ್ತಾರಂತೆ!!
Virat Kohli: ಕಳೆದ ಎರಡು ಬಾರಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ... 2021 ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. 2023ರಲ್ಲಿ ಎರಡನೇ ಬಾರಿಗೆ ಆಸ್ಟ್ರೇಲಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಟ್ರೋಫಿ ಗೆಲ್ಲುವ ಕನಸನ್ನು ಮುರಿದಿತ್ತು.
Virat Kohli on Cheteshwar Pujara: ಕಳೆದ ಎರಡು ಬಾರಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ... 2021 ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. 2023ರಲ್ಲಿ ಎರಡನೇ ಬಾರಿಗೆ ಆಸ್ಟ್ರೇಲಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಟ್ರೋಫಿ ಗೆಲ್ಲುವ ಕನಸನ್ನು ಮುರಿದಿತ್ತು.
ಚೇತೇಶ್ವರ ಪೂಜಾರ ಅವರು ಟೆಸ್ಟ್ ಮಾದರಿಯಲ್ಲಿ ಭಾರತಕ್ಕಾಗಿ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಆದರೆ, ಕೆಲ ಸಮಯದಿಂದ ಚೇತೇಶ್ವರ ಪೂಜಾರ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಮತ್ತೊಮ್ಮೆ ಬಲಿಷ್ಠ ಪುನರಾಗಮನ ಮಾಡಲು ದೇಶೀಯ ಕ್ರಿಕೆಟ್‌ನಲ್ಲಿ ಶ್ರಮಿಸುತ್ತಿದ್ದಾರೆ. ಚೇತೇಶ್ವರ ಪೂಜಾರ ಭಾರತ ಪರ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿ.. ಅಂದಿನಿಂದ ಈ ಸ್ವರೂಪದಲ್ಲಿ ಭಾರತೀಯ ತಂಡದ ಅತ್ಯುತ್ತಮ ಆಟಗಾರರಾಗಿ ಉಳಿದಿದ್ದಾರೆ.
ಇದನ್ನೂ ಓದಿ: ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ!
ಚೇತೇಶ್ವರ ಪೂಜಾರ ಬಗ್ಗೆ ವಿರಾಟ್ ಕೊಹ್ಲಿ ದೊಡ್ಡ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು.. ಭಾರತ ತಂಡದಲ್ಲಿ ಅತ್ಯಂತ ಸಭ್ಯ ಆಟಗಾರ ಯಾರು ಎಂದು ಅವರನ್ನು ಕೇಳಲಾಯಿತು? ಇದಕ್ಕೆ ವಿರಾಟ್ ಕೊಹ್ಲಿ ಚೇತೇಶ್ವರ ಪೂಜಾರ ಎಂದು ಉತ್ತರಿಸಿ... ಅವರಿಗಿಂತ ಹೆಚ್ಚು ಸಭ್ಯ ಆಟಗಾರನನ್ನು ನಾನು ನೋಡಿಲ್ಲ ಎಂದಿದ್ದರು..
"ಚೇತೇಶ್ವರ ಪೂಜಾರ ಅವರು ದಿನಕ್ಕೆ ಐದು ಬಾರಿ ದೇವರನ್ನು ಪೂಜಿಸುತ್ತಾರೆ.. ಅಲ್ಲದೇ ಅವರ ಪತ್ನಿ ಹೆಸರು ಪೂಜಾ ಅದಕ್ಕೆ ಅವರು ಸಭ್ಯ, ಸಂಪ್ರದಾಯಸ್ತ ಆಟಗಾರ" ಎಂದು ವಿರಾಟ್ ಹೇಳಿದ್ದರು.. ಚೇತೇಶ್ವರ ಪೂಜಾರ ಅವರ ಈ ವಿಷಯ ತಿಳಿದು ಅಲ್ಲಿದ್ದ ನವಜೋತ್ ಸಿಂಗ್ ಸಿಧು ಕೂಡ ಜೋರಾಗಿ ನಗುತ್ತಾರೆ.
ಇದನ್ನೂ ಓದಿ: ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ